ಯಾಕೆ ಮಧ್ಯಾಹ್ನ ಊಟ ಮಾಡಿದ ನಂತರ ನಿದ್ದೆ ಬರುತ್ತೆ?

ಬೆಳಗ್ಗೆ ಉಪಾಹಾರ ಸೇವಿಸದೇ, ಒಮ್ಮೆಲೇ ಮಧ್ಯಾಹ್ನದ ವೇಳೆ ಆಹಾರ ಸೇವಿಸುವ ರೂಢಿ ಹೊಂದಿರುವ  ಅನೇಕ ಜನರಿದ್ದಾರೆ. ಅಂದರೆ, ಬೆಳಗ್ಗೆ ಚಹಾ ಅಥವಾ ಕಾಫಿ ನಂತರ ನೇರವಾಗಿ ಮಧ್ಯಾಹ್ನ ಊಟ ಮಾಡುವ ರೂಢಿ ಹೊಂದಿರುವವರು. ಕಚೇರಿ, ಕಾಲೇಜಿಗೆ ಹೋಗುವವರು ಬೆಳಗ್ಗೆ ಟಿಫಿನ್‌ ಸೇವಿಸುತ್ತಾರೆ. ನೀವು ಟಿಫಿನ್ ತಿನ್ನದಿದ್ದರೆ, ಹೊರಗೆ ಆಹಾರವನ್ನು ಸೇವಿಸಿರುತ್ತೀರಿ. ಹೀಗೆ ಊಟ ಮಾಡಿದ ತಕ್ಷಣ  ಅನೇಕರಿಗೆ ನಿದ್ದೆ ಬರುತ್ತದೆ. ಈ ಅನುಭವ ಬಹುತೇಕರಿಗೆ ಆಗುತ್ತದೆ. ಈ ರೀತಿ ಬೆಳಗ್ಗೆ ಟಿಫಿನ್ ಮಾಡದೇ ನೇರವಾಗಿ ಮಧ್ಯಾಹ್ನ ಊಟ ಮಾಡುವ ರೂಢಿ ಹೊಂದಿದವರಲ್ಲಿ ನಿದ್ದೆ ಮಾಡಿ ಎದ್ದ ಕೂಡಲೇ ಅಥವಾ ಕೆಲಸ ಸಮಯದಲ್ಲಿ ಸ್ವಲ್ಪ ಹೊತ್ತು ನಿದ್ರಿಸಿ ಎದ್ದ ತಕ್ಷಣ ಕಣ್ಣು ಚುಚ್ಚುವುದು, ಸುಸ್ತು, ತಲೆನೋವು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.

ಹೀಗೆ ಊಟ ಮಾಡಿದ ನಂತರ ಉಂಟಾಗುವ ಆಯಾಸಕ್ಕೆ ಕಾರಣವೇನು ಎಂಬುದರ ಕುರಿತು ಸಂಶೋಧಕರು ವಿಭಿನ್ನ ಸಿದ್ಧಾಂತಗಳ ಬಗ್ಗೆ ತಿಳಿಸುತ್ತಾರೆ. ಊಟ ತಿಂದ ಕೂಡಲೇ ನಿದ್ದೆ ಬರುವುದು ನೈಸರ್ಗಿಕ ಪ್ರತಿಕ್ರಿಯೆ ಎಂದು ತುಂಬಾ ಜನರು ಅಂದುಕೊಂಡಿದ್ದಾರೆ. ತಿಂದ ನಂತರ ಸ್ವಲ್ಪ ನಿದ್ದೆ ಬರುವುದು ಸಹಜ.

