ಹಳೆ ಕುಕ್ಕರ್​ ಅನ್ನೆ ಹೊಸದಾಗಿಸಿ ಚೂರು ನೀರು ಹೊರಗಡೆ ಬರಲ್ಲ!

ಕುಕ್ಕರ್ ನಲ್ಲಿ ಅಡುಗೆ ಬೇಗ ಆಗುತ್ತೆ ಅನ್ನೋದೇನೋ ನಿಜ. ಆದರೆ ಪ್ರತಿ ಬಾರಿಯೂ ಕುಕ್ಕರ್ ವಿಸೆಲ್ ಕೂಗುವಾಗ ನೀರೆಲ್ಲಾ ಹೊರ ಬಂದು ಸ್ಟವ್ ಸುತ್ತಮುತ್ತ ಕೊಳಕಾಗಿ ಕಾಣುತ್ತೆ. ನೀರೆಲ್ಲಾ ಹೊರಗೆ ಬಂದರೆ ಆಹಾರ ಕೂಡ ಸರಿಯಾಗಿ ಬೇಯುವುದಿಲ್ಲ. ಇದು ಬಹುತೇಕ ಮನೆಗಳ ಕುಕ್ಕರ್ ಕಥೆ. ಈ ಸಮಸ್ಯೆಗೆ ಅಂತ್ಯ ಹಾಡಬೇಕೆಂದರೆ ಸಿಂಪಲ್ಲಾಗಿ ಈ ಟಿಪ್ಸ್ ಪಾಲಿಸಿ ಸಾಕು.

ಅಡುಗೆ ಮಾಡುವಾಗ ಪ್ರೆಶರ್ ಕುಕ್ಕರ್ ಬಳಸುವುದು ಕಾಮನ್. ಮೊದಮೊದಲು ಚೆನ್ನಾಗಿಯೇ ಇರೋ ಕುಕ್ಕರ್ ಕಾಲ ಕಳೆದಂತೆ ತೊಂದರೆ ಕೊಡಲು ಶುರು ಮಾಡುತ್ತೆ. ಯಾವುದೇ ಬ್ರ್ಯಾಂಡ್ ಆದರೂ ಕುಕ್ಕರ್ ಅನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ ಸಮಸ್ಯೆಗಳು ಎದುರಾಗುತ್ತೆ ಎಂಬುವುದನ್ನು ನೆನಪಿನಲ್ಲಿಡಿ.

ಅಡುಗೆ ಮಾಡುವಾಗ ಕುಕ್ಕರ್ ನಿಂದ ನೀರು ಹೊರ ಬರಲು ಸಾಮಾನ್ಯ ಕಾರಣ ಸ್ವಚ್ಛತೆಯ ಕೊರತೆ. ಮಾಮೂಲಿ ಪಾತ್ರೆಗಳಂತೆ ಕುಕ್ಕರ್ ಅನ್ನೂ ತೊಳೆಯುವವರೇ ಹೆಚ್ಚು. ಆದರೆ ಕುಕ್ಕರ್ ಕ್ಲೀನಿಂಗ್ ನಲ್ಲಿ ಕೆಲವೊಂದು ಟ್ರಿಕ್ಸ್ ಬಳಸಬೇಕು. ಆಗ ನೀರು ಹೊರಬರುವ ಸಮಸ್ಯೆ ಎದುರಾಗಲ್ಲ.

