ದೀಪವನ್ನು ಬೆಳಗಿಸಿದ ನಂತರ ಇಂತಹ ಶಬ್ದ ಸಂಕೇತ ಬಂದರೆ ಅದಕ್ಕೆ ಏನು ಅರ್ಥ?

ಪ್ರತಿಯೊಬ್ಬರೂ ಪ್ರತಿದಿನ ದೀಪಾರಾಧನೆಯನ್ನು ಮಾಡುತ್ತಾರೆ. ದೀಪವನ್ನು ಹಚ್ಚಿದ ನಂತರ ಬರುವ ಜ್ಯೋತಿ ಹಲವರು ಸೂಚನೆಯನ್ನು ಕೊಡುತ್ತದೆ.ಮೊದಲು ಕಂಚು, ಹಿತ್ತಾಳೆ, ತಾಮ್ರದಿಂದ ಮಾಡಿದ ದೀಪವನ್ನು ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕಬ್ಬಿಣದ ದೀಪವನ್ನು ಉಪಯೋಗಿಸಬಾರದು ಮತ್ತು ದೀಪ ಹಚ್ಚುವಾಗ 2 ಅಥವಾ 3 ಬತ್ತಿಯನ್ನು ಹಾಕಿ ದೀಪವನ್ನು ಬೆಳಗಬೇಕು. ಒಂದು ಬತ್ತಿಯನ್ನು ಯಾವುದೇ ಕಾರಣಕ್ಕೂ ದೀಪ ಹಚ್ಚುವ ಸಂದರ್ಭದಲ್ಲಿ ಹಚ್ಚಬಾರದು.ಇನ್ನು ದೀಪದ ಕೆಳಗೆ ಒಂದು ತಟ್ಟೆ ಅಥವಾ ವಿಳೇ ದೆಲೆಯನ್ನು ಇಡಬೇಕು.

ದೀಪವನ್ನು ಹಚ್ಚಿ ದಾಗ ಯಾವ ರೀತಿ ಬೆಳಗುತ್ತಿದೆ ಎಂದು ಪ್ರತಿಯೊಬ್ಬರು ಗಮನಿಸಬೇಕು. ಒಂದು ವೇಳೆ ದೀಪ ಉದ್ದವಾಗಿ ಬೆಳಗುತ್ತಿದ್ದಾರೆ ಮನೆಯಲ್ಲಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಮತ್ತು ಸುಖ ಶಾಂತಿ ನೆಮ್ಮದಿ ಇರುತ್ತದೆ ಎಂದು ಅರ್ಥ.ದೀಪವನ್ನು ಹಚ್ಚಿದ ಸಮಯದಲ್ಲಿ ಚಟಪಟ ಎಂದು ಶಬ್ದ ಬರುತ್ತದೆ. ಒಂದು ವೇಳೆ ಈ ರೀತಿ ಬಂದರೆ ಮನೆಯ ಸದಸ್ಯರಿಗೆ ಅವಮಾನ ಅಥವಾ ಪೆಟ್ಟು ಆಗುತ್ತದೆ ಎಂದು ಅರ್ಥ.

ಇನ್ನು ಸಣ್ಣದಾಗಿ ದೀಪ ಹಚ್ಚಿದರು ಅದು ಜೋರಾಗಿ ಬೆಳಗುತ್ತದೆ ಮತ್ತು ಆ ಕಡೆ ಈ ಕಡೆ ಅಲ್ಲಡುತ್ತಿರುತ್ತದೆ.ಇದು ಮನೆಯ ಸದಸ್ಯರಲ್ಲಿ ದೀರ್ಘಕಾಲದ ವ್ಯಾಧಿಯ ತೊಂದರೆಗಳು ಮನೆಯ ಸದಸ್ಯರಿಗೆ ಆಗುತ್ತದೆ ಎನ್ನುವ ಸೂಚನೆ ಅದು ಆಗಿರುತ್ತದೆ.ಇನ್ನು ಎಷ್ಟೇ ದೀಪ ಹಚ್ಚುವುದಕ್ಕೆ ಪ್ರಯತ್ನ ಮಾಡಿದರು ಸಹ ಆಗುವುದಿಲ್ಲ.ಈ ರೀತಿ ಅದರೆ ಹತ್ತಿರದವರ ಸಾವು ಆಗುತ್ತದೆ ಎಂದು ಅರ್ಥ. ಈ ರೀತಿಯಾದರೆ ಮೊದಲು ದೀಪಕ್ಕೆ ಶಾಂತಿಯನ್ನು ಮಾಡಬೇಕು. ಮೊದಲು ಒಂದು ಹಿತ್ತಾಳೆ ತಟ್ಟೆಯನ್ನು ತೆಗೆದುಕೊಂಡು ಸ್ವಲ್ಪ ಉಪ್ಪು ಮತ್ತು ದೀಪವನ್ನು ಇಟ್ಟು ದೀಪ ಜ್ಯೋತಿ ಪರಬ್ರಹ್ಮ ಎಂದು ಹೇಳುತ್ತಾ ಮನೆಯಲ್ಲಿ ಯಾವುದೇ ರೀತಿಯ ಸಾವು ಆಗದೇ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ನಂತರ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತದೆ.

Related Post

Leave a Comment