ಬೆರ್ರಿಗಳಲ್ಲಿ ಹಲವಾರು ರೀತಿಯದ್ದು ಪ್ರಕೃತಿಯಲ್ಲಿ ಲಭ್ಯವಿದ್ದು, ಇದನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಟರ್ಕಿ ಬೆರ್ರಿಗಳು ಇದನ್ನು ಆಡು ಭಾಷೆಯಲ್ಲಿ ಸುಂಡೆ ಕಾಯಿ, ಬುಗರಿಕಾಯಿ ಅಂತಲೂ ಕರೆಯುತ್ತಾರೆ.
ಟರ್ಕಿ ಬೆರ್ರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದನ್ನು ನಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳುವರು. ಇಂತಹ ಟರ್ಕಿ ಬೆರ್ರಿ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಟರ್ಕಿ ಬೆರ್ರಿ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.
ಟರ್ಕಿ ಬೆರ್ರಿಯನ್ನು ಸೋಲಾನಮ್ ಟಾರ್ವಮ್ ಎಂದು ಕೂಡ ಕರೆಯಲಾಗುತ್ತದೆ. ಇದು ಹೆಚ್ಚಾಗಿ , ಘಾನಾ ಚೀನಾ, ಥಾಯ್ಲೆಂಡ್, ಕೆರಿಬಿಯನ್, ದಕ್ಷಿಣ ಅಮೆರಿಕಾ, ಇಂಡೋನೇಷ್ಯಾ, ಮೆಕ್ಸಿಕೊ, ಜಮೈಕಾ ಇತ್ಯಾದಿ ಭಾಗಗಳಲ್ಲಿ ಕಂಡುಬರುತ್ತದೆ.
ಹೆಚ್ಚಾಗಿ ಘಾನಾದಲ್ಲಿ ಇದು ಕಂಡುಬರುತ್ತದೆ ಮತ್ತು ಇದಕ್ಕೆ ಅಲ್ಲಿ ಹಲವಾರು ವಿಧದ ಹೆಸರನ್ನು ಕೂಡ ನೀಡಲಾಗಿದೆ. ಟರ್ಕಿ ಬೆರ್ರಿಯ ಸಸ್ಯವು ಬದನೆಕಾಯಿ ಸಸ್ಯಕ್ಕೆ ಸಮವಾಗಿದೆ. ಗಿಡದಲ್ಲಿ ಮುಳ್ಳುಗಳು ಕೂಡ ಇದ್ದು. ಮೂರು ವರ್ಷಗಳ ಕಾಲ ಇದು ಬದುಕುಳಿಯಬಲ್ಲದು.ಟರ್ಕಿ ಬೆರ್ರಿಯಲ್ಲಿ ಇರುವಂತಹ ಕೆಲವು ಆರೋಗ್ಯ ಲಾಭಗಳ ಬಗ್ಗೆ ತಿಳಿಯಿರಿ.
ರಕ್ತ ಹೀನತೆಗೆ ಚಿಕಿತ್ಸೆ–ಟರ್ಕಿ ಬೆರ್ರಿಯಲ್ಲಿ ಅತ್ಯುತ್ತಮ ಮಟ್ಟದ ಕಬ್ಬಿನಾಂಶವಿದ್ದು. ರಕ್ತಹೀನತೆ ನಿವಾರಣೆ ಮಾಡಲು ತುಂಬಾ ಒಳ್ಳೆಯದು. ಇದು ಕೆಂಪುರಕ್ತದ ಕಣಗಳ ಉತ್ಪತ್ತಿಯನ್ನು ಉತ್ತೇಜಿಸುವುದು. ಈ ಬೆರ್ರಿಗಳನ್ನು ಹೆಚ್ಚಾಗಿ ಸೂಪ್ ನಲ್ಲಿ ಬಳಸಲಾಗುತ್ತದೆ ಮತ್ತು ದಿನನಿತ್ಯವೂ ತಿಂದರೆ ಅದರಿಂದ ಕೆಂಪು ರಕ್ತ ಕಣ ಹೆಚ್ಚಾಗುವುದು.
ಅಜೀರ್ಣ ಮತ್ತು ಅತಿಸಾರಕ್ಕೆ ಪರಿಹಾರ—ಸಾಮಾನ್ಯವಾಗಿ ಆಹಾರವು ಸರಿಯಾಗಿ ಇಲ್ಲದೆ ಇದ್ದರೆ ಆಗ ಅಜೀರ್ಣ ಮತ್ತು ಅತಿಸಾರವು ಕಂಡುಬರುವುದು. ಇಂತಹ ಸಮಯದಲ್ಲಿ ಟರ್ಕಿ ಬೆರ್ರಿಯು ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ತಟಸ್ಥಗೊಳಿಸುವುದು ಮತ್ತು ಗ್ಯಾಸ್ಟ್ರಿಕ್ ನಿಂದ ಆಗಿರುವಂತಹ ಅಲ್ಸರ್ ಗೆ ಇದು ಒಳ್ಳೆಯ ಪರಿಹಾರವಾಗಿದೆ.
