ಆಯುರ್ವೇದ ಪ್ರಕಾರ ದಿನಚರಿ ಹೇಗಿರಬೇಕು!

ಮುಂಜಾನೆ ಬೇಗನೆ ಎದ್ದು ಒಂದು ಸುತ್ತು ಜಾಗಿಂಗ್ ಗೆ ಹೋಗಿ ಬರುವುದು, ವ್ಯಾಯಾಮ ಮಾಡುವುದು ಹೀಗೆ ಹಲವಾರು ದಿನಚರಿಗಳು ಪ್ರತಿಯೊಬ್ಬರ ಜೀವನದಲ್ಲೂ ಇರುವುದು. ಕೆಲವರು ತಮ್ಮ ಸುತ್ತಲಿನ ವಠಾರದಲ್ಲಿ ಒಂದು ಸುತ್ತು ಹೋಗಿ ಬಂದು ಟೀ ಸವಿಯುವರು ಅಥವಾ ಪತ್ರೆಕೆ ಓದುವರು. ಕೆಲವರು ತುಂಬಾ ಅವಸರದಿಂದ ಕಚೇರಿಗೆ ಹೊರಡಲು ಅನುವಾಗುವರು.

ಬೆಳಗ್ಗೆ ಎದ್ದ ಬಳಿಕ ರಾತ್ರಿ ಮಲಗುವ ತನಕ ಪ್ರತಿಯೊಬ್ಬರಿಗೂ ಅವರದ್ದೇ ಆಗಿರುವಂತಹ ದಿನಚರಿಯಿರುವುದು. ಆದರೆ ಆಯುರ್ವೇದದ ಪ್ರಕಾರ ಕೆಲವೊಂದು ದಿನಚರಿಗಳನ್ನು ಪಾಲಿಸಿಕೊಂಡು ಹೋದರೆ ಅದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.

ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್, ಲ್ಯಾಪ್ ಟಾಪ್ ಎಂದು ಜೋತು ಬಿದ್ದಿರುವ ಕಾರಣದಿಂದಾಗಿ ಅದನ್ನು ಪಾಲಿಸಿಕೊಂಡು ಹೋಗಲು ಸಾಧ್ಯವಾಗಲ್ಲ. ಇಂತಹ ಕೆಲವೊಂದು ಅಭ್ಯಾಸಗಳು ನಮ್ಮ ಜೀವನದ ಮೇಲೆ ಗಾಢ ಪರಿಣಾಮ ಬೀರುವುದು. ಆದರೆ ಆಯುರ್ವೇದ ವಿಧಾನವನ್ನು ತಿಳಿದುಕೊಂಡರೆ ತುಂಬಾ ಒಳ್ಳೆಯದು.

ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರು ಎದ್ದ ಕೂಡಲೇ ಮೊಬೈಲ್ ಕೈಗೆತ್ತಿಕೊಂಡು ಏನೆಲ್ಲಾ ಮೆಸೇಜ್ ಬಂದಿದೆ ಎಂದು ನೋಡುವುದು ಇದೆ.ಆದರೆ ಇದರಿಂದಾಗಿ ಮನಸ್ಸಿನ ಶಾಂತಿಗೆ ಭಂಗವಾಗುವುದು. ಆಯುರ್ವೇದಿಕ್ ವಿಧಾನವು ತುಂಬಾ ಒಳ್ಳೆಯದು. ಇದರಿಂದ ಮನಸ್ಸಿಗೆ ಶಾಂತಿ ಕೂಡ ಸಿಗುವುದು. ಅವುಗಳು ಈ ರೀತಿಯಾಗಿ ಇವೆ.

ಬೆಳಗ್ಗೆ ಬೇಗನೆ ಎದ್ದೇಳಿ–ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಸೂರ್ಯ ಮೂಡುವ ಎರಡು ಗಂಟೆಗೆ ಮೊದಲು ನಾವು ಎದ್ದೇಳಬೇಕು.
ಇದಕ್ಕೆ ಕಾರಣವೆಂದರೆ ನಾವು ದಿನದ ಆರಂಭವನ್ನು ಮಾಡುವ ಮೊದಲು ದೇಹವನ್ನು ಶುಚಿಗೊಳಿಸಿ, ಪೋಷಣೆ ನೀಡಿ ಸರಿಯಾಗಿ ಹೊಂದಿಸಿಕೊಳ್ಳುವುದು ಅತೀ ಅಗತ್ಯ.

