ಸಕ್ಕರೆ ಕಾಯಿಲೆಗೆ ಈರುಳ್ಳಿಯಿಂದ ಹೇಳಿ ಶಾಶ್ವತ ಪರಿಹಾರ!   

ಮಧುಮೇಹ ಎನ್ನುವುದು ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಇದರ ನಿಯಂತ್ರಣಕ್ಕೆ ಅಥವಾ ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಕಷ್ಟು ಚಿಕಿತ್ಸೆ ಹಾಗೂ ಔಷಧಗಳು ವೈದ್ಯಕೀಯ ಕ್ಷೇತ್ರದಲ್ಲಿವೆ. ಅಂತೆಯೇ ಮನೆಯಲ್ಲಿ ಇರುವ ಅನೇಕ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಸಹ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು. ಅಂತಹ ಒಂದು ಅದ್ಭುತ ಆರೈಕೆ ನೀಡುವ ಅಡುಗೆ ಪದಾರ್ಥ ಅಥವಾ ತರಕಾರಿ ಎಂದರೆ ಈರುಳ್ಳಿ. ಮಧುಮೇಹ ಸಮಸ್ಯೆ ಇರುವವರು ಈರುಳ್ಳಿಯನ್ನು ಬಳಸಿಕೊಂಡು ಅತ್ಯುತ್ತಮ ಚಿಕಿತ್ಸೆಯನ್ನು ಪಡೆದು ಕೊಳ್ಳಬಹುದು. ಈರುಳ್ಳಿಯಲ್ಲಿ ಇರುವ ಔಷಧೀಯ ಗುಣಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು. ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ಹೇಗೆ ಈರುಳ್ಳಿಯಿಂದ ನಿಯಂತ್ರಣದಲ್ಲಿ ಇಡಬಹುದು? ಎನ್ನುವುದನ್ನು ಪರಿಶೀಲಿಸಿ.

​ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಹೊಂದಿರುವುದು

ಈರುಳ್ಳಿಯಲ್ಲಿ ಸಮ ಪ್ರಮಾಣದ ಗ್ಲೈಸೆಮಿಕ್ ಗುಣಗಳಿವೆ. ಗ್ಲೈಸಮೆಕ್ ಗುಣವು ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಬೇಕಾಗುವಷ್ಟು ಗ್ಲೈಸೆಮಿಕ್ ಗುಣವನ್ನು ಈರುಳ್ಳಿ ಒಳಗೊಂಡಿದೆ. ಕೆಲವು ಲೆಕ್ಕಾಚಾರದ ಪ್ರಕಾರ ಗ್ಲೈಸೆಮಿಕ್ ಪ್ರಮಾಣ ಶೇ.55ಕ್ಕಿಂತ ಕಡಿಮೆ ಇದ್ದ ಆಹಾರ ಪದಾರ್ಥಗಳು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತವೆ ಎಂದು ಹೇಳಲಾಗುತ್ತದೆ. ಈರುಳ್ಳಿಯು ಗ್ಲೈಸೆಮಿಕ್ ಸೂಚ್ಯಾಂಕವನ್ನು ಶೇ.10ರಷ್ಟು ಪ್ರಮಾಣದಲ್ಲಿ ಪಡೆದುಕೊಂಡಿದೆ. ಇದು ಮಧುಮೇಹಕ್ಕೆ ಅತ್ಯುತ್ತಮವಾಗಿ ಆರೈಕೆ ಮಾಡುವುದು.