ಯಾವುದೇ ಚಿಂತೆ ಇಲ್ಲದಿದ್ದರೆ ಅದರಲ್ಲೂ ಪ್ರತಿದಿನ ಮಧ್ಯಾಹ್ನದ ಊಟದ ನಂತರ ಹೆಚ್ಚು ನಿದ್ದೆ ಮಾಡುವುದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿದೆ. ಹಾಗಿದ್ದರೆ ಊಟದ ನಂತರ ಕಂಡು ಬರುವ ಈ ಆಲಸ್ಯ ಅಥವಾ ನಿದ್ರೆಯ ಹಿಂದಿನ ಕಾರಣವೇನು? ಎಂಬುದನ್ನು ತಿಳಿಯಿರಿ.

ನಿಮ್ಮ ಭಾರೀ ಆಹಾರ ನಿದ್ದೆಗೆ ಕಾರಣ

ಪ್ರತಿದಿನ ಮಧ್ಯಾಹ್ನದ ಊಟದ ನಂತರ ನೀವು ನಿದ್ದೆ ಮಾಡಲು ಕಾರಣ ನೀವು ತಿನ್ನುವ ಭಾರೀ ಆಹಾರ. ಮೇದೋಜ್ಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಊಟವು ತುಂಬಾ ಕ್ಯಾಲೋರಿಯಿಂದ ಕೂಡಿದ್ದರೆ ಅಥವಾ ದೇಹ ಬಯಸಿದ್ದಕ್ಕಿಂತ ಹೆಚ್ಚು ಊಟ ಮಾಡಿದರೆ ಹೆಚ್ಚು ಇನ್ಸುಲಿನ್ ಉತ್ಪತ್ತಿಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇನ್ಸುಲಿನ್‌ನಲ್ಲಿನ ಈ ಹೆಚ್ಚಳದಿಂದಾಗಿ ನಮ್ಮ ದೇಹವು ನಿದ್ರೆಯ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಇದು ನಮ್ಮ ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಯಾರು ಊಟವಾದ ತಕ್ಷಣ ನಿದ್ರಿಸುತ್ತಾರೋ ಅಂತಹವರ ಶಕ್ತಿಯು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಆಲಸ್ಯ ಮೈಗೂಡುತ್ತದೆ.

ಸಿರೊಟೋನಿನ್ ಉತ್ಪಾದನೆ ಎಂದರೇನು..?

ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಊಟವು ಹೆಚ್ಚು ನಿದ್ರೆಗೆ ಪ್ರಚೋದಿಸುತ್ತದೆ. ಇದಕ್ಕೆ ಕಾರಣವೆಂದರೆ ಟ್ರಿಪ್ಟೊಫಾನ್ ಹೆಚ್ಚಿನ ಪ್ರೋಟೀನ್-ಭರಿತ ಆಹಾರಗಳಲ್ಲಿ ಕಂಡು ಬರುತ್ತದೆ. ಇದು ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಸಿರೊಟೋನಿನ್ ಒಂದು ರಾಸಾಯನಿಕವಾಗಿದ್ದು ಅದು ಮನಸ್ಥಿತಿ ಮತ್ತು ನಿದ್ರೆಯ ಮಾದರಿಗಳನ್ನು ನಿಯಂತ್ರಿಸುತ್ತದೆ. ಅದೇ ಸಮಯದಲ್ಲಿ, ಕಾರ್ಬೋಹೈಡ್ರೇಟ್ಗಳು ಟ್ರಿಪ್ಟೊಫಾನ್ ಅನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ನಿದ್ರೆ ಪ್ರಾರಂಭವಾಗುತ್ತದೆ.

