ಮುಟ್ಟಿನ ಸಮಯದಲ್ಲಿ ಆಗುವಂತಹ ಹೊಟ್ಟೆ ನೋವಿಗೆ ಮನೆಮದ್ದು!

ಪ್ರತಿಯೊಬ್ಬ ಹೆಣ್ಣಿಗೂ ಸ್ವಭಾವಿಕವಾಗಿ ಋತುಸ್ರವದಲ್ಲಿ ಸ್ವಲ್ಪ ಮಟ್ಟಿಗೆ ಹೊಟ್ಟೆ ನೋವು ಕಾಣಿಸುತ್ತದೆ. ಕೆಲವರಿಗೆ ಹೊಟ್ಟೆ ನೋವು ಕಾಲು ಸೆಳೆತ ಸೊಂಟ ನೋವು ಕಾಣಿಸುತ್ತದೆ. ಋತುಸ್ರವ ಪ್ರಾರಂಭವಾದ ನಂತರ ತಂತಾನೆ ಕಡಿಮೆ ಆಗುತ್ತದೆ. ಮಾಸಿಕ ಋತುಚಕ್ರದಲ್ಲಿ ಕಾಣಿಸುವ ಈ ನೋವು ಋತು ಶ್ರವ ಶುರುವಾದ ಒಂದೆರಡು ದಿನದ ಮುಂಚೇ ಶುರುವಾಗುತ್ತದೇ ಮತ್ತು ಮೂರು ದಿನದವರೆಗೆ ನೋವು ಇರುತ್ತದೆ. ಈ ಋತುಸ್ರವವನ್ನು ಕೆಲವು ಮನೆಮದ್ದುಗಳಿಂದ ಕಡಿಮೆ ಮಾಡಿಕೊಳ್ಳಬಹುದು.

ಮೊದಲನೇಯದಾಗಿ ಕೆಲವರಿಗೆ ಕ್ರಮೇಣವಾಗಿ ಕಡಿಮೆ ಆಗುತ್ತದೆ ಹಾಗು ಮದುವೆ ಅದಬಳಿಕ ಕಡಿಮೆ ಆಗುತ್ತದೆ. ಇನ್ನು ಮಾನಸಿಕ ಸಮಸ್ಸೆ ಇರುವವರಿಗೆ ಹಾಗು ಚಿಕ್ಕ ಪುಟ್ಟ ವಿಷಯಕ್ಕೆ ತುಂಬಾ ಯೋಚನೆ ಮಾಡುವವರಲ್ಲಿ ಕಾಣಿಸುತ್ತದೆ. ಆದ್ದರಿಂದ ಎಷ್ಟು ಸಾಧ್ಯವಾದಷ್ಟು ಅಷ್ಟು ನಿಮ್ನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಯಾವುದರ ಬಗ್ಗೆ ಕೂಡ ಹೆಚ್ಚಗಿ ಚಿಂತೆಯನ್ನು ಮಾಡಬೇಡಿ.

ಇನ್ನು ಈ ಹೊಟ್ಟೆ ನೋವಿಗೆ ಸೋಪಿನ ಕಾಳು ಅತ್ಯುತ್ತಮ ಔಷಧಿ ಗುಣಗಳನ್ನು ಹೊಂದಿದೆ. ಮಹಿಳೆಯರಲ್ಲಿ ಹಾರ್ಮೋನ್ ಗಳ ಸಮಾತೋಲನವನ್ನು ಪುನಃ ಸ್ಥಾಪಿಸಲು ಸಹಾಯ ಮಾಡುವ ಮೂಲಕ ಮುಟ್ಟಿಗೆ ಸಂಬಂಧಿಸಿದ ಸೆಳೆತ ಹಾಗು ನೋವುಗಳನ್ನು ನೀವಾರಿಸುತ್ತದೆ. ಸೋಪಿನ ಕಾಳು ನೈಸರ್ಗಿಕವಾಗಿ ಮೂತ್ರವರ್ಧಕ ಹಾಗು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಸೋಪಿನ ಕಾಳನ್ನು ಊಟದ ನಂತರ ಅಥವಾ ಖಾಲಿ ಹೊಟ್ಟೆಯಲ್ಲಿ ಹಗೆಯಬಹುದು. ತಿನ್ನಲು ಇಷ್ಟ ಪಡದವರು ಸೊಪ್ಪಿನ ಕಷಾಯ ಅಥವಾ ಸೋಪಿವಿನ ನೀರನ್ನು ಸೇವಿಸಬಹುದು.

ಇನ್ನು ಮುಟ್ಟಿನ ನೋವಿಗೆ ಜೀರಿಗೆ ಕೂಡ ತುಂಬಾ ಒಳ್ಳೆಯದು. ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತ ಆಯಾಸ ಕಡಿಮೆ ಆಗುತ್ತದೆ.

ಇನ್ನು ಕರಿ ಎಳ್ಳು ಜಜ್ಜಿ ಪುಡಿ ಮಾಡಿ ನೀರಿನಲ್ಲಿ ಹಾಕಿ ನೀವು ಕುಡಿಯಬಹುದು ಅಥವಾ ಕರಿ ಎಳ್ಳನ್ನು ಉರಿದುಕೊಂಡು ಪುಡಿ ಮಾಡಿ ಒಂದು ಲೋಟ ನೀರಿಗೆ ಕಾಲು ಚಮಚ ಕರಿ ಎಳ್ಳಿನ ಪುಡಿ ಹಾಕಿ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಅಥವಾ ಒಂದು ಬಾರಿ ಸೇವಿಸಿದರೆ ಮುಟ್ಟಿನ ನೋವಿನ ಸಮಸ್ಸೆ ಕಡಿಮೆ ಆಗುವುದು. ಆದಷ್ಟು ಹಣ್ಣು ತರಕಾರಿ ಸೇವನೆ ಮಾಡಿ ಹಾಗು ಕಾಫೀ ಟೀ ಕುಡಿಯುವುದನ್ನು ತಪ್ಪಿಸಿ.

Related Post

Leave a Comment