ಲಕ್ಷ್ಮಿ ಜನಿಸಿದ ವಿಶೇಷ ನಕ್ಷತ್ರ ಹೋಳಿ ಹುಣ್ಣಿಮೆ ದಿನ ಮಾಡುವ ಪೂಜೆಯಿಂದ ಮನೆಯಲ್ಲಿ ಶಾಶ್ವತವಾಗಿ ನೆಲೆಸುವಳು!

ಹೋಳಿ ಹುಣ್ಣಿಮೆ ದಿನ ಲಕ್ಷ್ಮಿ ಅಮ್ಮನವರು ಜನಿಸಿದ ದಿನ ಕೂಡ ಆಗಿರುತ್ತದೆ. ಅಂದರೆ ಪಾಲ್ಗುಣ ಹುಣ್ಣಿಮೆ ಮತ್ತು ಹೋಳಿ ಹುಣ್ಣಿಮೆ ಅಂತನು ಕರೆಯುತ್ತಾರೆ. ಲಕ್ಷ್ಮಿ ಅಮ್ಮನವರ ಜಯಂತಿ ಎಂದು ಕೂಡ ಕರೆಯುತ್ತಾರೆ. ಹೋಳಿ ಹುಣ್ಣಿಮೆ ಮಾರ್ಚ್ 24 ಭಾನುವಾರ ಬೆಳಗ್ಗೆ 9:56 ನಿಮಿಷಕ್ಕೆ ಪ್ರಾರಂಭವಾದರೆ ಮಾರ್ಚ್ 25ನೆ ತಾರೀಕು ಸೋಮವಾರ ಮಧ್ಯಾಹ್ನ 12:30ಕ್ಕೆ ಮುಕ್ತಯ ಆಗುತ್ತದೆ.

ಹೋಳಿ ಹುಣ್ಣಿಮೆ ಹಬ್ಬವನ್ನು ಮಾರ್ಚ್ 25ನೇ ತಾರೀಕು ಸೋಮವಾರ ಆಚರಣೆ ಮಾಡಬೇಕು. ಅದರೆ ಕಾಮದಹನ ದ ಮುಹೂರ್ತ ಮಾರ್ಚ್ 24ನೇ ತಾರೀಕು ಭಾನುವಾರ ರಾತ್ರಿ 7:19 ನಿಮಿಷದಿಂದ ಹಿಡಿದು 9:10 ನಿಮಿಷದವರೆಗೆ ಇರುತ್ತದೆ. ಈ ಸಮಯದಲ್ಲಿ ಕಾಮದಹನವನ್ನು ಮಾಡುತ್ತೇವೆ.

ಪಾಲ್ಗುಣ ಮಾಸ ಉತ್ತರ ಭದ್ರ ನಕ್ಷತ್ರ ಅಭಿಜಿನ್ ಮುಹೂರ್ತದಲ್ಲಿ ಶ್ರೀಯ ರೂಪದಲ್ಲಿ ಹೊರ ಬಂದಿದ್ದಾಳೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಇದು ಯಾವ ಸಮಯದಲ್ಲಿ ಮಾಡಬೇಕು ಎಂದರೆ ಅಭಿಜಿನ್ ಮುಹೂರ್ತ ಯಾವುದು ಎಂದು ತಿಳಿಸಿಕೊಡುತ್ತೇವೆ.

ನೀವು ಯಾವುದೇ ಪೂಜೆ ಮಾಡಿದರು ಬ್ರಾಹ್ಮೀ ಮುಹೂರ್ತ ತುಂಬಾ ಒಳ್ಳೆಯದು. ಬೆಳಗ್ಗೆ 6:00 ಗಂಟೆ ಒಳಗೆ ಪೂಜೆ ಮಾಡಿದರೆ ತುಂಬಾ ಒಳ್ಳೆಯದು. ನಂತರ ಮುಹೂರ್ತ ಎಂದರೆ ಅಭಿಜಿನ್ ಮುಹೂರ್ತ ಮಧ್ಯಾಹ್ನ 12:08 ನಿಮಿಷಕ್ಕೆ ಇರುತ್ತದೆ. ಇದು 12:56 ನಿಮಿಷಕ್ಕೆ ಮುಕ್ತಯ ಆಗುತ್ತದೆ.

ಒಂದು ವೇಳೆ ಬೆಳಗ್ಗೆ ಮಾಡುವುದಕ್ಕೆ ಆಗದೆ ಇದ್ದರೆ ಗೊದೂಳಿ ಸಮಯದಲ್ಲಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು. ಗೊದೂಳಿ ಸಮಯ ಎಂದರೆ ಸೂರ್ಯಸ್ತದ ಮುಂಚೆ ಒಂದು ಘಳಿಗೆ ಹಾಗು ಸೂರ್ಯಸ್ತದ ನಂತರ ಒಂದು ಘಳಿಗೆ. ಈ ಸಮಯದಲ್ಲಿ ಪೂಜೆ ಮಾಡಿದರೆ ಒಳ್ಳೆಯದು.ಗೊದೂಳಿ ಸಮಯ ಸಂಜೆ 6:07 ನಿಮಿಷದಿಂದ ಹಿಡಿದು 7:01 ನಿಮಿಷದವರೆಗೆ ಇರುತ್ತದೆ. ಈ ಒಂದು ಸಮಯದಲ್ಲಿ ಲಕ್ಷ್ಮಿ ಅಮ್ಮನವರ ಪೂಜೆ ಮಾಡಿದರೆ ಒಳ್ಳೆಯದು. ಈ ಸಮಯದಲ್ಲಿ ಲಕ್ಷ್ಮಿ ಅಮ್ಮನವರ ಶ್ರೀಸೂಕ್ತ ಅಷ್ಟೊತ್ತರ ಹೇಳಿಕೊಂಡರೆ ತುಂಬಾ ಒಳ್ಳೆಯದು.

Related Post

Leave a Comment