ಬೆಲ್ಲ ತಿನ್ನುವವರು ಇದನ್ನು ಪೂರ್ತಿಯಾಗಿ ಓದಿ. ನಿಮಗೆ ಆಶ್ಚರ್ಯ ಆಗುತ್ತೆ!

0 120

ಪ್ರಾಚೀನ ಕಾಲದಿಂದಲೂ ಹಬ್ಬ, ಪೂಜೆ ಪುನಸ್ಕಾರಗಳಲ್ಲಿ ಬೆಲ್ಲವನ್ನು ಉಪಯೋಗಿಸಿ ಆಹಾರವನ್ನು ಮತ್ತು ಸಿಹಿ ತಿನಿಸುಗಳನ್ನು ತಯಾರಿ ಮಾಡುತ್ತಿದ್ದರು.ಇಂದಿಗೂ ಹಲವು ಮನೆಯಲ್ಲಿ ಸಾಂಪ್ರದಾಯಕವಾಗಿ ಹೋಳಿಗೆ, ಪಾಯಸ, ಬೆಲ್ಲವನ್ನು ಉಪಯೋಗಿಸಿ ಮಾಡುತ್ತಾರೆ.ಹಾಗಾಗಿ ಬೆಲ್ಲವನ್ನು ಪ್ರತಿಯೊಬ್ಬರ ಮನೆಯಲ್ಲೂ ಬೆಲ್ಲವನ್ನು ಇಷ್ಟಪಟ್ಟು ತಿನ್ನುತ್ತಾರೆ ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಪದಾರ್ಥಗಳಿಗೂ ಸಕ್ಕರೆಯನ್ನು ಬಳಸುತ್ತಿದ್ದಾರೆ.ಹಿಂದಿನ ಕಾಲದಲ್ಲಿ ಯಾರಿಗೂ ಸಹ ಸಕ್ಕರೆ ಕಾಯಿಲೆ ಸಮಸ್ಸೆ ಇರಲಿಲ್ಲ.ಆದರೆ ಇಂದಿನ ದಿನಗಳಲ್ಲಿ ಶುಗರ್, ಬಿಪಿ ಪ್ರತಿಯೊಂದು ಕಾಯಿಲೆಗಳು ಎಲ್ಲರಲ್ಲು ಸಾಮಾನ್ಯವಾಗಿದೆ. ಕಾಲ ಬದಲಾದ ಹಾಗೆ ಸಕ್ಕರೆ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುತ್ತಿದ್ದಾರೆ. ಇದರಿಂದ ಆರೋಗ್ಯದಲ್ಲಿ ತುಂಬಾನೇ ಏರುಪೇರು ಉಂಟಾಗುತ್ತದೆ.ಇದರಿಂದ ಹೃದಯ ಸಂಬಂಧಿಸಿದ ಕಾಯಿಲೆ,ಬಿಪಿ ಶುಗರ್,ಪಿಂಪಲ್ಸ್,ಮುಖದಲ್ಲಿ ಗುಳ್ಳೆ ಆಗುವುದು ಮತ್ತು ಕೂದಲು ಉದುರುವ ಸಮಸ್ಯೆ ಎದುರಾಗುವುದು. ಒಳ್ಳೆಯ ಆಹಾರವನ್ನು ಸೇವಿಸುತ್ತಾ ಬಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಅದಕ್ಕಾಗಿ ಸಕ್ಕರೆ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು.ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇದೆ.

ಬೆಲ್ಲವನ್ನು ಹೇಗೆ ಉಪಯೋಗಿಸಬಹುದು ಎಂದರೆ, ಟೀ ನಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಬಳಸಬಹುದು.ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಜೊತೆಗೆ ಬೆಲ್ಲವನ್ನು ಸೇವಿಸಬೇಕು.ಈ ರೀತಿ ಮಾಡಿದರೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.ರಕ್ತ ಹೀನತೆ ಸಮಸ್ಸೆ ಇರುವವರು ಬೆಲ್ಲವನ್ನು ಸೇವಿಸಬೇಕು.ಇದರಲ್ಲಿ ಐರನ್ ಅಂಶ ಹೆಚ್ಚಾಗಿ ಇರುವುದರಿಂದ RBC ಕೌಂಟ್ ಜಾಸ್ತಿ ಆಗುತ್ತದೆ.ಮುಖದಲ್ಲಿ ಗುಳ್ಳೆ ಕಡಿಮೆ ಆಗುವುದಕ್ಕೆ ಬೆಲ್ಲವನ್ನು ಸೇವಿಸಬೇಕು.

ಕೂದಲು ಉದುರುವ ಸಮಸ್ಸೆ ಇರುವವರು ಒಂದು ತಿಂಗಳು ಬೆಲ್ಲವನ್ನು ನಿಯಮಿತವಾಗಿ ತಿನ್ನುತ್ತಾ ಬಂದರೆ ಕೂದಲಿಗೆ ಬೆಳವಣಿಗೆಗೆ ಬೇಕಾಗುವ ಎಲ್ಲಾ ನ್ಯೂಟ್ರಿಯೆಂಟ್ಸ್ ಸಿಗುತ್ತದೆ ಹಾಗೂ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ.ಸಂಧಿವಾತ, ಕೈ ಕಾಲು ನೋವು, ಮಂಡಿ ನೋವು ಸಮಸ್ಸೆ ಇರುವವರು ಬೆಲ್ಲವನ್ನು ಸೇವಿಸಿದರೆ ಕಡಿಮೆ ಆಗುತ್ತದೆ.ಮೂಳೆ ಗಟ್ಟಿ ಮಾಡುವ ಗುಣ ಇದರಲ್ಲಿ ಇದೆ.ಬೆಲ್ಲದ ಜೊತೆ ಒಣ ಕೊಬರಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬೆಲ್ಲವನ್ನು ಸೇವಿಸಿದರೆ ಹಲ್ಲಿನ ಸಮಸ್ಸೆ ಕಡಿಮೆ ಆಗುತ್ತದೆ.ಬೆಲ್ಲ ಸೇವನೆಯಿಂದ ನಿದ್ರಾಹೀನತೆ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.

ತುಂಬಾ ಬಿಳಿ ಇರುವ ಬೆಲ್ಲವನ್ನು ಬಳಸಬೇಡಿ.ಕಪ್ಪಾಗಿ ಇರುವ ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಲ್ಲಿ ಯಾವುದು ಕೆಮಿಕಲ್ ಮಿಕ್ಸ್ ಇರುವುದಿಲ್ಲ. ಜೊತೆಗೆ ಹೋಳಿಗೆ ಬೆಲ್ಲವನ್ನು ಸಹ ಬಳಸಬಹುದು.ಇನ್ನು ಜೊನಿ ಬೆಲ್ ಅಂತ ಸಿಗುತ್ತದೆ. ಇದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು.ಬೆಲ್ಲದಲ್ಲಿ ಮೆಗ್ನೀಷಿಯಂ, ಪೊಟ್ಯಾಶಿಯಂ, ವಿಟಮಿನ್ ಬಿ6 ಮತ್ತೆ ವಿಟಮಿನ್ ಸಿ ಅಂಶ ತುಂಬಾನೇ ಇದೆ.ಆದ್ದರಿಂದ ಸಕ್ಕರೆಯನ್ನು ಬಳಸದೆ ಇರುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Leave A Reply

Your email address will not be published.