ಕರುಳಿನ ಹುಳಗಳನ್ನು ತಡೆಯುವುದು–ದಿನಿನಿತ್ಯವೂ ಆಹಾರದಲ್ಲಿ ಟರ್ಕಿ ಬೆರ್ರಿಗಳನ್ನು ಸೇವನೆ ಮಾಡಿದರೆ ಅದರಿಂದ ಕರುಳಿನಲ್ಲಿ ಉಂಟಾಗುವಂತಹ ಹುಳಗಳನ್ನು ತಡೆಯಬಹುದಾಗಿದೆ. ಬೆರ್ರಿಯ ಒಣಗಿಸಿದ ಮತ್ತು ಹುಡಿಯನ್ನು ಬಳಸಬಹುದು.
ಮಧುಮೇಹಕ್ಕೆ ಚಿಕಿತ್ಸೆ–ಮಧುಮೇಹ ನಿಯಂತ್ರಿಸಲು ನೀವು ಬೇಯಿಸಿದ ಬೆರ್ರಿಗಳಿಗೆ ಟರ್ಕಿ ಬೆರ್ರಿ ಸಸ್ಯದ ಎಲೆಗಳ ಹುಡಿ ಹಾಕಿಕೊಳ್ಳೀ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು.
ಶೀತ ಮತ್ತು ಜ್ವರದಿಂದ ತಡೆಯುವುದು–ಸೂಪ್ ಮಾಡಿಕೊಂಡು ಈ ಬೆರ್ರಿಗಳನ್ನು ತಿಂದರೆ ಅದರಿಂದ ಜ್ವರ ಮತ್ತು ಶೀತದ ವಿರುದ್ಧ ಹೋರಾಡುವ ಶಕ್ತಿ ಬರುವುದು.
ಕ್ಯಾನ್ಸರ್ ನಿಂದ ರಕ್ಷಣೆ–ಅಧ್ಯಯನಗಳು ಹೇಳಿರುವ ಪ್ರಕಾರ ಟರ್ಕಿ ಬೆರ್ರಿಯು ತುಂಬಾ ಲಾಭದಾಯಕ ಮತ್ತು ಇದರಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಕೂಡ ಇದೆ. ಕೆಲವೊಂದು ಅಧ್ಯನಗಳ ಪ್ರಕಾರ ಇದು ಚರ್ಮದ ಕಾಯಿಲೆ, ಅಲ್ಸರ್ ನಿವಾರಿಸುವುದು.
ಬೆರ್ರಿಯು ಉರಿಯೂತ ಶಮನಕಾರಿ ಮತ್ತು ಹೊಟ್ಟೆಯ ಸಮಸ್ಯೆಗೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಟರ್ಕಿ ಬೆರ್ರಿಯು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಕ್ಯಾನ್ಸರ್ ಕಾರಕ ಅಂಗಾಂಶಗಳು ಬೆಳೆಯದಂತೆ ಇದು ತಡೆಯುತ್ತದೆ. ಇದು ಶ್ವಾಸಕೋಶದ ಕ್ಯಾನ್ಸರ್ ತಡೆಯಲು ತುಂಬಾ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ.
ಕಫ ಮತ್ತು ಲೋಳೆಗೆ ಪರಿಹಾರ–ಶೀತದಿಂದಾಗಿ ಹೆಚ್ಚಾಗಿ ಕಫ ಮತ್ತು ಲೋಳೆ ನಿರ್ಮಾಣವಾಗುವುದು. ಒಣ ಬೆರ್ರಿಗಳನ್ನು ಹುಡಿ ಮಾಡಿಕೊಂಡು ಬಳಸಿದರೆ ಅದರಿಂದ ಕಫ, ಲೋಳೆ, ಕೆಮ್ಮು, ಶ್ವಾಸಕೋಶದ ಉರಿಯೂತ ಮತ್ತು ಅಸ್ತಮಾ ನಿವಾರಣೆ ಆಗುವುದು.