​ಕಾರ್ಬೋ ಹೈಡ್ರೇಟ್ ಪ್ರಮಾಣ

ಈರುಳ್ಳಿ ಅತ್ಯಂತ ಕಡಿಮೆ ಪ್ರಮಾಣದ ಕಾರ್ಬೋ ಹೈಡ್ರೇಟ್ ಅನ್ನು ಪಡೆದುಕೊಂಡಿದೆ. ಮಧುಮೇಹ ಹೊಂದಿರುವವರು ಅಧಿಕ ಕಾರ್ಬೋ ಹೈಡ್ರೇಟ್ ಇರುವ ಆಹಾರವನ್ನು ಸೇವಿಸಬಾರದು. ಹಾಗೊಮ್ಮೆ ಸೇವಿಸಿದರೆ ಮಧುಮೇಹ ಟೈಪ್-2ರ ಅಪಾಯವನ್ನು ಎದುರಿಸಬೇಕಾಗುವುದು. ಹೆಚ್ಚಿಕೊಂಡ ಈರುಳ್ಳಿಯಲ್ಲಿಯಲ್ಲಿ ಅರ್ಧ ಕಪ್ ಅಂದರೆ 5.9 ಗ್ರಾಂ. ಕಾರ್ಬ್ ಅನ್ನು ಮಾತ್ರ ಹೊಂದಿರುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಅದ್ಭುತ ಆಹಾರವಾಗುವುದು.

​ನಾರಿನಂಶ ಅಧಿಕವಾಗಿ ಇರುತ್ತದೆ

ಮಧುಮೇಹಕ್ಕೆ ಫೈಬರ್ ಅತ್ಯಂತ ಪ್ರಯೋಜನಕಾರಿಯಾದ ಅಂಶ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈರುಳ್ಳಿ ಅದ್ಭುತ ಪ್ರಮಾಣದ ನಾರಿನಂಶವನ್ನು ಪಡೆದುಕೊಂಡಿದೆ. ಹಾಗಾಗಿ ಈರುಳ್ಳಿ ಮಧುಮೇಹಗಳಿಗೆ ಪರಿಪೂರ್ಣವಾದ ಆಹಾರವಾಗಿದೆ. ಹಾಗಾಗಿ ನಿಯಮಿತವಾಗಿ ಈರುಳ್ಳಿಯನ್ನು ಸೇವಿಸಿದರೆ ಮಧುಮೇಹ, ಕೊಲೆಸ್ಟ್ರಾಲ್ ಮಟ್ಟ ಹಾಗೂ ಹೃದಯ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುವುದು.

​ಆಹಾರದಲ್ಲಿ ಈರುಳ್ಳಿಯನ್ನು ಸೇರಿಸಿಕೊಳ್ಳಿ

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಈರುಳ್ಳಿ ಅತ್ಯುತ್ತಮವಾದ ಆಯ್ಕೆಯಾಗುವುದು. ಅದಕ್ಕಾಗಿ ಕೆಂಪು ಈರುಳ್ಳಿಯನ್ನು ಆಯ್ಕೆಮಾಡಿಕೊಳ್ಳಬೇಕು. ಊಟ ಮಾಡುವಾಗ, ತಿಂಡಿ ತಿನ್ನುವಾಗ ಒಂದು ಹಸಿ ಈರುಳ್ಳಿಯನ್ನು ಸೇವಿಸಬಹುದು. ಅಥವಾ ಸಲಾಡ್‍ನ ಜೊತೆಗೆ ಈರುಳ್ಳಿಯನ್ನು ಸೇರಿಸಿ, ಸೇವಿಸಬಹುದು. ಕಚ್ಚಾ ಈರುಳ್ಳಿಯು ಆರೋಗ್ಯಕ್ಕೆ ಅಗತ್ಯವಾದ ಪೋಷಣೆ ನೀಡುವುದರ ಜೊತೆಗೆ ಅನಾರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವುದು. ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈರುಳ್ಳಿಯ ಜೊತೆಗೆ ದಾಲ್ಚಿನ್ನಿ, ಮೊಟ್ಟೆ, ಸೊಪ್ಪು, ಬೀಜಗಳು, ಮೊಸರು, ಅರಿಶಿನ, ಚಿಯಾ ಬೀಜಗಳು, ಹೂಕೋಸು, ಗಸಗಸೆ, ವಿನೆಗರ್ ಮತ್ತು ಬೆಳ್ಳುಳ್ಳಿಯನ್ನು ಹೊಂದಿರುವ ಆಹಾರವನ್ನು ನಿತ್ಯದ ಆಹಾರವನ್ನಾಗಿ ಸೇವಿಸಬಹುದು ಎಂದು ಹೇಳಲಾಗುವುದು. ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಅದ್ಭುತ ರೀತಿಯಲ್ಲಿ ಸಮತೋಲಿಸುತ್ತವೆ.

Related Post

Leave a Comment