ಉಪ್ಪು, ಖಾರ, ಹುಳಿ ಇಲ್ಲದೆ ಇರುವಂತಹ ಭಾರತೀಯ ಅಡುಗೆಯು ತುಂಬಾ ನೀರಸವಾಗಿರುವುದು. ಇಂತಹ ಅಡುಗೆಯನ್ನು ಯಾರು ಇಷ್ಟಪಡಲ್ಲ. ಅದರಲ್ಲೂ ದಕ್ಷಿಣ ಭಾರತೀಯರು ಹುಳಿ ಇಲ್ಲದೆ ಯಾವುದೇ ಅಡುಗೆಯನ್ನು ಮಾಡಲ್ಲ. ಹುಣಸೆ ಹುಳಿಯು ಪ್ರಮುಖವಾಗಿ ಭಾರತೀಯರು ಬಳಸಲ್ಪಡುವಂತಹ ಹುಳಿಯಾಗಿದೆ. ಹುಣಸೆ ಹಣ್ಣಿನ ಬೀಜಗಳನ್ನು ಕೂಡ ಹುರಿದು ತಿನ್ನುವುದು ಗ್ರಾಮೀಣ ಭಾಗದ ಜನರ ಅಭ್ಯಾಸವಾಗಿದೆ.
ಅದರಲ್ಲೂ ವಿಶೇಷವಾಗಿ ಬರಗಾಲದಲ್ಲಿ ಇದು ಉಪಯೋಗಕ್ಕೆ ಬರುವುದು. ಹುಣಸೆ ಬೀಜದಲ್ಲಿ ಫೋಸ್ಪರಸ್, ಮೆಗ್ನಿಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಅಮಿನೊ ಆಮ್ಲವಿದೆ. ಹುಣಸೆ ಬೀಜವು ಕಪ್ಪು ಬಣ್ಣದ್ದಾಗಿದೆ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಆರೋಗ್ಯಕ್ಕೂ ಇದು ಪರಿಣಾಮಕಾರಿ. ಹುಣಸೆ ಬೀಜದ ಲಾಭಗಳು.
ಸಂಧಿವಾತ
ಹುಣಸೆ ಬೀಜದಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಸಂಧಿವಾತ ಇರುವಂತಹ ವ್ಯಕ್ತಿಗಳಿಗೆ ಶಮನ ನೀಡುವುದು. ½ ಚಮಚ ಹುರಿದ ಹುಣಸೆ ಬೀಜದ ಹುಡಿಯನ್ನು ದಿನಕ್ಕೆ ಎರಡು ಸಲ ನೀರಿನಲ್ಲಿ ಹಾಕಿಕೊಂಡು ಕುಡಿದರೆ ನೋವು ಶಮನವಾಗುವುದು.
ಕಾಸ್ಮೆಟಿಕ್
ಹುಣಸೆ ಬೀಜದ ಸಾರದಲ್ಲಿರುವ ಕ್ಸಯ್ಲೊಗ್ಲ್ಯಕಾನ್ಸ್ ಎನ್ನುವ ಅಂಶವನ್ನು ಕಾಸ್ಮೆಟಿಕ್ ಮತ್ತು ಇತರ ಕೆಲವೊಂದು ಔಷಧಿಯ ಉತ್ಪನಗಳಲ್ಲಿ ಬಳಸಲಾಗುತ್ತದೆ. ಇದನ್ನು ಚರ್ಮದಲ್ಲಿನ ಕೆಂಪು ಕಲೆಗಳ ನಿವಾರಣೆಗೆ ಪರಿಣಾಮಕಾರಿ.
ಅತಿಸಾರ ನಿವಾರಣೆ
ಹುಣಸೆ ಬೀಜದ ಹೊರಗಿನ ಕೆಂಪು ಸಿಪ್ಪೆಯು ಭೇದಿ ಮತ್ತು ಅತಿಸಾರವನ್ನು ನಿವಾರಿಸುವುದು.
