ನೂಲು ಹುಣ್ಣಿಮೆ / ಈ ದೇವರುಗಳಿಗೆ ರಾಖಿ ಕಟ್ಟುವುದರಿಂದ ಯಾವೆಲ್ಲ ಸಮಸ್ಯೆಗಳ ಪರಿಹಾರವಾಗುತ್ತೆ ಗೊತ್ತೇ!

ಆಗಸ್ಟ್ 22 ನೇ ತಾರೀಕು ಭಾನುವಾರ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ. ಇದರ ಜೊತೆ ನೂಲು ಹುಣ್ಣಿಮೆ ಅಂತ ಹೇಳಿ ಕರೆಯುತ್ತಾರೆ. ರಕ್ಷಾಬಂಧನ ದಿವಸ ಜಾನಿವಾರವನ್ನು ಕೂಡ ಬದಲಾವಣೆ ಮಾಡಿಕೊಳ್ಳುತ್ತಾರೆ.ಮುಖ್ಯವಾಗಿ ರಕ್ಷಾಬಂಧನ ಜೊತೆಯಲ್ಲಿ ದೇವರಿಗೂ ಕೂಡ ರಾಖಿಯನ್ನು ಕಟ್ಟುತ್ತಾರೆ.ದೇವರಿಗೆ ರಾಖಿ ಕಟ್ಟುವುದಾದರೆ ಯಾವ ದೇವರಿಗೆ ರಾಖಿ ಕಟ್ಟಬೇಕು ಮತ್ತು ಯಾವ ಬಣ್ಣದ ರಾಖಿಯನ್ನು ಕಟ್ಟಬೇಕು ಹಾಗೂ ಯಾವ ಕಾರಣಕ್ಕೆ ರಾಖಿಯನ್ನು ಕಟ್ಟಬೇಕು ಮತ್ತು ಇದರಿಂದ ಏನು ಉಪಯೋಗ ಆಗುತ್ತದೆ ಎಂದು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ.

ದೇವರುಗಳಿಗೆ ರಾಖಿ ಕಟ್ಟುವುದು ಹಳೆಯ ಸಂಪ್ರದಾಯ ಹಾಗೂ ರಕ್ಷಾಬಂಧನದ ದಿನದಂದು ದೇವರಿಗೆ ರಾಖಿ ಕಟ್ಟಿದರೆ ವರ್ಷಪೂರ್ತಿ ಸಂತೋಷ ಸಿಗುತ್ತದೆ ಮತ್ತು ಇರುವಂತಹ ಎಲ್ಲ ಕಷ್ಟಗಳು ನಿವಾರಣೆಯಾಗುತ್ತದೆ.1, ಗಣೇಶ ದೇವರು / ವಿಜ್ಞಾ ನಿವಾರಕ-ಗಣೇಶನಿಗೆ ಕೆಂಪುಬಣ್ಣದ ರಾಖಿಯನ್ನು ಕಟ್ಟುವುದರಿಂದ ಜೀವನದಲ್ಲಿ ಇರುವಂತಹ ಒತ್ತಡಗಳು, ಸಮಸ್ಯೆಗಳು ಗಣೇಶ ನಿವಾರಣೆ ಮಾಡಿಕೊಡುತ್ತಾನೆ ಎನ್ನುವ ನಂಬಿಕೆಯಿಂದ ಅವತ್ತಿನ ದಿನ ಕೆಂಪುಬಣ್ಣದ ರಾಖಿಯನ್ನು ಕಟ್ಟಬೇಕು. ಗಣೇಶನಿಗೆ ರಾಖಿ ಕಟ್ಟುವುದರಿಂದ ಸಂತೋಷ ಸಮೃದ್ಧಿ ಕೂಡ ಹೆಚ್ಚಾಗುತ್ತ ಹೋಗುತ್ತದೆ.2, ಈಶ್ವರ-ಈಶ್ವರನಿಗೆ ಯಾವ ಬಣ್ಣದ ರಾಖಿಯನ್ನು ಕಟ್ಟಬೇಕು ಎಂದರೆ ನೀಲಿ ಬಣ್ಣದ ರಾಖಿಯನ್ನು ಕಟ್ಟಬೇಕು. ನೀಲಿ ಬಣ್ಣದ ರಾಖಿಯನ್ನು ಕಟ್ಟುವುದರಿಂದ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಸಂತೋಷ ಸಮೃದ್ಧಿ ಹೆಚ್ಚಾಗುತ್ತದೆ.

