ದೇವರ ದೀಪಕ್ಕೆ ಎಷ್ಟು ಬತ್ತಿ ಹಾಕಿದರೆ ಏನು ಫಲ! ಎಷ್ಟು ಎಣ್ಣೆ ಬಳಸಬೇಕು!

ದೇವರ ಪೂಜೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ತುಪ್ಪ ಅಥವಾ ಎಣ್ಣೆಯ ದೀಪ ಬೆಳಗುವ ಸಂಪ್ರದಾಯ ರೂಢಿಯಲ್ಲಿದೆ. ಪೂಜೆ ವೇಳೆ ಯಾವ ದೀಪ ಹಚ್ಚಬೇಕು. ಎಷ್ಟು ಬತ್ತಿಯನ್ನು ಹಚ್ಚಬೇಕು ಎಂಬುದು ಸರಿಯಾಗಿ ತಿಳಿದುಕೊಳ್ಳಬೇಕು.ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ ಇಂತಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ ನೆಮ್ಮದಿ ಶಾಂತಿಯನ್ನು ತುಂಬಬಲ್ಲದು “ಇಪ್ಪೆ ಎಣ್ಣೆ” ದೇವರಿಗೆ ತುಂಬಾ ಶ್ರೇಷ್ಠ ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನ ದರಿದ್ರ, ಅನ್ನ ದರಿದ್ರ ಇತ್ಯಾದಿ ಹಾಗೂ ಸಾಲದ ಬಾಧೆ ನಿವಾರಣೆಯಾಗುತ್ತದೆ ಗೃಹ ಕಲಾಪವು ನಿಂತು ಹೋಗುತ್ತದೆ.

ಯಾವುದೇ ರೀತಿಯ ಆರ್ಥಿಕ ಲಾಭಕ್ಕಾಗಿ ನಿಯಮಿತ ರೂಪದಲ್ಲಿ ದೇವರ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಜಾತಕದಲ್ಲಿ ದೋಷ ಕಂಡು ಬಂದರೆ ಭೈರವನ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚಬೇಕು.

ಭಗವಂತ ಸೂರ್ಯನನ್ನು ಪ್ರಸನ್ನಗೊಳಿಸಲು ಹಾಗೂ ಕೃಪೆಗೆ ಪಾತ್ರರಾಗಲು ಸಾಸಿವೆ ಎಣ್ಣೆ ದೀಪವನ್ನು ಹಚ್ಚುವುದು ಒಳ್ಳೆಯದು.
ಶನಿ, ಎಳ್ಳಿನ ಎಣ್ಣೆಯಲ್ಲಿ ದೀಪ ಹಚ್ಚಿದ್ರೆ ಪ್ರಸನ್ನನಾಗ್ತಾನೆ. ರಾಹು-ಕೇತು ಗ್ರಹ ದೋಷವಿದ್ದರೆ ನಾರಗಸೆ ತೈಲದಿಂದ ದೀಪ ಬೆಳಗಿ.
ಯಾವುದೇ ದೇವಿಯ ಪೂಜೆ ಮಾಡುವ ವೇಳೆ ತುಪ್ಪದ ದೀಪ ಬಳಸಿ.

ಭಗವಂತ ಗಣೇಶನ ಕೃಪೆ ಪ್ರಾಪ್ತಿಗಾಗಿ ಮೂರು ಬತ್ತಿಯ ತುಪ್ಪದ ದೀಪ ಬೆಳಗಿ.

ಕಾರ್ತಿಕ ದೇವರ ಕೃಪೆಗಾಗಿ ಗೋವಿನ ಶುದ್ಧ ತುಪ್ಪದ ದೀಪವನ್ನು ಬಳಸಿ.

ಲಕ್ಷ್ಮಿಯ ಪ್ರಸನ್ನತೆ ಗಳಿಸಲು ಏಳು ಬತ್ತಿಯ ದೀಪವನ್ನು ತುಪ್ಪದಲ್ಲಿ ಹಚ್ಚಿ.

ಭಗವಂತ ವಿಷ್ಣುವಿನ ಕೃಪೆ ಪಡೆಯಲು ಹತ್ತು ಬತ್ತಿಯುಳ್ಳ ದೀಪವನ್ನು ಹಚ್ಚಿ.

Related Post

Leave a Comment