ಹಲ್ಲುಗಳು ತುಂಬಾ ದುರ್ಬಲವಾಗಿದ್ದರೆ ಆಗ ಹುಣಸೆ ಬೀಜದ ಹುಡಿಯನ್ನು ಒಸಡು ಮತ್ತು ಹಲ್ಲುಗಳಿಗೆ ಹಚ್ಚಿಕೊಳ್ಳಿ. ಅತಿಯಾಗಿ ಧೂಮಪಾನ ಮಾಡುವಂತಹ ವ್ಯಕ್ತಿಗಳಲ್ಲಿ ನಿಕೋಟಿನ್ ಜಮೆಯಾಗಿರುವುದು ಅಥವಾ ಬಾಯಿಯ ಸ್ವಚ್ಛತೆ ಸರಿಯಾಗಿ ಮಾಡದೆ ಇದ್ದರೆ, ಅತಿಯಾಗಿ ತಂಪು ಪಾನೀಯ ಸೇವನೆಯಿಂದ ಪದರವು ನಿರ್ಮಾಣವಾಗುವುದು. ಇದು ಕಾಫಿ, ಚಾ, ಸೋಡಾ ಮತ್ತು ಧೂಮಪಾನದಿಂದ ಉಂಟಾಗಿರುವ ಕಲೆಗಳನ್ನು ನಿವಾರಿಸುವುದು. ಹುಣಸೆ ಹಣ್ಣಿನ ಹುಡಿಯು ಎಲ್ಲಾ ರೀತಿಯ ದಂತ ಸಮಸ್ಯೆ ನಿವಾರಣೆ ಮಾಡುವುದು ಮತ್ತು ಹಲ್ಲಿನಲ್ಲಿರುವಂತಹ ನಿಕೋಟಿನ್ ನ್ನು ತೆಗೆದುಹಾಕುವುದು. ಹುರಿದ ಅಥವಾ ಕರಿದ ಹುಣಸೆ ಬೀಜಗಳನ್ನು ಹುಡಿ ಮಾಡಿಕೊಂಡು ಅದು ಮೆತ್ತಗೆ ಆದ ಬಳಿಕ ಅದರಿಂದ ಹಲ್ಲುಜ್ಜಿಕೊಳ್ಳಿ.
ಅಜೀರ್ಣ ಸಮಸ್ಯೆಗೆ
ಹುಣಸೆ ಬೀಜವು ನೈಸರ್ಗಿಕವಾಗಿ ಅಜೀರ್ಣ ಸಮಸ್ಯೆ ಹೋಗಲಾಡಿಸುವುದು ಮತ್ತು ಪಿತ್ತರಸ ಹೆಚ್ಚು ಮಾಡುವುದು. ಕೊಲೆಸ್ಟ್ರಾಲ್ ಕಡಿಮೆ ಇದ್ದು, ಹೆಚ್ಚಿನ ಆಹಾರದ ನಾರಿನಾಂಶ ಹೊಂದಿದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುವುದು ಮತ್ತು ಇದು ನೈಸರ್ಗಿಕವಾಗಿ ಹಸಿವು ಉಂಟು ಮಾಡುವುದು. ಮಲಬದ್ಧತೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ.
ಪ್ರತಿರೋಧಕ ಶಕ್ತಿ ಹೆಚ್ಚಿಸುವುದು
ಹುಣಸೆ ಬೀಜದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವಂತಹ ಗುಣಗಳು ಇವೆ. ಹಲವಾರು ರೀತಿಯ ರೋಗಗಳು ಮತ್ತು ಸಮಸ್ಯೆಗಳನ್ನು ಇದು ನಿವಾರಿಸುವುದು.
ಕ್ಯಾನ್ಸರ್
ಹುಣಸೆ ಹಣ್ಣಿನ ಅಂಟಿನ ಜ್ಯೂಸ್ ನಿಂದಾಗಿ ಕರುಳಿನ ಕ್ಯಾನ್ಸರ್ ನಿವಾರಿಸಬಹುದು ಮತ್ತು ರಕ್ಷಿಸಬಹುದು.
ಬ್ಯಾಕ್ಟೀರಿಯಾ ವಿರೋಧಿ
ಹುಣಸೆ ಬೀಜದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ನ್ಯೂಮೋನಿಯಾ ಉಂಟು ಮಾಡುವ ಬ್ಯಾಕ್ಟೀರಿಯಾ, ಟೈಫಸ್ ಮತ್ತು ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾದಿಂದ ಇದು ರಕ್ಷಿಸುವುದು. ಕರುಳು ಮತ್ತು ಮೂತ್ರಕೋಶದ ಸೋಂಕನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾದಿಂದ ಇದು ರಕ್ಷಣೆ ನೀಡುವುದು.
ಕೆಮ್ಮು, ಗಂಟಲಿನ ಸೋಂಕಿನಿಂದ ರಕ್ಷಣೆ
ಹುಣಸೆ ಬೀಜದ ಜ್ಯೂಸ್ ಒಳ್ಳೆಯ ಮೌಥ್ ವಾಶ್. ಇದರಿಂದ ಬಾಯಿ ಮುಕ್ಕಳಿಸಿಕೊಂಡರೆ ಅದರಿಂದ ಗಂಟಲಿಗೆ ಶಮನ ಸಿಗುವುದು. ಇದನ್ನು ನೀವು ಶುಂಠಿ ಮತ್ತು ದಾಲ್ಚಿನಿ ಜತೆಗೆ ಮಿಶ್ರಣ ಮಾಡಿಕೊಂಡು ಕುಡಿದರೆ ಆಗ ಶೀತ, ಕೆಮ್ಮು, ನೆಗಡಿ ಮತ್ತು ಟಾನ್ಸಿಲ್ ನಂತಹ ಗಂಟಲಿನ ಸಮಸ್ಯೆ ನಿವಾರಿಸಬಹುದು.
ಮಧುಮೇಹ
ಹುಣಸೆ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ಇದು ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶದ ಗಾತ್ರವನ್ನು ಹಿಗ್ಗಿಸಿ ಮೇಧೋಜೀರಕ ಗ್ರಂಥಿಯನ್ನು ರಕ್ಷಿಸುವುದು.
ಹೃದಯದ ಆರೋಗ್ಯ
ಹುಣಸೆ ಬೀಜದಲ್ಲಿ ಇರುವಂತಹ ಪೊಟಾಶಿಯಂ ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಿಗಳಿಗೆ ಒಳ್ಳೆಯದು.
ಮುರಿತ ಮೂಳೆ
ಹುಣಸೆ ಬೀಜಗಳ ದಪ್ಪಗಿನ ಪೇಸ್ಟ್ ಮಾಡಿಕೊಂಡು ಮುರಿದ ಮೂಳೆಗೆ ಹಚ್ಚಿದರೆ ಅದು ಜೋಡಣೆಯಾಗುವುದು.
ಕಣ್ಣಿಗೆ
ಹುಣಸೆ ಹಣ್ಣಿನ ರಸ ತೆಗೆಯಿರಿ ಮತ್ತು ಸೋಸಿಕೊಂಡು ಅದರ ಕೆಲವು ಹನಿ ಕಣ್ಣಿಗೆ ಬಿಡಿ. ಇದು ಕಣ್ಣುಗಳಿಗೆ ಮೊಶ್ಚಿರೈಸ್ ನೀಡುವುದು. ರಸವನ್ನು ಬಿಸಿ ಮಾಡಿಕೊಂಡು ಬಳಸಿದರೆ ಕಣ್ಣಿನ ಉರಿಯೂತ ನಿವಾರಣೆಯಾಗುವುದು. ಹುಣಸೆ ಬೀಜದಲ್ಲಿ ಕಣ್ಣಿನ ಮೇಲ್ಮೈಗೆ ಅಂಟಿಕೊಳ್ಳುವ ಗುಣವಿರುವಂತಹ ಪಾಲಿಸ್ಯಾಕರೈಡ್ ಗಳು ಇದೆ.
ಚರ್ಮದ ಆರೋಗ್ಯ
ಹುಣಸೆ ಬೀಜದ ಸಾರವು ಚರ್ಮದ ಆರೈಕೆಗೆ ತುಂಬಾ ಪರಿಣಾಮಕಾರಿಯಾಗಿರುವುದು. ಹುಣಸೆ ಬೀಜವು ಚರ್ಮದ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು, ತೇವಾಂಶ ನೀಡುವುದು ಮತ್ತು ಮೃಧುವಾಗಿಸುವುದು. ಹೈಯಲುರಾನಿಕ್ ಆಮ್ಲವು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮತ್ತು ನೆರಿಗೆ ಹಾಗೂ ಚರ್ಮದ ಗೆರೆಗಳನ್ನು ನಿವಾರಿಸುವುದು. ಹುಣಸೆ ಬೀಜವು ನೀರನ್ನು ಹೀರಿಕೊಳ್ಳುವ ಕಾರಣದಿಂದಾಗಿ ಇದನ್ನು ಸೀರಮ್, ಜೆಲ್, ಫೇಶಿಯಲ್ ಟೋನರ್, ಮೊಶ್ಚಿರೈಸರ್ ಮತ್ತು ಮಾಸ್ಕ್ ಗಳಲ್ಲಿ ಬಳಸಿಕೊಳ್ಳುವರು. ಇದು ವಯಸ್ಸಾಗುವ ಲಕ್ಷಣಗಳನ್ನು ಕೂಡ ತಡೆಯುವುದು. ನೀವು ಇನ್ನು ತಡ ಮಾಡುವುದು ಯಾಕೆ? ನಿಮ್ಮ ಆಹಾರ ಕ್ರಮದಲ್ಲಿ ಹುಣಸೆ ಬೀಜವನ್ನು ಸೇರಿಸಿಕೊಂಡು ಅದರ ವಿವಿಧ ಲಾಭಗಳನ್ನು ಪಡೆದುಕೊಳ್ಳಿ. ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.