ಆಧುನಿಕ ಯುಗದಲ್ಲಿ ಜನಸಂಖ್ಯೆಯ ಅಧಿಕ ಭಾಗವನ್ನು ಕಾಡುವಂತಹ ಸಾಮಾನ್ಯ ಸಮಸ್ಯೆಯೆಂದರೆ ಅದು ಅಧಿಕ ರಕ್ತದ ಒತ್ತಡ ಮಧುಮೆಹ.ಈ ಎರಡು ಕಾಯಿಲೆಗಳು ವಿಶ್ವದಲ್ಲಿ ಮಿಲಿಯನ್ ಗಿಂತ ಹೆಚ್ಚು ಜನರನ್ನು ಕಾಡುತ್ತಿದ್ದೂ ಪ್ರಾಣಕ್ಕೆ ಕಂಟಕ ಆಗಬಲ್ಲ ಇವುಗಳಿಗೆ ಸರಿಯಾದ ರೀತಿಯಲ್ಲಿ ಔಷಧಿ ಹಾಗೂ ನಿಯಂತ್ರಣವನ್ನು ಮಾಡಬೇಕು. ಜೀವನಶೈಲಿ ಒತ್ತಡದ ಜೀವನ ಇತ್ಯಾದಿಗಳಿಂದಾಗಿ ಅಧಿಕ ರಕ್ತದ ಒತ್ತಡದ ಸಮಸ್ಯೆಯು ಇಂದು ಜನರನ್ನು ಕಾಡುತ್ತಿದೆ.ಹೈ ಬಿಪಿ ಸಮಸ್ಸೆ ಇರುವವರು ಮೊಸರು ಸೇವನೆ ಮಾಡಿದರೆ ಹಲವರು ಲಾಭಗಳು ಸಿಗುತ್ತವೆ.
ಹೃದಯಾಘಾತ ಪಾರ್ಶ್ವವಾಯು ಇತ್ಯಾದಿಗಳು ಸಾವಿಗೆ ಪ್ರಮುಖ ಕಾರಣವಾಗಿರಬಹುದು.ಇನ್ನು ಅಧಿಕ ರಕ್ತದ ಒತ್ತಡವು ಜೀವನ ಶೈಲಿಯಿಂದ ಬರುವ ಕಾಯಿಲೆ ಆಗಿದ್ದು. ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಯನ್ನು ಮಾಡಿಕೊಂಡರೆ ಖಂಡಿತವಾಗಿಯೂ ಇದರ ಪ್ರಭಾವನ್ನು ಕಡಿಮೆ ಮಾಡಬಹುದು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಮೊಸರನ್ನು ಸೇರ್ಪಡೆ ಮಾಡಿದರೆ ಅದರಿಂದ ಅಧಿಕ ರಕ್ತದೊತ್ತಡ ಪರಿಣಾಮವನ್ನು ಕಡಿಮೆ ಮಾಡಬಹುದು.
ಮೋಸರಿನಲ್ಲಿ ವಿವಿಧ ರೀತಿಯ ಸೂಕ್ಷ್ಮ ಪೋಷಕಾಂಶಗಳು ಇರುವಂತಹ ಕ್ಯಾಲ್ಸಿಯಂ ಮೆಗ್ನೀಸಿಯಂ ಮತ್ತು ಪೊಟ್ಯಾಶಿಯಂ ಇರುವ ಕಾರಣದಿಂದಾಗಿ ಇದು ಬೇರೆಲ್ಲ ಹಾಲಿನ ಉತ್ಪನ್ನಗಳಿಗಿಂತ ತುಂಬಾ ಒಳ್ಳೆಯದು.ಇನ್ನು ಮೋಸರಿನಲ್ಲಿ ಇರುವ ಉತ್ತಮ ಬ್ಯಾಕ್ಟ್ರ್ರಿಯವು ಪ್ರೊಟೀನ್ ಬಿಡುಗಡೆ ಮಾಡುವುದು ಮತ್ತು ಇದರಿಂದ ಅಧಿಕ ರಕ್ತದ ಒತ್ತಡ ಕಡಿಮೆ ಆಗುವುದು. ಪ್ರತಿದಿನ ಸಣ್ಣ ಪ್ರಮಾಣದಲ್ಲಿ ಮೊಸರಿನ ಸೇವನೆ ಮಾಡಿದರೆ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡಬಹುದು.