12 ಮಾವಿನ ಹಣ್ಣನ್ನು 1.2 ಲಕ್ಷಕ್ಕೆ ಮಾರಾಟ ಮಾಡಿದ ಈ ಹುಡುಗಿ ಹೇಗೆ ಗೊತ್ತಾ..??

ಸಾಮಾನ್ಯವಾಗಿ ಒಂದು ಮಾವಿನ ಹಣ್ಣನ್ನು 100 ಅಥವಾ 200 ಅಥವಾ 500 ಅಥವಾ 1000ಕ್ಕೆ ಮಾರಾಟ ಮಾಡಬಹುದು
ಆದರೆ ಇಲ್ಲೊಬ್ಬಳು ಹುಡುಗಿ ಬರೋಬ್ಬರಿ 1 ಮಾವಿನ ಹಣ್ಣಿಗೆ 10,000/- ದಂತೆ 12 ಮಾವಿನ ಹಣ್ಣನ್ನು 1,20,000/- ರೂಪಾಯಿಗೆ ಮಾರಾಟ ಮಾಡಿದ್ದಾಳೆ.ಈ ವಿಷಯ ಎಲ್ಲರಿಗೂ ಆಶ್ಚರ್ಯವೆನಿಸಿದರೂಇದು ಅಪ್ಪಟ 100ಕ್ಕೆ 100ರಷ್ಟು ಸತ್ಯ ವಾಗಿದೆ.

ತುಳಸಿ ಕುಮಾರಿ ಎನ್ನುವ ಜಮ್ಶೇದ್ ಪುರದ ಬಾಲಕಿ 5 ನೇ ತರಗತಿಯಲ್ಲಿ ಓದುತ್ತಿದ್ದು ,ಈಕೆಗೆ ಓದುವುದು ಎಂದರೆ ಪಂಚಪ್ರಾಣ
ಆದರೆ ಕೊರೊನಾದಿಂದ ಲಾಕ್ ಡೌನ್ ಆಗಿದ್ದರಿಂದ ಶಾಲೆ ಮುಚ್ಚಲಾಗಿದೆ ಹಾಗೂ ಆನ್ಲೈನ್ ಕ್ಲಾಸ್ ನಲ್ಲಿ ಪಾಲ್ಗೊಳ್ಳಲು ಆಕೆಯ ಬಳಿ ಸ್ಮಾರ್ಟ್ ಫೋನ್ ಇರಲಿಲ್ಲ ಹೀಗಾಗಿ ಸ್ಥಳೀಯ ಮಾಧ್ಯಮವೊಂದರ ಮೂಲಕ ಮೊಬೈಲ್ ಕೊಡಿಸುವಂತೆ ದಾನಿಗಳಿಗೆ ಮೊರೆ ಇಟ್ಟಿದ್ದಳು ಆದರೆ ಯಾರು ಕೂಡ ಆಕೆಯ ಬೇಡಿಕೆಗೆ ಸ್ಪಂದಿಸಲಿಲ್ಲ ಹೀಗಾಗಿ ಮಾವಿನಹಣ್ಣನ್ನು ಮಾರಿ ದುಡ್ಡು ಸಂಪಾದಿಸಿ ಮೊಬೈಲ್ ಕೊಂಡುಕೊಳ್ಳಲು ಮುಂದಾಗಿದ್ದಳು.

ಈ ವಿಷಯ ತಿಳಿದ ಶಿಕ್ಷಣ ಸಂಸ್ಥೆಯೊಂದರ ವ್ಯವಸ್ಥಾಪಕ ನಿರ್ದೇಶಕ ಅಮೇಯ ಹೇಟೆ ಆಕೆಯ ಸಹಾಯ ಮಾಡಲು ಮುಂದಾಗಿ ತುಳಸಿ ಕುಮಾರಿ ಮಾವಿನಹಣ್ಣು ಮಾರುತ್ತಿದ್ದ ಜಾಗಕ್ಕೆ ಹೋಗಿ 1 ಹಣ್ಣಿಗೆ 10,000/- ಸಾವಿರ ರೂಪಾಯಿಯಂತೆ ಒಟ್ಟು 1 ಲಕ್ಷದ 20 ಸಾವಿರ ರೂಪಾಯಿಯಂತೆ 12 ಮಾವಿನ ಹಣ್ಣನ್ನು ಖರೀದಿಸಿದ್ದಾರೆ.ಹಾಗೂ ಆಕೆಯ ತಂದೆಯ ಖಾತೆಗೆ ಹಣವನ್ನು ಕೂಡ ವರ್ಗಾಯಿಸಿದ್ದಾರೆ.ಬಳಿಕ ಅವರ ತಂದೆ ತುಳಸಿ ಕುಮಾರಿ ಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ.

ತುಳಸಿಕುಮಾರಿಯ ಉದ್ದೇಶ ಹಾಗೂ ಅದಕ್ಕಾಗಿ ಆಕೆ ಪಟ್ಟ ಶ್ರಮ ಇದಕ್ಕೆಲ್ಲಾ ಒಳ್ಳೆಯ ಪ್ರತಿಫಲ ಸಿಕ್ಕಿದೆ.
ಆಕೆಯ ಶಿಕ್ಷಣಕ್ಕೆ ಇನ್ನಷ್ಟು ನೆರವು ನೀಡುವುದಾಗಿ ಅಮೇಯ ಹೇಟೆ ತಿಳಿಸಿದ್ದಾರೆ.

ಧನ್ಯವಾದಗಳು.

Related Post

Leave a Comment