ತವರಿಂದ ಗಂಡನ ಮನೆಗೆ ಈ ವಸ್ತುಗಳನ್ನು ತರಬಾರದು!

ತವರು ಎಂದರೆ ವಿವಾಹಿತ ಮಹಿಳೆಯರಿಗೆ ಒಂದು ವಿಭಿನ್ನ ಭಾವನೆ. ಹೆಣ್ಣುಮಕ್ಕಳು ಮದುವೆಯಾದ ನಂತರ ತಾಯಿ ಮನೆ ತೊರೆದು ಗಂಡನ ಮನೆಗೆ ಹೋಗುತ್ತಾರೆ, ಈ ಮೂಲಕ ತವರಿಂದ ದೈಹಿಕವಾಗಿ ದುರಾದರೂ ಮಾನಸಿಕವಾಗಿ ಹೆಣ್ಣುಮಕ್ಕಳಿಗೆ ಸದಾ ತವರಿನ ಚಿಂತೆ ಇದ್ದೇ ಇರುತ್ತದೆ.

ಇನ್ನು ತವರು ಮನೆ ಹಾಗೂ ಗಂಡನ ಮನೆ ಗಂಡನ ಮನೆಯ ನಡುವೆ ವಿವಾಹದ ನಂತರ ಪಾಲಿಸಲೇಬೇಕಾದ ಸಾಕಷ್ಟು ಸಂಪ್ರದಾಯ ಹಾಗೂ ಪದ್ಧತಿಗಳಿವೆ. ಈ ಸಂಪ್ರದಾಯಗಳನ್ನು ನಮ್ಮ ಹಿರಿಯರು ಮಾಡಿದ್ದರೂ ಇದೆಲ್ಲ ಹಿಂದಿನ ಕಾಲದ ಶಾಸ್ತ್ರ ಎಂದು ಅಲ್ಲಗಳೆಯದೇ, ಸಾಕಷ್ಟು ಕಾರಣಗಳು ಹಾಗೂ ವೈಜ್ಞಾನಿಕ ಕಾರಣಗಳಿಂದ ಇದನ್ನು ಪಾಲಿಸುವುದು ಒಳ್ಳೆಯದೇ.

ಇಂಥಾ ಹಲವು ಸಂಪ್ರದಾಯಗಳಲ್ಲಿ ಒಂದು ಮಹಿಳೆಯರು ಮದುವೆಯಾದ ನಂತರ ತವರು ಮನೆಗೆ ಗಂಡನ ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು ಎಂಬುದು. ಈ ವಸ್ತುಗಳನ್ನು ಮರೆತು ಕೂಡ ಮಾಡಬಾರದು ಮಾಡಿದರೆ ಗಂಡನ ವಿನಾಶ, ಮನೆಯ ನೆಮ್ಮದಿ ಕೆಡುವುದು ಹಾಗೂ ಬಡತನಕ್ಕೆ ಕಾರಣವಾಗಬಹುದು.

ಯಾವುದು ಈ ವಸ್ತುಗಳು ಇಲ್ಲಿದೆ ನೋಡಿ:

