ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿಮಗೆ ಬಿಪಿ ಇರಬಹುದು!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ ಸಮಸ್ಸೆ ಸಾಮಾನ್ಯವಾಗಿದೆ. ಸಕ್ಕರೆ ಕಾಯಿಲೆ ಇರುವವರಿಗೆ ಬಿಪಿ ಬರುವುದು ತುಂಬಾನೇ ಕಾಮನ್ ಆಗಿದೆ.ಇದಕ್ಕೆ ಮುಖ್ಯ ಕಾರಣ ಜೀವನದ ಶೈಲಿ ಅಥವಾ ಆಹಾರದ ಪದ್ಧತಿ ಆಗಿರಬಹುದು. ಮನುಷ್ಯನ ದೇಹದಲ್ಲಿ ಬಿಪಿ ಹೆಚ್ಚಾದರೂ ಕೂಡ ತೊಂದರೆ ಆಗುತ್ತದೆ ಹಾಗೂ ಬಿಪಿ ಕಡಿಮೆ ಆದರೂ ಕೂಡ ತೊಂದರೆ ಆಗುತ್ತದೆ.ಮೊದಲು ವೈದ್ಯರ ಬಳಿ ಹೋದರೆ ಬಿಪಿ ಇದಿಯೋ ಇಲ್ಲವೋ ಅಂತ ಕೆಲವೇ ನಿಮಿಷಗಳಲ್ಲಿ ಪರೀಕ್ಷೆಗಳ ಮೂಲಕ ಗೊತ್ತಾಗುತ್ತದೆ.

ಬಿಪಿ ಇದ್ದಾರೆ ಈ ರೀತಿಯ ಲಕ್ಷಣಗಳು ದೇಹದಲ್ಲಿ ಆಗುತ್ತವೆ.ಹೃದಯ ಬಡಿತದಲ್ಲಿ ಏರು ಪೆರು ಉಂಟಾಗುತ್ತದೆ.*ತಲೆ ಸುತ್ತು ಬರುತ್ತದೆ,ದೇಹದಲ್ಲಿ ನಿಶಕ್ತಿ ಉಂಟಾಗುತ್ತದೆ,ಏಕಾಗ್ರತೆ ಕೊರತೆ ಉಂಟಾಗುತ್ತದೆ,ದೃಷ್ಟಿ ಕೂಡ ಮಂದ ಆಗುತ್ತದೆ.*ಹೆಚ್ಚು ಬಾಯಾರಿಕೆ,ಉಸಿರಾಟದ ತೊಂದರೆ,ನಿದ್ರಾ ಹೀನತೆ.ರಕ್ತ ಸಂಚಾರದಲ್ಲಿ ಏರು ಪೆರು ಉಂಟಾಗುವುದು.ಈ ಎಲ್ಲಾ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡರೆ ರಕ್ತದ ಒತ್ತಡದ ಸಮಸ್ಸೆ ಇರಬಹುದು.ಇನ್ನು ರಕ್ತ ಒತ್ತಡ ಕಡಿಮೆ ಅದರೆ ಉಪ್ಪು ಮತ್ತು ಸಕ್ಕರೆಯನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಸಲಹೆ ಮತ್ತು ಸೂಚನೆ ನೀಡಲಾಗುತ್ತದೆ.ಇದು ರಕ್ತದಲ್ಲಿ ಇರುವ ಇನ್ಸೂಲಿನ್ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಹಾಯವಾಗುತ್ತದೆ.

ಅತಿಯಾದ ದೇಹ ತೂಕ ಹೊಂದಿದವರು ದೇಹದಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.ಹಾಗಾಗಿ ಎತ್ತರಕ್ಕೆ ತಕ್ಕಂತೆ ದೇಹದ ತೂಕವನ್ನು ಹೊಂದಿರಬೇಕು.ಇನ್ನು ಪ್ರತಿದಿನ ಯೋಗ ಮಾಡುವುದು, ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳನ್ನು ಮಾಡುವುದನ್ನು ನೀವು ಮಾಡುತ್ತಿದ್ದಾರೆ ನೀವು ಅರೋಗ್ಯದಿಂದ ಇರಲು ಸಹಾಯವಾಗುತ್ತದೆ. ಆದಷ್ಟು ಕೊಲೆಸ್ಟ್ರೇಲ್ ಅಂಶ ಇರುವ ಪದಾರ್ಥವನ್ನು ಕಡಿಮೆ ಸೇವಿಸಬೇಕು.ಊಟದಲ್ಲಿ ಕಡಿಮೆ ಉಪ್ಪನ್ನು ಬಳಸಬೇಕು.

ಆಹಾರವನ್ನು ದೀರ್ಘ ಕಾಲ ಇಟ್ಟಾಗ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಉಪ್ಪು ಮತ್ತು ನಿರ್ದಿಷ್ಟವಾಗಿ ಉಪ್ಪಿನಲ್ಲಿ ಇರುವ ಸೋಡಿಯಂ ಅಧಿಕ ರಕ್ತದ ಒತ್ತಡ ಹೃದಯಘಾತಕ್ಕೆ ಕಾರಣವಾಗುತ್ತದೆ.ಇನ್ನು ಫೈಬರ್ ಅಂಶ ಇರುವಂತಹ ಆಹಾರವನ್ನು ಚೆನ್ನಾಗಿ ಸೇವನೆ ಮಾಡಬೇಕು. ಸೊಪ್ಪು,ತರಕಾರಿ, ಹಣ್ಣುಗಳನ್ನು ಸೇವನೆ ಮಾಡಿ. ಈ ರೀತಿ ಮಾಡಿದರೆ ನಿಮ್ಮ ರಕ್ತದ ಒತ್ತಡ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ ಮತ್ತು ಆಹಾರದಲ್ಲಿ ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವನೆ ಮಾಡಿ.ಇದು ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಬಹುದು.ಇನ್ನು ವಾರದಲ್ಲಿ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ ಸೇವನೆ ಮಾಡಿ. ಇದು ರಕ್ತ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

Related Post

Leave a Comment