ಆಹಾರದಿಂದ ನಿದ್ದೆ

ಸಾಲ್ಮನ್, ಪೌಲ್ಟ್ರಿ ಉತ್ಪನ್ನಗಳು, ಮೊಟ್ಟೆ, ಪಾಲಕ್, ಬೀಜಗಳು, ಹಾಲು, ಸೋಯಾ ಉತ್ಪನ್ನಗಳು, ಚೀಸ್ ಇತ್ಯಾದಿಗಳಲ್ಲಿ ಪ್ರೋಟೀನ್ ಅಧಿಕವಾಗಿದೆ. ಇದಲ್ಲದೆ, ಅಕ್ಕಿ, ಪಾಸ್ತಾ, ಬ್ರೆಡ್, ಕೇಕ್, ಕುಕೀಸ್, ಮಫಿನ್ಗಳು, ಕಾರ್ನ್, ಹಾಲು, ಸಿಹಿ ಉತ್ಪನ್ನಗಳು ಇತ್ಯಾದಿಗಳಲ್ಲಿ ಕಾರ್ಬ್ ಅಧಿಕವಾಗಿದೆ. ಅದಕ್ಕೇ ಅವುಗಳನ್ನು ತಿಂದ ಮೇಲೆ ನಿದ್ದೆ ಬರುತ್ತದೆ.

ಇದಲ್ಲದೇ ನಿಮ್ಮ ನಿದ್ರೆಯ ಮಾದರಿ ಸರಿಯಾಗಿಲ್ಲದಿದ್ದರೆ, ಯಾರಿಗಾದರೂ ದೈಹಿಕ ಚಟುವಟಿಕೆಯು ತುಂಬಾ ಕಡಿಮೆಯಿದ್ದರೆ, ನೀವು ಊಟ ಮಾಡಿದ ನಂತರ ನಿದ್ದೆ ಬರುತ್ತದೆ. ಆಹಾರವನ್ನು ಸೇವಿಸಿದ ನಂತರ, ಒಬ್ಬ ವ್ಯಕ್ತಿಯು ವಿಶ್ರಾಂತಿ ಪಡೆಯುತ್ತಾನೆ.

ನೀವು ರಾತ್ರಿ  ಸರಿಯಾಗಿ ನಿದ್ದೆ ಮಾಡದೇ ಹೋದರೆ ಈ ರೀತಿ ಸಮಸ್ಯೆ ಆಗುತ್ತದೆ. ಹೀಗಾಗಿ ರಾತ್ರಿ 7-8 ಗಂಟೆಗಳ ಆಳವಾದ ನಿದ್ದೆ ಮಾಡಿ. ಆಗ ನೀವು ಆಹಾರವನ್ನು ಸೇವಿಸಿದ ನಂತರ ನಿದ್ದೆ ಬರುವುದಿಲ್ಲ. ನಿಯಮಿತ ವ್ಯಾಯಾಮ ಮಾಡಿ, ಇದು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ರೋಗಗಳು ನಿದ್ರೆಗೆ ಕಾರಣವಾಗಬಹುದು

ಕೆಲವು ಸಂದರ್ಭಗಳಲ್ಲಿ, ಊಟದ ನಂತರ ದಣಿದ ಭಾವನೆ ಮತ್ತು ಎಲ್ಲಾ ಸಮಯದಲ್ಲೂ ನಿದ್ರಿಸುವುದು ಕೆಲವು ಆರೋಗ್ಯ ಸಮಸ್ಯೆಗಳ ಸಂಕೇತವಾಗಿದೆ. ಊಟದ ನಂತರ ಯಾರಾದರೂ ನಿದ್ರಿಸಿದರೆ, ಅವರು ಈ ಕೆಳಗಿನ ಸಮಸ್ಯೆಗಳನ್ನು ಹೊಂದಿರಬಹುದು.

ಮಧುಮೇಹ ಆಹಾರ ಅಲರ್ಜಿಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ರಕ್ತಹೀನತೆ, ಥೈರಾಯ್ಡ್, ಜೀರ್ಣ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ನಿಮ್ಮ ಆಹಾರ ಕ್ರಮ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ.

ಸಾಕಷ್ಟು ನೀರು ಕುಡಿಯಿರಿ. ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಸೇವಿಸಿ. ನೀವು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿ, ರಾತ್ರಿ ಸರಿಯಾಗಿ ನಿದ್ದೆ ಮಾಡಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಆಲ್ಕೋಹಾಲ್ ಸೇವಿಸಬೇಡಿ. ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ.

Related Post

Leave a Comment