ನೀವು ಬೇಗನೆ ಎದ್ದೇಳದಿದ್ದರೆ ಇನ್ನು ಮುಂದೆ ಅದನ್ನು ನಿಧಾನವಾಗಿ ಅಭ್ಯಾಸ ಮಾಡಿಕೊಳ್ಳಿ ಮತ್ತು ಇದು ಮುಂದೆ ಅಭ್ಯಾಸವಾಗುವುದು.ಮುಖಕ್ಕೆ ನೀರು ಸಿಂಪಡಿಸಿಎದ್ದ ಬಳಿಕ ನೀವು ಮುಖಕ್ಕೆ ನೀರನ್ನು ಸಿಂಪಡಿಸಬೇಕು. ನೀರು ಸಿಂಪಡಿಸುವುದು ಕಣ್ಣುಗಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಬಿಸಿ ಅಥವಾ ಹೆಚ್ಚು ತಂಪು ಅಲ್ಲದ ಸಾಧಾರಣ ನೀರನ್ನು ಬಳಸಿಕೊಳ್ಳಿ.

ಕರುಳಿನ ಕ್ರಿಯೆಗಳು–ದೇಹದಲ್ಲಿ ರಾತ್ರಿ ಪೂರ್ತಿ ಜಮೆ ಆಗಿರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕಲು ಹೆಚ್ಚಿನ ಸಮಯವನ್ನು ನೀಡಬೇಕು. ಇದನ್ನು ದೇಹದಿಂದ ಹೊರಗೆ ಹಾಕುವುದು ಅನಿವಾರ್ಯ.
ಬೆಳಗ್ಗೆ ಎದ್ದ ಬಳಿಕ ನೀವು ಶೌಚಾಲಯಕ್ಕೆ ಹೋಗಬೇಕು ಮತ್ತು ಒಂದು ವೇಳೆ ಹೋಗಬೇಕೆಂಬ ಅಗತ್ಯವು ಕಾಣಿಸದೆ ಇದ್ದರೆ ಆಗ ನೀವು ಇನ್ನು ಸ್ವಲ್ಪ ಹೊತ್ತು ಮಲಗಬೇಕು.

ತ್ರಿಫಲವನ್ನು ನೀವು ತೆಗೆದುಕೊಂಡರೆ ಆಗ ಅದು ಕರುಳನ್ನು ಶುದ್ಧೀಕರಿಸುವುದು. ಇದು ಬೆಳಗ್ಗೆ ಕರುಳನ್ನು ಶುಚಿಗೊಳಿಸುವುದು ಮಾತ್ರವಲ್ಲದೆ, ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಿಂದ ದೇಹವು ಆರಾಮ, ಶಕ್ತಿಯುತ ಹಾಗೂ ಆರೋಗ್ಯವನ್ನು ಪಡೆಯುವುದು.

ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡಿ–ಹಲ್ಲುಗಳನ್ನು ಶುಚಿಗೊಳಿಸುವುದು ಹಾಗೂ ನಾಲಗೆಯನ್ನು ಶುಚಿ ಮಾಡುವ ಬಗ್ಗೆ ಆಯುರ್ವೇದದಲ್ಲಿ ಹೇಳಲಾಗಿದೆ.ಬಾಯಿಯ ಆರೋಗ್ಯವು ಉತ್ತಮವಾಗಿ ಇರಬೇಕು. ಇದರಿಂದ ನಯವಾದ ಬ್ರಷ್ ನಿಂದ ಹಲ್ಲುಜ್ಜಬೇಕು. ಸ್ವಲ್ಪ ಸಹಿ ಹಾಗೂ ಸ್ವಲ್ಪ ಕಹಿ ಹೊಂದಿರುವಂತಹ ಟೂಥ್ ಪೇಸ್ಟ್ ನಿಂದ ಹಲ್ಲುಜ್ಜಿದರೆ ಅದು ತುಂಬಾ ಒಳ್ಳೆಯದು.

ಬಾಯಿ ಮುಕ್ಕಳಿಸಿ ಗಂಟಲಿನ ಊತದ ಕಾಣಿಸಿದರೆ ಆಗ ಬಿಸಿ ನೀರಿಗೆ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸುತ್ತೇವೆ. ಆದರೆ ನಾವು ಇದನ್ನು ದಿನನಿತ್ಯದ ಕ್ರಮದಲ್ಲಿ ಅಳವಡಿಸಿಕೊಂಡರೆ ಆಗ ಒಸಡು ಮತ್ತು ಕೆಲವು ನಯವಾದ ಅಂಗಾಂಶಗಳಿಗೆ ಎನರವಾಗುವುದು.

