ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರಲ್ಲ!

ಮನೆಯಲ್ಲಿ ಬೀರುವನ್ನು ಈ ರೀತಿ ಇಟ್ಟರೆ ಲಕ್ಷ್ಮೀದೇವಿಯ ಅನುಗ್ರಹ ಆಗುತ್ತದೆ.ಹಾಗಾಗಿ ಬಿರುವನ್ನು ನಿಯಮವಾಗಿ ಜಾಗ್ರತೆಯಿಂದ ಇಟ್ಟುಕೊಂಡರೆ ಲಕ್ಷ್ಮಿ ದೇವಿ ಅನುಗ್ರಹ ಲಭಿಸುತ್ತದೆ. ಬೀರುವನ್ನು ಯಾವಾಗಲೂ ಕೂಡ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಕೆಲವರಿಗೆ ದಿಕ್ಕುಗಳ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ನೈರುತ್ಯ ಎಲ್ಲಿ ಬರುತ್ತದೆ ಎಂದು ಮೊದಲು ತಿಳಿದುಕೊಳ್ಳಬೇಕು. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಮಧ್ಯದಲ್ಲಿ ನೈರುತ್ಯ ದಿಕ್ಕು ಬರುತ್ತದೆ.

ಬೀರುವಿನ ಬಾಗಿಲನ್ನು ತೆರೆದಾಗ ಉತ್ತರಕ್ಕೆ ಬಾಗಿಲು ತೆರೆಯಬೇಕು. ಆಗ ಮಾತ್ರ ಅಂತಹ ಮನೆಯಲ್ಲಿ ಹಣಕಾಸಿನ ಅರಿವು ಬಹಳ ಚೆನ್ನಾಗಿ ಇರುತ್ತದೆ.ಉತ್ತರ ದಿಕ್ಕು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ.ಇನ್ನು ಬೀರುವಿನ ಬಾಗಿಲು ತೆರೆದ ನಂತರ ಆ ಬೀರುವಿನಿಂದ ಒಳ್ಳೆಯ ಸುವಾಸನೆ ಬರುವಂತೆ ನೋಡಿಕೊಳ್ಳಬೇಕು. ಬಟ್ಟೆಯ ವಾಸನೆಯ ಬರಬಾರದು.ಬೀರು ಯಾವಾಗಲೂ ಸುಗಂಧಭರಿತ ಸುವಾಸನೆಯಿಂದ ಕೂಡಿರಾಬೇಕಾಗುತ್ತದೆ.

ಬೀರುವನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಖರ್ಚು ಹೆಚ್ಚಾಗುತ್ತದೆ.ಹಣಕಾಸಿನ ಸಂಕಷ್ಟಗಳು ಹೆಚ್ಚಾಗುತ್ತದೆ. ಹಾಗಾಗಿ ಈಶಾನ್ಯ ದಿಕ್ಕಿನಲ್ಲಿ ಬೀರುವನ್ನು ಇಡಬಾರದು. ಇನ್ನು ಬಾಗಿಲನ್ನು ತೆರೆದಾಗ ದಕ್ಷಿಣಕ್ಕೆ ಬರದಂತೆ ನೋಡಿಕೊಳ್ಳಬೇಕಾಗುತ್ತದೆ. ಅದರಿಂದ ಹಣಕಾಸಿನ ಖರ್ಚುಗಳು ಹೆಚ್ಚಾಗುತ್ತದೆ. ಯಾವಾಗಲೂ ಬೀರುವಿನ ಬಾಗಿಲು ಉತ್ತರ ದಿಕ್ಕಿಗೆ ನೋಡುವಂತೆ ಇಟ್ಟುಕೊಳ್ಳಬೇಕು.

ಇನ್ನು ಒಂದು ಕಾಗದ ಮೇಲೆ ಕುಬೇರ ರಂಗೋಲಿಯನ್ನು ಬರೆದು ಅದರ ಮೇಲೆ ದುಡ್ಡು ಇಡುವ ಮತ್ತು ಮುಖ್ಯ ಪತ್ರಗಳನ್ನು ಇಟ್ಟರೆ ಬಹಳ ಒಳ್ಳೆಯದು. ಈ ರೀತಿ ಮಾಡಿದರೆ ಶುಭ ಯೋಗಗಳು ಹೆಚ್ಚಾಗುತ್ತದೆ. ಮಹಾಲಕ್ಷ್ಮಿ ಅನುಗ್ರಹದ ಜೊತೆಗೆ ಕುಬೇರ ದೇವರ ಅನುಗ್ರಹ ಆಗುತ್ತದೆ. ಯಾವುದೇ ಕಾರಣಕ್ಕೂ ಮನೆಯಲ್ಲಿ ಈಶಾನ್ಯದಿಕ್ಕಿನಲ್ಲಿ ಬೀರುವನ್ನು ಇಡಬಾರದು.

Related Post

Leave a Comment