ಸುಖ ಮತ್ತು ನೆಮ್ಮದಿಯನ್ನು ಕಾಣಲು ದಂಪತಿಯ ಬೆಡ್ ರೂಮ್ ಈ ರೀತಿ ಇರಲಿ!

ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನಲಾಗುತ್ತದೆ. ಆದರೆ ಕೆಲವೊಮ್ಮೆ ಸಂಬಂಧದಲ್ಲಿ ಸಣ್ಣ ಜಗಳವೂ ದೊಡ್ಡದಾಗುತ್ತದೆ. ಜಗಳಗಳನ್ನು ತಪ್ಪಿಸಲು ಎಲ್ಲಾ ದಂಪತಿಗಳು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಬೇಕು. ಕೌನ್ಸಿಲಿಂಗ್ ತೆಗೆದುಕೊಳ್ಳುವುದು ಹೀಗೆ. ಆದರೆ ಅದರ ಹೊರತಾಗಿ ಕೆಲವು ವಾಸ್ತು ಸಲಹೆಗಳನ್ನು ಸಹ ಪ್ರಯತ್ನಿಸಬೇಕು ಎನ್ನಲಾಗುತ್ತದೆ. ಏಕೆಂದರೆ ಬೆಡ್​ರೂಂ ವಾಸ್ತು ಸಹ ಪರಿಣಾಮ ಬೀರುತ್ತದೆ. ಹಾಗಾದ್ರೆ ಬೆಡ್​ ರೂಂ ವಾಸ್ತು ಹೇಗಿರಬೇಕು ಎಂಬುದು ಇಲ್ಲಿದೆ.

ಸುಲಭವಾಗಿ ಅನುಸರಿಸಬಹುದಾದ ಕೆಲವು ವಾಸ್ತು ಪರಿಹಾರಗಳಿವೆ. ಅವುಗಳಲ್ಲಿ ಕೆಲವು ನಿಮ್ಮ ಮಲಗುವ ಕೋಣೆಗೆ ಮಾತ್ರ ಸೀಮಿತವಾಗಿವೆ. ಎಲ್ಲಾ ದಂಪತಿಗಳು ಜಗಳಗಳನ್ನು ತಪ್ಪಿಸಲು ಈ ಸಲಹೆಗಳನ್ನು ಪ್ರಯತ್ನಿಸಬಹುದು.

ಹಾಸಿಗೆ ನಿಮ್ಮ ಹಾಸಿಗೆಯನ್ನು ನೀವು ಸರಿಯಾದ ದಿಕ್ಕಿನಲ್ಲಿ ಅಂದರೆ ಮನೆಯ ನೈಋತ್ಯ ಭಾಗದಲ್ಲಿ ಜೋಡಿಸಬೇಕು. ತಲೆ ದಕ್ಷಿಣ ಅಥವಾ ಪೂರ್ವಕ್ಕೆ, ಕಾಲುಗಳು ಪಶ್ಚಿಮ ಅಥವಾ ಉತ್ತರಕ್ಕೆ ಹಾಕಿ ಮಲಗಬೇಕು. ಇದು ನಿಮ್ಮ ಮನಸಿನ ಮೇಲೆ ಪರಿಣಾಮ ಬೀರುವ ನಿದ್ರೆಯ ಗುಣಮಟ್ಟಕ್ಕೆ ಸಂಬಂಧಿಸಿದೆ ಎನ್ನಲಾಗುತ್ತದೆ. ಅಲ್ಲದೆ, ನಿಮ್ಮ ಹಾಸಿಗೆ ಮರದಿಂದ ಮಾಡಿರಬೇಕು. ಲೋಹದ ಹಾಸಿಗೆಗಳು ನಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ನಿಮ್ಮ ಕೋಣೆಯ ಮೂಲೆಯಲ್ಲಿ ಹಾಸಿಗೆಯನ್ನು ಇಡಬೇಡಿ, ಅದು ಧನಾತ್ಮಕ ಶಕ್ತಿಯನ್ನು ತಡೆಯುತ್ತದೆ.

ವಾರಕ್ಕೊಮ್ಮೆಯಾದರೂ ಸಮುದ್ರದ ಉಪ್ಪಿನೊಂದಿಗೆ ನೆಲವನ್ನು ಒರೆಸುವುದು ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಹಾಸಿಗೆಯ ಮೇಲೆ ಕೇವಲ 2-3 ದಿಂಬುಗಳನ್ನು ಇರಿಸಿ. ಹೆಚ್ಚುವರಿ ವಸ್ತುಗಳನ್ನು ಇಡಬೇಡಿ. ಏಕೆಂದರೆ ಇದು ವಿಶೇಷವಾಗಿ ದಂಪತಿಗಳಿಗೆ ತಡೆಗೋಡೆ ಎಂದು ಹೇಳಲಾಗುತ್ತದೆ.

ನಿಮ್ಮ ಮಲಗುವ ಕೋಣೆಯ ಗೋಡೆಯ ಮೇಲೆ ನಕಾರಾತ್ಮಕ ಚಿತ್ರಗಳನ್ನು ಅಂಟಿಸಬೇಡಿ. ಚಿತ್ರಕಲೆ ಎಷ್ಟೇ ದುಬಾರಿಯಾಗಿರಲಿ, ಕಲಾವಿದರ ಕೃತಿಗಳು ಎಷ್ಟೇ ಸುಂದರವಾಗಿದ್ದರೂ ಜಗಳ, ವಿವರಣೆ, ಕದನ ಈ ರೀತಿಯ ಫೋಟೋಗಳನ್ನು ಹಾಕಬೇಡಿ. ಸಂತೋಷದಿಂದಿರುವ ದಂಪತಿಗಳ ಚಿತ್ರಗಳು, ಕ್ರಿಯಾಶೀಲತೆ, ಧನಾತ್ಮಕತೆಯನ್ನು ಹೊರಸೂಸುವ ಚಿತ್ರಗಳು ನಿಮ್ಮ ರೂಮಿನಲ್ಲಿ ಇರಲೇಬೇಕು.

ಅಸ್ತವ್ಯಸ್ತವಾಗಿರುವುದು ಯಾವಾಗಲೂ ನಕಾರಾತ್ಮಕತೆಯನ್ನು ತರುತ್ತದೆ. ಇದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ದಂಪತಿಗಳಿಗೆ ಮಾತ್ರವಲ್ಲ, ಒಂಟಿ ವ್ಯಕ್ತಿಗಳಿಗೂ ಅನ್ವಯಿಸುತ್ತದೆ.

Related Post

Leave a Comment