ತೈಲ ಲೇಪನ–ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದನ್ನು ಮೈಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಬೇಕು. ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಅದರಿಂದ ದೇಹವು ತೇವಾಂಶ ಪಡೆಯುವುದು.

ನಿಮಗೆ ದಿನಾಲೂ ಎಣ್ಣೆ ಲೇಪನ ಮಾಡಲು ಸಮವಿಲ್ಲದೆ ಇದ್ದರೆ ಆಗ ನೀವು ವಾರದಲ್ಲಿ ಮೂರು ದಿನ ಕಾಲ ಇದನ್ನು ಮಾಡಬಹುದು. ಚಳಿಗಾಲದಲ್ಲಿ ವಾರದಲ್ಲಿ ಮೂರು ಸಲ ಮತ್ತು ಬೇಸಗೆಯಲ್ಲಿ ವಾರದಲ್ಲಿ ಎರಡು ಸಲ ಇದನ್ನು ಮಾಡಿ.

ಸಂಪೂರ್ಣ ದೇಹಕ್ಕೆ ತೈಲದಿಂದ ಮಸಾಜ್ ಮಾಡಿಕೊಳ್ಳಬೇಕು. ಒಂದು ವೇಳೆ ಇದು ಸಾಧ್ಯವಾಗದೆ ಇದ್ದರೆ ಆಗ ನೀವು ದೇಹದ ಐದು ಭಾಗಗಳನ್ನು ಮಸಾಜ್ ಮಾಡಬೇಕು. ನಾಭಿ, ಪಾದದ ಅಡಿಭಾಗ, ತಲೆ, ಕಿವಿಗಳು, ಕೈಗಗಳು ಮತ್ತು ಮೊಣಕೈಯನ್ನು ಮಸಾಜ್ ಮಾಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಸ್ನಾನಕ್ಕೆ ಮೊದಲು ಪ್ರತಿನಿತ್ಯವೂ ತೈಲ ಮಸಾಜ್ ಮಾಡಿದರೆ ಒಳ್ಳೆಯದು ಮತ್ತು ಆಲಿವ್ ತೈಲ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಇದಕ್ಕೆ ಬಳಕೆ ಮಾಡಬಹುದು.
ಲಘು ವ್ಯಾಯಾಮ–ಕೆಲವೊಂದು ಲಘು ವ್ಯಾಯಾಮ ಮತ್ತು ಆಸನದೊಂದಿಗೆ ದಿನವನ್ನು ಆರಂಭಿಸಬೇಕು. ಇದರಿಂದ ದೇಹದಲ್ಲಿ ರಕ್ತ ಸಂಚಾರವು ಉತ್ತಮವಾಗುವುದು ಹಾಗೂ ಸ್ಥಿತಿಸ್ಥಾಪಕತ್ವ ಸಿಗುವುದು.

ನಡೆಯುವುದು, ವ್ಯಾಯಾಮ ಅಥವಾ ಯೋಗವು ನೀವು ಮಾಡಬಹುದಾದ ಕೆಲವೊಂದು ಲಘು ವ್ಯಾಯಾಮಗಳು. ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಬೇಡಿ. ಯಾಕೆಂದರೆ ಇದರಿಂದ ನಿಶ್ಯಕ್ತಿಯು ಕಾಡುವುದು.

ಮೇಲೆ ಹೇಳಿರುವಂತಹ ಎಲ್ಲಾ ವಿಚಾರಗಳನ್ನು ಒಂದೇ ದಿನ ಪಾಲಿಸಲು ಹೋಗಬೇಡಿ. ನೀವು ನಿಧಾನವಾಗಿ ಒಂದೊಂದಾಗಿ ಇದನ್ನು ಪಾಲಿಸಿಕೊಂಡು ಹೋಗಿ ಮತ್ತು ಅಭ್ಯಾಸ ಮಾಡಿಕೊಳ್ಳಿ.
ಇದರಿಂದ ದೇಹಕ್ಕೆ ಶಕ್ತಿ ಸಿಗುವುದು ಮತ್ತು ಮುಂಜಾನೆಯನ್ನು ನೀವು ಹೆಚ್ಚು ಆನಂದಿಸುವಂತೆ ನೋಡಿಕೊಳ್ಳಿ.

Related Post

Leave a Comment