ಮನೆ ತುಂಬಾ ಖುಷಿ ಇರಬೇಕೆಂದ್ರೆ ಈ ಮಣ್ಣಿನಮೂರ್ತಿ ಇರಲೇಬೇಕು!

ಸಂತೋಷಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಕೆಲವು ಟಿಪ್ಸ್ ಅನುಸರಿಸಿದರೆ ಮನೆಯಲ್ಲಿ ಸಂತೋಷ ಸದಾ ಕಾಲ ನೆಲೆಸುತ್ತದೆ. ವಾಸ್ತು ಶಾಸ್ತ್ರದಲ್ಲಿ ನಾಲ್ಕು ಮಣ್ಣಿನ ವಸ್ತುಗಳ ಬಗ್ಗೆ ಹೇಳಲಾಗಿದೆ. ಅವುಗಳು ಮನೆಯಲ್ಲಿದ್ದರೆ ಯಾವುದೇ ಸಮಸ್ಯೆ ಕಾಡುವುದಿಲ್ಲ.

ಮಾರುಕಟ್ಟೆಯಲ್ಲಿ ಫ್ಲಾಸ್ಕರ್ ಆಫ್ ಪ್ಯಾರಿಸ್ ಸೇರಿದಂತೆ ಎಲ್ಲಾ ರೀತಿಯ ಮೂರ್ತಿಗಳು ಸಿಗುತ್ತವೆ. ಅವು ತುಂಬಾ ಸುಂದರ ಹಾಗು ಆಕರ್ಷಕವಾಗಿರುತ್ತವೆ. ಅದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಮನೆ ಸುಖ ಸಮೃದ್ಧಿಯನ್ನು ಹಾಳುಮಾಡುತ್ತದೆ . ಮನೆಯಲ್ಲಿರುವ ಮಣ್ಣಿನ ಮೂರ್ತಿಗಳು ಮಾತ್ರ ಸುಖ ಸಂತೋಷವನ್ನು ತರಲಿದೆ. ಇನ್ನು ಮಾರುಕಟ್ಟೆಯಲ್ಲಿ ಸಾಕಷ್ಟು ದೀಪಗಳು ಸಿಗುತ್ತವೆ. ಇವುಗಳು ಕೂಡ ಮನೆಯ ಸಂತೋಷವನ್ನು ಹಾಳು ಮಾಡುತ್ತವೆ.

ಮಣ್ಣಿನ ದೀಪಗಳನ್ನು ದೇವರ ಮುಂದೆ ಬೆಳಗಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನ ದೀಪಗಳು ಸುಖ ಸಮೃದ್ಧಿಯ ಸಂಕೇತ. ಮನೆಯಲ್ಲಿ ಮಣ್ಣಿನ ಮಡಕೆ ಇರುವುದು ಶುಭವೆಂದು ಪರಿಗಣಿಸಲಾಗಿದೆ. ಮಣ್ಣಿನ ಮಡಿಕೆಯನ್ನು ಮನೆಯಲ್ಲಿ ಖಾಲಿ ಇಡಬಾರದು. ಬೇಸಿಗೆಯಲ್ಲಿ ಅದರಲ್ಲಿ ನೀರನ್ನು ಹಾಕಬೇಕು ಇಲ್ಲವಾದರೆ ಅದರಲ್ಲಿ ಧಾನ್ಯಗಳನ್ನು ಇಡಬೇಕು.

Related Post

Leave a Comment