ಈ ಅಡಿಕೆ ಪೂಜೆಗೆ ಮಾತ್ರವಲ್ಲದೇ ಅನೇಕ ದೋಷ ಪರಿಹಾರಕ್ಕೂ ಸಹಾಯಕವಾಗಿದೆ. ಇದರ ಕೆಲವು ಪರಿಹಾರ ನಡೆಸುವ ಮೂಲಕ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ. ಈ ಕುರಿತು ಕಾಶಿಯ ಜ್ಯೋತಿಷಿ ಚಕ್ರಪಾಣಿ ಭಟ್ ಅವರು ಸಲಹೆ ನೀಡಿದ್ದಾರೆ
ಪೂಜೆ ಸಮಯದಲ್ಲಿ ವೀಳ್ಯದೆಲೆ ಅಡಿಕೆಗೆ ವಿಶೇಷ ಮಹತ್ವ ಇದೆ. ಪೂಜೆ ಸಮಯದಲ್ಲಿ ಹಣ್ಣಿನ ತಟ್ಟೆ ಜೊತೆ ವೀಳ್ಯದೆಲೆ, ಅಡಿಕೆ ಇರಲೇ ಬೇಕು. ದಕ್ಷಿಣೆ ನೀಡುವ ಸಂದರ್ಭ ಸೇರಿದಂತೆ ಅನೇಕ ಸಮಯದಲ್ಲಿ ನಾವು ಇದನ್ನು ಬಳಸಲಾಗುತ್ತದೆ. ಇನ್ನು ಅಡಿಕೆಯು ಗಣೇಶನಿಗೆ ಪ್ರಿಯ ಆಗಿದ್ದು, ಇದು ಸಂಪತ್ತನ್ನು ಪ್ರತೀಕ ಎಂದು ಪರಿಗಣಿಸಲಾಗಿದೆ.
ಈ ಅಡಿಕೆ ಪೂಜೆಗೆ ಮಾತ್ರವಲ್ಲದೇ ಅನೇಕ ದೋಷ ಪರಿಹಾರಕ್ಕೂ ಸಹಾಯಕವಾಗಿದೆ. ಇದರ ಕೆಲವು ಪರಿಹಾರ ನಡೆಸುವ ಮೂಲಕ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ. ಈ ಕುರಿತು ಕಾಶಿಯ ಜ್ಯೋತಿಷಿಚಾರ್ಯ ಚಕ್ರಪಾಣಿ ಭಟ್ ಅವರು ಸಲಹೆ ನೀಡಿದ್ದಾರೆ
ಪೂಜೆಯ ಸಮಯದಲ್ಲಿ ದೇವರಿಗೆ ಎರಡು ಎಲೆ, ಅಡಿಕೆಯನ್ನು ಶ್ರೀಗಂಧ, ಅಕ್ಷತೆ, ಹೂವು ಇತ್ಯಾದಿಗಳನ್ನು ಅರ್ಪಿಸಲಾಗುತ್ತದೆ. ಪೂಜೆ ಮುಗಿದ ನಂತರ ಅಡಿಕೆಯನ್ನು ರಕ್ಷಸೂತ್ರದಲ್ಲಿ ಸುತ್ತಿ ಖಜಾನೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಸಂಪತ್ತು ಮತ್ತು ಆಸ್ತಿ ಹೆಚ್ಚಾಗುತ್ತದೆ
ವೃತ್ತಿ, ವ್ಯಾಪಾರ ಅಥವಾ ಇನ್ನಾವುದೇ ಕೆಲಸದಲ್ಲಿ ಯಶಸ್ಸಿನ ಯೋಗವನ್ನು ಬಲಪಡಿಸಲು ಬಯಸಿದರೆ, ನೀವು ಮನೆಯಿಂದ ಹೊರಗೆ ಹೋಗುವಾಗ ಅಡಿಕೆ ಮತ್ತು ಎಲೆಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಮನೆಗೆ ಮರಳಿದ ನಂತರ ಗಣೇಶನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ.
ವಿವಾಹ ಯೋಗಕ್ಕಾಗಿ ವೀಳ್ಯದೆಲೆಯನ್ನು ತೆಗೆದುಕೊಂಡು ಅದರಲ್ಲಿ ರಕ್ಷಸೂತ್ರವನ್ನು ಸುತ್ತಿ. ನಂತರ ಅಕ್ಷತೆ, ಕುಂಕುಮ ಮತ್ತು ಹೂವುಗಳಿಂದ ಪೂಜಿಸಿ.
ಗುರುವಾರ ವಿಷ್ಣು ದೇವಾಲಯದಲ್ಲಿ ವೀಳ್ಯದೆಲೆ ಇರಿಸಿ. ಹೀಗೆ ಮಾಡುವುದರಿಂದ ಮದುವೆ ಯೋಗವಾಗುತ್ತದೆ. ಮದುವೆಯ ನಂತರ ಅಡಿಕೆಯನ್ನು ನೀರಿನಲ್ಲಿ ಕರಗಿಸಲಾಗುತ್ತದೆ.
ನೀವು ವೃತ್ತಿ ಅಥವಾ ವ್ಯವಹಾರದಲ್ಲಿ ಯಶಸ್ವಿಯಾಗಲು ಬಯಸಿದರೆ, ಹಸುವಿನ ತುಪ್ಪದಲ್ಲಿ ಕುಂಕುಮವನ್ನು ಬೆರೆಸಿ ಮತ್ತು ಅಡಿಕೆ ಮೇಲೆ ಸ್ವಸ್ತಿಕ್ ಬರೆದು. ನಂತರ ರಕ್ಷಸೂತ್ರದಲ್ಲಿ ಸುತ್ತಿ, ಪೂಜಿಸಿ
ವ್ಯಾಪಾರದಲ್ಲಿ ಪ್ರಗತಿ ಕಾಣದಿದ್ದರೆ ಶನಿವಾರ ರಾತ್ರಿ ಅರಳಿ ಮರವನ್ನು ಪೂಜಿಸಿ ಅದರ ಕೆಳಗೆ ಒಂದು ರೂಪಾಯಿ ನಾಣ್ಯ ಮತ್ತು ಅಡಿಕೆ ಇಟ್ಟು ಪ್ರಾರ್ಥಿಸಿ