3, ಕೃಷ್ಣ-ಪೌರಾಣಿಕ ನಂಬಿಕೆಯ ಪ್ರಕಾರ ದ್ರೌಪದಿಯು ಕೃಷ್ಣನಿಗೆ ಒಂದು ರಕ್ಷಾ ಸೂತ್ರವನ್ನು ಕಟ್ಟಿದಾಗಿನಿಂದ ರಾಖಿ ಕಟ್ಟುವ ಸಂಪ್ರದಾಯ ಆರಂಭವಾಹಿತಂತೆ. ಕೃಷ್ಣನು ಕೂಡ ದ್ರೌಪದಿಗೆ ಭರವಸೆಯನ್ನು ನೀಡಿರುತ್ತಾರೆ.ಏನೆಂದರೆ ನಿನ್ನ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಕೂಡ ಪರಿಹಾರ ಮಾಡಿಕೊಡುತ್ತೇನೆ ಎಂದು ಭರವಸೆಯನ್ನು ಕೊಟ್ಟಿರುತ್ತಾರೆ. ಅದೇ ರೀತಿ ಕೃಷ್ಣನು ದ್ರೌಪತಿಯ ಜೀವನದಲ್ಲಿ ತುಂಬಾನೇ ಕಷ್ಟಗಳನ್ನು ಪರಿಹಾರ ಮಾಡಿರುತ್ತಾನೆ. ಕೃಷ್ಣನಿಗೆ ರಾಖಿ ಕಟ್ಟುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ಕೃಷ್ಣನಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟುವುದರಿಂದ ಜೀವನದಲ್ಲಿ ಇರುವ ಕಷ್ಟಗಳು ದೂರವಾಗುತ್ತದೆ.

4, ಆಂಜನೇಯ ಸ್ವಾಮೀ-ಆಂಜನೇಯ ಸ್ವಾಮಿಯನ್ನು ತುಂಬಾ ಜನರು ನಂಬುತ್ತಾರೆ. ಆಂಜನೇಯ ಸ್ವಾಮಿಗೆ ರಾಖಿ ಕಟ್ಟುವುದರಿಂದ ಒಂದು ಮಂಗಳ ದೋಷ ನಿವಾರಣೆಯಾಗುತ್ತದೆ. ಜೊತೆಯಲ್ಲಿ ಶಕ್ತಿ,ಬುದ್ಧಿವಂತಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಆಂಜನೇಯ ಸ್ವಾಮಿಗೆ ಕೆಂಪುಬಣ್ಣದ ರಾಖಿಯನ್ನು ಕಟ್ಟುವುದರಿಂದ ನಿಮ್ಮಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ಮತ್ತು ಶನಿದೋಷ ಕೂಡ ನಿವಾರಣೆ ಆಗುತ್ತದೆ.

5,ಭಗವಾನ್ ವಿಷ್ಣು-ಭಗವಾನ್ ವಿಷ್ಣುವಿಗೆ ಹಳದಿಬಣ್ಣದ ರಾಖಿಯನ್ನು ಕಟ್ಟಿ ಪೂಜೆಯನ್ನು ಮಾಡುವುದರಿಂದ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ. ಪ್ರತಿಯೊಬ್ಬರು ರಕ್ಷಾಬಂಧನವನ್ನು ಆಚರಣೆ ಮಾಡುವುದಾದರೆ ನಂಬಿಕೆ ಇಟ್ಟು ನಿಮ್ಮದೇ ಇಷ್ಟ ಆಗುವ ದೇವರಿಗೆ ಹೇಳಿರುವ ಬಣ್ಣದ ರಾಖಿಯನ್ನು ಕಟ್ಟಿ ಪೂಜೆ ಮಾಡಿ ಮತ್ತು ನಿಮ್ಮ ಕಷ್ಟಗಳನ್ನು ಸಂಕಲ್ಪ ಮಾಡಿ ರಾಖಿಯನ್ನು ಕಟ್ಟಿ.ಈ ರೀತಿ ಮಾಡುವುದರಿಂದ ಖಂಡಿತ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ.

Related Post

Leave a Comment