ಕಿಡ್ನಿ ಕಾಯಿಲೆಯಿಂದ ತಡೆಯುವುದು–ಅಧ್ಯಯನಗಳ ಪ್ರಕಾರ ಟರ್ಕಿ ಬೆರ್ರಿಯು ಕಿಡ್ನಿ ಕಾಯಿಲೆಯಿಂದ ತಡೆಯುವುದು. ಇದರಿಂದಾಗಿ ಇದನ್ನು ಕಿಡ್ನಿ ಸಮಸ್ಯೆಗೆ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ.
ಹೃದಯದ ಕಾಯಿಲೆ ಮತ್ತು ಪಾಶ್ವವಾಯು ತಡೆಯುವುದು–ಟರ್ಕಿ ಬೆರ್ರಿಯಲ್ಲಿ ಇರುವಂತಹ ಸಪೋನಿನ್, ಫ್ಲಾವನಾಯ್ಡ್, ಟಾರ್ವೊಸೈಡ್, ಆಲ್ಕಲಾಯ್ಡ್, ಗ್ಲೈಕೋಸೈಡ್, ಟ್ಯಾನಿನ್, ಕೊಲೊರೊಜೆನೊಮ್ ಮತ್ತು ಬಲಶಾಲಿ ಆಂಟಿಆಕ್ಸಿಡೆಂಟ್ ಗಳು ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ನ್ನು ತಡೆಯುತ್ತದೆ. ಒಣ ಬೆರ್ರಿಯಿಂದ ಮಾಡಿರುವಂತಹ ಹುಡಿಯು ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯಾಘಾತ ತಪ್ಪಿಸುವುದು.
ಋತುಚಕ್ರ ನಿಯಂತ್ರಿಸುವುದು–ಋತುಚಕ್ರ ನಿಯಂತ್ರಿಸುವಲ್ಲಿ ಟರ್ಕಿ ಬೆರ್ರಿಯು ತುಂಬಾ ಪರಿಣಾಮಕಾರಿ ಆಗಿದೆ. ಇದು ಋತುಚಕ್ರದ ಆವರ್ತನವು ಸರಿಯಾಗಿರುವಂತೆ ನೋಡಿಕೊಳ್ಳುವುದು.
ನೋವು, ಕೆಂಪಾಗುವುದು ಮತ್ತು ಸಂಧಿವಾತ ತಡೆಯುವುದು–ಟರ್ಕಿ ಬೆರ್ರಿಯು ಯೂರಿಕ್ ಆಮ್ಲವನ್ನು ಹೊರಹಾಕುವ ಮೂಲಕವಾಗಿ ನೋವು, ಕೆಂಪಾಗುವುದು ಮತ್ತು ಸಂಧಿವಾತದ ಇತರ ಕೆಲವು ಲಕ್ಷಣಗಳನ್ನು ಕಡಿಮೆ ಮಾಡುವುದು. ಟರ್ಕಿ ಬೆರ್ರಿಯ ಎಲೆಗಳಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಮತ್ತು ಇದರಲ್ಲಿ ಇರುವಂತಹ ನೈಸರ್ಗಿಕದತ್ತವಾದ ಸ್ಟಿರಾಯ್ಡ್ ಸಂಧಿವಾತಕ್ಕೆ ತುಂಬಾ ಪರಿಣಾಮಕಾರಿ, ಬೆನ್ನು ನೋವು, ಊತ ಮತ್ತು ನೋವನ್ನು ಕಡಿಮೆ ಮಾಡುವುದು. ಟರ್ಕಿ ಬೆರ್ರಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವ ಪರಿಣಾಮವಾಗಿ ಇದು ತುಂಬಾ ಲಾಭಕಾರಿ.
ತೂಕ ಹೆಚ್ಚಳ–ತೂಕ ಕಡಿಮೆ ಇರುವಂತ ಜನರು ಹಸಿ ಟರ್ಕಿ ಬೆರ್ರಿಗಳನ್ನು ರುಬ್ಬಿಕೊಂಡು, ಅದನ್ನು ನೀರಿಗೆ ಹಾಕಿ ಅರ್ಧ ಲೋಟದಷ್ಟು ರಾತ್ರಿ ಮಲಗುವ ಮೊದಲು ಕುಡಿಯಬೇಕು. ಇದನ್ನು ಕುಡಿದು, ಸರಿಯಾಗಿ ತಿನ್ನುತ್ತಲಿದ್ದರೆ ಆಗ ತೂಕ ಹೆಚ್ಚಳವಾಗುವುದು. ಟರ್ಕಿ ಬೆರ್ರಿಗಳನ್ನು ಕೆಡದಂತೆ ಫ್ರಿಡ್ಜ್ ನಲ್ಲಿ ಇಡಬೇಕು.