ಚೂಪಾದ ಹರಿತವಾದ ವಸ್ತುಗಳು–ಮಹಿಳೆಯರು ತವರು ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ಚೂಪಾದ ಹರಿತವಾದ ವಸ್ತುಗಳನ್ನು ತರಬಾರದು. ಚಾಕು, ಕತ್ತರಿ, ಸೂಜಿ ಈ ರೀತಿಯ ವಸ್ತುಗಳನ್ನು ಗಂಡನ ಮನೆಗೆ ತರುವುದರಿಂದ ಗಂಡನ ಮನೆಯಲ್ಲಿ ಜಗಳ ಕಲಹ ಹೆಚ್ಚಾಗುತ್ತದೆ. ಇದರಿಂದ ಗಂಡ ಹೆಂಡತಿ ಬೇರೆಯಾಗುವ ಸನ್ನಿವೇಶ ಸಹ ಎದುರಾಗಬಹುದು. ಎರಡೂ ಮನೆಯ ನಡುವೆ ಬಾಂಧವ್ಯ ಚೆನ್ನಾಗಿ ಇರುವುದಿಲ್ಲ. ಇಬ್ಬರ ಮನೆಯಲ್ಲೂ ಮನಸ್ಥಾಪ, ಕಿರಿಕಿರಿ, ಅಸೂಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಹಣ–ಮದುವೆಯಾದ ನಂತರ ಮಹಿಳೆಯರು ಯಾವುದೇ ಕಾರಣಕ್ಕೂ ಎಂಥದ್ದೇ ಕಷ್ಟ ಎದುರಾದರೂ ತವರು ಮನೆಯಿಂದ ಗಂಡನ ಮನೆಗೆ ಹಣವನ್ನು ತರಬಾರದು. ಹೀಗೆ ಹೆಣ್ಣುಮಕ್ಕಳು ಗಂಡನ ಮನೆಗೆ ಹಣವನ್ನು ತಂದರೆ ಪತಿಯ ಮನೆಯು ಸರ್ವನಾಶವಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಹಲವಾರು ಸಾಕ್ಷಿಗಳು ಸಹ ನಮ್ಮ ಕಣ್ಣಮುಂದಿರುವುದನ್ನು ನಾವು ನೋಡಬಹುದು.

ದೇವರ ವಿಗ್ರಹ–ಮದುವೆಯಾದ ಮಹಿಳೆಯರು ಗಂಡನ ಮನೆಗೆ ತವರು ಮನೆಯಿಂದ ಯಾವುದೇ ಕಾರಣಕ್ಕೂ ಯಾವುದೇ ತರಹದ ದೇವರ ಮೂರ್ತಿ, ವಿಗ್ರಹವನ್ನು ತರಬಾರದು. ಹೀಗೆ ಮಾಡುವುದರಿಂದ ತವರು ಮನೆಗೆ ಬಡತನ, ದುರದೃಷ್ಟ ಎದುರಾಗಬಹುದು ಎಂದು ಹಿರಿಯರು ಹೇಳಿದ್ದಾರೆ.

ಕೆಟ್ಟ ವಿಚಾರ–ಮನೆ ಎಂದ ಮೇಲೆ ಒಳ್ಳೆಯದು ಹಾಗೂ ಕೆಟ್ಟ ವಿಚಾರಗಳು ಇರುವುದು ಸಾಮಾನ್ಯ. ಆದರೆ ತವರು ಮನೆಯಲ್ಲಿರುವ ಕೆಟ್ಟ ವಿಚಾರಗಳ ಬಗ್ಗೆ ಹಾಗೂ ಅಲ್ಲಿನ ಸಮಾಚಾರಗಳ ಬಗ್ಗೆ ಗಂಡನ ಮನೆಯಲ್ಲಿ ಎಂದಿಗೂ ಹೇಳಿಕೊಳ್ಳಬಾರದು. ಯಾವುದೇ ತಾಯಿ ಆದರೂ ಮಗಳು ಗಂಡನ ಮನೆಯಲ್ಲಿ ಕಷ್ಟಪಡಬಾರದು ಎಂದು ಸಲಹೆ ನೀಡುತ್ತಾರೆ, ಇಂಥಾ ಸಲಹೆಗಳನ್ನು ಗಂಡನ ಮನೆಯಲ್ಲಿ ಪ್ರಯೋಗಿಸಿದಾಗ ಒಳ್ಳೆಯದು ಹಾಗೂ ಕೆಟ್ಟದು ಆಗಬಹುದು. ಹಾಗಾಗಿ ಅಂತಹ ವಿಚಾರಗಳನ್ನು ತವರು ಮನೆಯಲ್ಲೇ ಬಿಟ್ಟು ಬರಬೇಕು ಹಾಗೂ ಕೇವಲ ಒಳ್ಳೆಯ ಸದ್ವಿಚಾರವನ್ನು ಮಾತ್ರ ತವರು ಮನೆಯಿಂದ ಗಂಡನ ಮನೆಗೆ ತೆಗೆದುಕೊಂಡು ಬರಬೇಕು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಸಹ ಪ್ರಸನ್ನಳಾಗುತ್ತಾಳೆ ಎಂಬುದು ನಂಬಿಕೆ..

Related Post

Leave a Comment