1) ರಬ್ಬರ್ ಪರಿಶೀಲಿಸಿ: ಕೆಲ ತಿಂಗಳಗಳ ಬಳಿಕ ಕುಕ್ಕರ್ ಮುಚ್ಚಳದ ರಬ್ಬರ್ ಸಡಿಲವಾಗುತ್ತೆ. ಇದರಿಂದಾಗಿ ಕುಕ್ಕರ್ ನಿಂದ ನೀರು ಹೊರ ಬರುತ್ತೆ. ಗ್ಯಾಸ್ ಕೆಟ್ ಲೂಸ್ ಆಗಿದ್ದರೆ ಬದಲಿಸಬೇಕಾಗುತ್ತೆ. ಅಡುಗೆ ಮಾಡಿದ ಬಳಿಕ ರಬ್ಬರ್ ಅನ್ನು ತಣ್ಣೀರಿನಲ್ಲಿ ಹಾಕಿದ್ರೆ ಹೆಚ್ಚು ಬಾಳಿಕೆ ಬರುತ್ತೆ.

2) ವಿಸೆಲ್ ಅನ್ನು ಕ್ಲೀನ್ ಮಾಡಿ: ಅನೇಕ ಸಲ ಆಹಾರವು ಕುಕ್ಕರ್ ನಲ್ಲಿನ ಸೀಟಿಯಲ್ಲಿ ಸಿಲುಕಿಕೊಳ್ಳುತ್ತದೆ. ಸೀಟಿಯು ಕೊಳಕಾಗಿದ್ದರೆ ಸರಿಯಾಗಿ ಹಬೆ ಹೋಗಲು ಸಾಧ್ಯವಾಗಲ್ಲ. ಹಾಗಾಗಿ ಕುಕ್ಕರ್ ನ ಸೀಟಿಯನ್ನು ತೆರೆದು ಪರೀಕ್ಷಿಸಿ. ಬ್ರಷ್ ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಬಳಸಿ.

3) ಎಣ್ಣೆ ಸೇರಿಸಿ: ಕುಕ್ಕರ್ ನಿಂದ ನೀರು ಬರದಂತೆ ತಡೆಯಲು ನೀವು ಎಣ್ಣೆಯನ್ನು ಬಳಸಬಹುದು. ಕುಕ್ಕರ್ ನ ಮುಚ್ಚಳದ ಸುತ್ತಲೂ ಎಣ್ಣೆಯನ್ನು ಹಚ್ಚಿ. ಇದು ಕುಕ್ಕರ್ ನಲ್ಲಿರುವ ನೀರು ಹೊರಹೋಗಲು ಬಿಡುವುದಿಲ್ಲ.

4) ತಣ್ಣೀರು ಬಳಸಿ: ತಣ್ಣೀರಿನ ಸಹಾಯದಿಂದ ನೀವು ಕುಕ್ಕರ್ ನಿಂದ ನೀರು ಬರದಂತೆ ತಡೆಯಬಹುದು. ಕುಕ್ಕರ್ ನಿಂದ ನೀರು ಬಂದರೆ ಮುಚ್ಚಳ ತೆರೆದು ತಣ್ಣೀರಿನಿಂದ ತೊಳೆದು ಮತ್ತೆ ಮುಚ್ಚಿದರೆ ನೀರು ಬರಲ್ಲ.

5) ಕುಕ್ಕರ್ ಗೆ ಹೆಚ್ಚು ನೀರು ಹಾಕುವುದು ಅಥವಾ ಕುಕ್ಕರ್ ಅನ್ನು ಹೆಚ್ಚಿನ ಉರಿಯಲ್ಲಿ ಇಡುವುದರಿಂದ ಕೂಡ ನೀರು ಲೀಕ್ ಆಗುತ್ತದೆ. ಆದ್ದರಿಂದ ಕುಕ್ಕರ್ ನಲ್ಲಿ ಆಹಾರವನ್ನು ಬೇಯಿಸುವಾಗ ನೀರಿನ ಪ್ರಮಾಣ ಸರಿಯಾಗಿರಬೇಕು. ಮಧ್ಯಮ ಜ್ವಾಲೆಯಲ್ಲಿ ಬೇಯಿಸಿದರೆ ಕುಕ್ಕರ್ ನಲ್ಲಿರುವ ನೀರು ಹೊರಬರುವುದಿಲ್ಲ.

Related Post

Leave a Comment