ದೇವರ ದೀಪಕ್ಕೆ ಎಷ್ಟು ಬತ್ತಿ ಹಾಕಿದರೆ ಏನು ಫಲ? ಎಷ್ಟು ಎಣ್ಣೆ ಬಳಸಬೇಕು!

ದೇವರ ಮನೆಗೆ ದೀಪ ಹಚ್ಚುವುದರಿಂದ ಮನೆಯಲ್ಲಿ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಲಕ್ಷ್ಮಿ ದೇವಿಯು ಕೂಡ ಮನೆಯಲ್ಲೇ ನೆಲೆಸುತ್ತಾಳೆ. ದೇವರ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು, ಎಷ್ಟು ಬತ್ತಿ ಹಾಕಬೇಕು, ಯಾವ ಎಣ್ಣೆ ಬಳಸಿದರೆ ಉತ್ತಮ, ಯಾವ ದಿಕ್ಕಿನಲ್ಲಿ ದೀಪ ಹಚ್ಚಬೇಕು ಎಂಬುದನ್ನು ತಿಳಿಯೋಣ.  ದೇವರ ಮನೆಯಲ್ಲಿ ದೀಪವನ್ನು ಮೊದಲು ಹಚ್ಚಬೇಕು ಅದರಲ್ಲೂ ಎರಡು ದೀಪವನ್ನು ಹಚ್ಚುವುದರಿಂದ ಶುಭವಾಗುತ್ತದೆ.

ಇದರ ಜೊತೆಯಲ್ಲಿ ಒಂದು ಕಾಮಾಕ್ಷಿ ದೀಪ ಹಚ್ಚಿದರೆ ತುಂಬಾ ಒಳಿತು ಅಥವಾ ಮಣ್ಣಿನ ದೀಪವನ್ನು ಹಚ್ಚಬಹುದು ಆದರೆ, ಯಾವುದೇ ಕಾರಣಕ್ಕೂ ಎರಡು ಕಾಮಾಕ್ಷಿ ದೀಪ ಹಚ್ಚಬಾರದು. ಕಾಮಾಕ್ಷಿ ದೀಪದ ಬದಲಿ ಯಾಗಿ ಅಷ್ಟ ಲಕ್ಷ್ಮಿಯ ದೀಪ ಹಚ್ಚಬಹುದು. ಹಾಗೆ ಯಾವ ದಿಕ್ಕಿಗೆ ಯಾವ ದೀಪ ಹಚ್ಚಬೇಕು ಎಂದರೆ ಪೂರ್ವ ದಿಕ್ಕಿಗೆ ದೀಪವನ್ನು ಹಚ್ಚುವುದರಿಂದ ವಂಶ ವೃದ್ಧಿಯಾಗುತ್ತದೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಇನ್ನು ಉತ್ತರ ದಿಕ್ಕಿನಲ್ಲಿ ದೀಪ ಹಚ್ಚುವುದರಿಂದ ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ, ಮತ್ತು ಕಂಕಣ ಭಾಗ್ಯ ಕೂಡಿಬರುತ್ತದೆ. ಪಶ್ಚಿಮ ದಿಕ್ಕಿಗೆ ದೀಪ ಹಚ್ಚಿದರೆ ಸಾಲ ಭಾದೆ ಕಡಿಮೆಯಾಗುತ್ತದೆ, ಹಾಗೂ ಯಾವ ದೀಪ ಹಚ್ಚಿದರೆ ಏನು ಪ್ರಯೋಜನ ಎಂದರೆ ಕಾಮಾಕ್ಷಿ ದೀಪ ಹಚ್ಚಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.  ಇನ್ನು ಕುಬೇರ ದೀಪ ಹಚ್ಚುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಈ ದೀಪವನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಹಚ್ಚುವುದರಿಂದ ಹಣಕಾಸು, ಆರ್ಥಿಕ ಸ್ಥಿತಿ ಸರಿಯಾಗುತ್ತದೆ. ಇನ್ನು ಅಖಂಡ ದೀಪ ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಮತ್ತು ಶುಭಕರವಾಗಿರುತ್ತದೆ.

ಇನ್ನು ದೀಪಗಳಿಗೆ ಎಷ್ಟು ಬತ್ತಿ ಎಂದರೆ ಎರಡು ಬತ್ತಿಯನ್ನ ಜೋಡಿ ಮಾಡಿ ಹಚ್ಚಬೇಕು. ಇದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತದೆ. ದೀಪಕ್ಕೆ ತುಪ್ಪ ಅಥವಾ ದೀಪದ ಎಣ್ಣೆ ಬಳಸಿ ದೀಪವನ್ನು ಹಚ್ಚುವುದರಿಂದ ಶುಭವಾಗುತ್ತದೆ. ತುಪ್ಪದ ದೀಪದಿಂದ ನೀವು ಅಂದುಕೊಂಡ ಎಲ್ಲಾ ರೀತಿಯ ಕನಸುಗಳು ನೆರವೇರಲು ಸಾಧ್ಯ.  ದೀಪ ಹಚ್ಚ ಬೇಕಾದರೆ ಎಣ್ಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು, ತುಂಬಾ ಶ್ರೇಷ್ಠವಾದ ತುಪ್ಪವನ್ನು ಬಳಸುವುದು ಉತ್ತಮ.

ಕೊಬ್ಬರಿ ಎಣ್ಣೆ, ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚಿದರೆ ಶುಭವಾಗುತ್ತದೆ. ದೇವರಿಗೆ ದೀಪವನ್ನು ಹಚ್ಚುವುದೇ ವಿಶೇಷ ಅದರಲ್ಲೂ ತುಪ್ಪದ ದೀಪ ತುಂಬಾ ಶ್ರೇಷ್ಠವಾದ ಮತ್ತು ಕೊಬ್ಬರಿ ಎಣ್ಣೆಯ ದೀಪ ಹಾಗೆಯೇ ಅನೇಕ ರೀತಿಯ ದೀಪಗಳನ್ನು ಹಚ್ಚುವುದರಿಂದ ನಮಗೆ ಶುಭವಾಗುತ್ತದೆ, ಯಾವ ರೀತಿ ಸಮಸ್ಯೆಗಳು ಬರುವುದಿಲ್ಲ. ಇದರಿಂದ ನಾವು ನೆಮ್ಮದಿತವಾದ ಜೀವನ ನಡೆಸಲು ಸಾಧ್ಯ ದೇವರಿಗೆ ದೀಪವನ್ನು ಹಚ್ಚುವುದೇ ಪವಿತ್ರವಾದ ಸಂಕೇತ.

Related Post

Leave a Comment