ಸ್ತ್ರೀಯರಲ್ಲಿ ಲಕ್ಷ್ಮೀ ಕಳೆ ಯಾರಿಗಿರುತ್ತದೆ?ಪತ್ತೆ ಮಾಡುವುದು ಹೇಗೆ!

ಹೆಣ್ಣುಮಕ್ಕಳನ್ನು ದೇವಿ ಲಕ್ಷ್ಮೀಗೆ ಹೋಲಿಸಲಾಗುತ್ತದೆ ಏಕೆಂದರೆ ಮನೆಯಲ್ಲಿ ಹೆಣ್ಣುಮಕ್ಕಳು ಖುಷಿಖುಷಿಯಾಗಿದ್ದರೆ ಆ ಮನೆ ಸಮೃದ್ಧ ವಾಗುತ್ತದೆ ಎಂಬ ಪ್ರತೀತಿ ಇದೆ.ಇನ್ನೂ ಸ್ತ್ರೀಯರನ್ನು ಫಲ ರೂಪಿಣಿ ಎಂದೂ ಕರೆಯಲಾಗುತ್ತದೆ ಏಕೆಂದರೆ
ಸ್ತ್ರೀಯರು ಇರುವ ಜಾಗದಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಸದಾ ಇರುತ್ತದೆ.

ಇನ್ನೂ ಸ್ತ್ರೀಯರು ಎಲ್ಲಿ ಇರುತ್ತಾರೋ ಅಲ್ಲಿ ಲಕ್ಷ್ಮೀಯ ಅಂಶ ಖಂಡಿತವಾಗಿಯೂ ಇರುತ್ತದೆ ಹಾಗಾಗಿ ಸ್ತ್ರೀಯರನ್ನು ಯಾವುದೇ ಕಾರಣಕ್ಕೂ ನಿಂದಿಸಬಾರದು, ನರಳಿಸಬಾರದು, ಅಳಿಸಬಾರದು,ನೋಯಿಸಬಾರದು ಹಾಗೂ ದಂಡಿಸಬಾರದು.ಒಂದು ವೇಳೆ ನೀವು ಸ್ತ್ರೀಯರನ್ನು ನಿಂದಿಸಿದ್ದೆ ಆದಲ್ಲಿ ಸ್ತ್ರೀಯರ ಕಣ್ಣಲ್ಲಿ ನೀರು ಬರಿಸಿದ್ದೆ ಆದಲ್ಲಿ ಆ ಮನೆಯಲ್ಲಿ ದರಿದ್ರ ಸೃಷ್ಟಿಯಾಗುತ್ತದೆ.

ಇನ್ನೂ ಸ್ತ್ರೀಯು ಲಕ್ಷ್ಮೀ ಸ್ವರೂಪಿ , ಫಲ ರೂಪಿಣಿ ಹಾಗಾಗಿ ಆಕೆಯ ಮುಖದಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ.ಇನ್ನೂ ಪ್ರತಿಯೊಬ್ಬ ಸ್ತ್ರೀಯಲ್ಲೂ ಲಕ್ಷ್ಮೀ ಅಂಶ ಇದ್ದೇ ಇರುತ್ತದೆ ಆದರೆ ಕೆಲವು ವಿಶೇಷವಾದ ಸ್ತ್ರೀಯರಲ್ಲಿ ಲಕ್ಷ್ಮೀ ಅಂಶ ಹೆಚ್ಚಾಗಿರುತ್ತದೆ.
ಇನ್ನೂ ಅಂತಹ ಸ್ತ್ರೀಯರನ್ನು ಕಂಡು ಹಿಡಿಯುವ ಬಗೆ ಹೇಗೆ ಎಂಬುದನ್ನು ನೋಡುವುದಾದರೆ

ಇನ್ನೂ ಲಕ್ಷ್ಮೀ ಕಳೆ ಹೆಚ್ಚಾಗಿರುವ ಸ್ತ್ರೀಯರಲ್ಲಿ ಈ ಕೆಳಗಿನ ಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತದೆ.

ಹಣೆಯ ಹತ್ತಿರ ಕೆಂಪು ಛಾಯೆ ,ನಾಸಿಕ ಮೂಗು ,ಗರುಡ ನಯನ ಅಂದರೆ ತೀಕ್ಷ್ಣ ದೃಷ್ಟಿ ,ಹಣೆ ಎತ್ತರ ,ಹುಬ್ಬು ದಟ್ಟ ದಪ್ಪ ,
ಕೋಲು ಮುಖ ,ಕೆಂಪು ಛಾಯೆ ,ಶುಕ್ರನ ಸೌಂದರ್ಯ ಪ್ರಿಯ ಇನ್ನೂ ಮುಖ್ಯವಾಗಿ ಶುಕ್ರನ ಲಕ್ಷಣವುಳ್ಳಂತಹ ಸ್ತ್ರೀಯರಲ್ಲಿ ಲಕ್ಷ್ಮೀ ಕಳೆ ಹೆಚ್ಚಾಗಿರುತ್ತದೆ.

ಇನ್ನೂ ಸ್ತ್ರೀಯರು ತಮಗೆ ಗೊತ್ತಿಲ್ಲದ ಹಾಗೆ ಹೆಚ್ಚಾಗಿ ಅರಿಶಿಣ ,ಕುಂಕುಮ ,ಬಳೆ ,ಹೂವು ,ಗಂಧ ,ದೈವ ಪೂಜೆ ಪುನಸ್ಕಾರಗಳಿಗೆ ಹೆಚ್ಚು ಒತ್ತನ್ನು ನೀಡುತ್ತಾರೆ ಹಾಗೂ ಆಧ್ಯಾತ್ಮಿಕವಾಗಿ ಮನಸ್ಸು ,ಸದಾಚಾರದ ಚಿಂತನೆ ಹೆಚ್ಚಾಗಿ ಮಾಡುತ್ತಾರೆ.ಕೆಲವು ಬಾರಿ ತಮಗೆ ಗೊತ್ತಿಲ್ಲದೆ ಕೆಲವು ಅಸಹಾಯಕರಿಗೆ ಸಹಾಯ ಮಾಡುತ್ತಾರೆ.ಇನ್ನೂ ಹಣೆಗೆ ಲಕ್ಷಣವಾಗಿ ಕುಂಕುಮವನ್ನು ಇಟ್ಟುಕೊಂಡು ಸಾಕ್ಷಾತ್ ಲಕ್ಷ್ಮೀ ದೇವಿಯ ಸ್ವರೂಪ ಳಂತೆ ಕಾಣಿಸುತ್ತಾರೆ.ಇನ್ನೂ ಇಂತಹ ಸ್ತ್ರೀಯರನ್ನು ನಾವು ಒಮ್ಮೆ ನೋಡಿದರೆ ಸಾಕು ನಮ್ಮ ಮನಸ್ಸಿನಲ್ಲಿ ಪೂಜ್ಯ ಭಾವನೆ ಮೂಡುತ್ತದೆ ಹಾಗೂ ಇದರಿಂದ ಅವರನ್ನು ಬಹಳ ಸುಲಭವಾಗಿ ಇವರಲ್ಲಿ ದೇವಿ ಲಕ್ಷ್ಮೀ ದೇವಿಯ ಅಂಶ ಇದೆ ಎಂದು ತಿಳಿದುಕೊಳ್ಳಬಹುದಾಗಿದೆ.

ಧನ್ಯವಾದಗಳು

Related Post

Leave a Comment