ವಾಸ್ತು ಟಿಪ್ಸ್ ಮನೆಯಲ್ಲಿ ಘಂಟೆ ಬಾರಿಸುವುದರಿಂದ ಸಿಗುತ್ತೆ ಮನಃಶಾಂತಿ!

ಶಾಸ್ತ್ರದ ಪ್ರಕಾರ, ದೇವಸ್ಥಾನದಲ್ಲಿ ಅಥವಾ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ಗಂಟೆಯನ್ನು ಬಾರಿಸುವುದು ಅವಶ್ಯಕ. ಗಂಟೆಯಿಲ್ಲದೆ ಪೂಜೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಪೂಜೆ-ಆರತಿಯ ಸಮಯದಲ್ಲಿ ಭಕ್ತರು ಗಂಟೆ ಬಾರಿಸುತ್ತಾರೆ, ಅದರ ಮೂಲಕ ಅವರು ತಮ್ಮ ಇಷ್ಟಾರ್ಥಗಳನ್ನು ದೇವರಿಗೆ ತಿಳಿಸುತ್ತಾರೆ. ಗಂಟೆ ಬಾರಿಸುವುದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ ಮತ್ತು ನಕಾರಾತ್ಮಕತೆ ದೂರವಾಗುತ್ತದೆ ಎನ್ನುವ ನಂಬಿಕೆಯಿದೆ. ನೀವು ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ಖಂಡಿತವಾಗಿಯೂ ಗಂಟೆಯನ್ನು ನೋಡಿರುತ್ತೀರಿ. ಆದರೆ ಮನೆಯಲ್ಲಿ ಗಂಟೆ ಇದ್ದರೆ ಅದರಲ್ಲಿ ಯಾವ ಚಿತ್ರ ಇದೆ ಎಂದು ತಿಳಿದುಕೊಳ್ಳುವುದು ತುಂಬಾನೇ ಮುಖ್ಯ. ದೇವಸ್ಥಾನಗಳಲ್ಲಿ ಅಥವಾ ದೇವರ ಕೋಣೆಯಲ್ಲಿ ಯಾವ ರೀತಿಯ ಗಂಟೆಯನ್ನು ಬಳಸಬೇಕು ನೋಡಿ..

ಗರುಡ ಗಂಟೆ:ನಾವು ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಬಳಸುವ ಚಿಕ್ಕ ಕೈ ಘಂಟೆಗಳ ಮೇಲ್ಭಾಗದಲ್ಲಿ ಗರುಡ ದೇವರ ಚಿತ್ರವಿರುವುದನ್ನು ನೀವು ಗಮನಿಸಿರಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಪೂಜೆಯಲ್ಲಿ ಗರುಡ ಗಂಟೆಯನ್ನು ಬಳಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಗರುಡ ಗಂಟೆಯನ್ನು ಬಳಸುವ ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿದು ಮನೆಯ ವಾತಾವರಣವೂ ಪರಿಶುದ್ಧವಾಗಿರುತ್ತದೆ.

ಹಿಂದೂ ಧರ್ಮದಲ್ಲಿ, ಗರುಡ ದೇವತೆಯನ್ನು ವಿಷ್ಣುವಿನ ವಾಹನ ಎಂದು ವಿವರಿಸಲಾಗಿದೆ. ಗರುಡ ದೇವನನ್ನು ಹಿಂದೂ ಧರ್ಮದ ಪ್ರಮುಖ ಪಕ್ಷಿ ಮತ್ತು ದೇವರು ಎಂದು ಪೂಜಿಸಲಾಗುತ್ತದೆ. ಮನೆಯಲ್ಲಿ ಪೂಜೆಗೆ ಬಳಸುವ ಗಂಟೆಯಲ್ಲಿ ಗರುಡ ಚಿತ್ರವಿದ್ದರೆ. ಭಕ್ತರ ಸಂದೇಶವನ್ನು ಭಗವಂತನಿಗೆ ತಿಳಿಸಲು ಇದು ವಿಷ್ಣುವಿನ ವಾಹನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಗರುಡ ಘಂಟಿಯನ್ನು ಬಾರಿಸುವುದರಿಂದ ಭಕ್ತರ ಪ್ರಾರ್ಥನೆಗಳು ನೇರವಾಗಿ ಭಗವಂತನಿಗೆ ತಲುಪುತ್ತವೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ.

ನಾಲ್ಕು ವಿಧದ ಗಂಟೆಗಳು:ಪೂಜೆಗೆ ಬಳಸಲಾಗುವ ಗಂಟೆಗಳಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳಿವೆ. ಮೊದಲನೇಯದು ಗರುಡ ಗಂಟೆ, ಎರಡನೇಯದು ದ್ವಾರ ಗಂಟೆ, ಮೂರನೇಯದು ಕೈ ಗಂಟೆ ಮತ್ತು ನಾಲ್ಕನೇಯದು ಸಾಮಾನ್ಯ ಗಂಟೆ. ಗರುಡ ಗಂಟೆ ಚಿಕ್ಕದಾಗಿರುತ್ತದೆ ಮತ್ತು ಕೈಯಿಂದ ಸುಲಭವಾಗಿ ಬಾರಿಸಬಹುದು. ದ್ವಾರ ಗಂಟೆಯನ್ನು ಬೆಲ್ ಎಂದು ಕರೆಯಲಾಗುತ್ತದೆ, ಇದನ್ನು ದೇವಾಲಯದ ಬಾಗಿಲಿಗೆ ತೂಗುಹಾಕಲಾಗುತ್ತದೆ. ಇದು ದೊಡ್ಡದು ಅಥವಾ ಚಿಕ್ಕದು, ಯಾವುದೇ ಆಕಾರದಲ್ಲಿಯೂ ಇರಬಹುದು. ಕೈಗಂಟೆಯೆಂಬುದು ಕನಿಷ್ಠ 5 ಅಡಿ ಅಗಲ ಮತ್ತು ಎತ್ತರದಲ್ಲಿರುತ್ತದೆ. ಅದನ್ನು ಮರದ ಕೋಲಿನ ಸಹಾಯದಿಂದ ಬಾರಿಸಲಾಗುತ್ತದೆ. ಇದು ದೊಡ್ಡ ಗಾತ್ರದ ಗಂಟೆಯಾಗಿರುತ್ತದೆ. ಇದನ್ನು ಬಾರಿಸಿದಾಗ ಧ್ವನಿಯು ಹಲವಾರು ಕಿಲೋಮೀಟರ್‌ಗಳವರೆಗೆ ಹೋಗುತ್ತದೆ. ಇನ್ನು ಸಾಮಾನ್ಯ ಗಂಟೆಯನ್ನು ನೀವು ಎಲ್ಲಾ ದೇವಾಲಯಗಳಲ್ಲಿ ನೋಡಿರುತ್ತೀರಿ.

ನಾವು ಪೂಜೆಯಲ್ಲಿ ಬಳಸುವ ಗಂಟೆಯಲ್ಲಿ ಗರುಡ ಗಂಟೆಯು ಪ್ರಮುಖವಾದುದ್ದು. ಗರುಡ ಗಂಟೆಯನ್ನು ಹಿಡಿದು ಪೂಜೆಯನ್ನು ಮಾಡುವುದರಿಂದ ಆ ಪೂಜೆಯು ಗರುಡ ದೇವನ ಮೂಲಕ ನೇರವಾಗಿ ದೇವರಿಗೆ ಸಲ್ಲುತ್ತದೆ.

Related Post

Leave a Comment