ಪಲ್ಲಿ ನಿಮ್ಮ ಮೇಲೆ ಬಿದ್ದರೆ ಏನಾಗುತ್ತದೆ ಗೊತ್ತಾ?ಪಲ್ಲಿ ಕೊಡುವ ಮುನ್ಸೂಚನೆ!
ಪಲ್ಲಿಗಳು ಎಲ್ಲರ ಮನೆಯಲ್ಲಿಯೂ ಕಾಣಿಸುತ್ತವೆ ಹಾಗೂ ಈ ಪಲ್ಲಿಗಳು ಕೆಲವೊಮ್ಮೆ ಕೆಲವು ಮುಖ್ಯವಾದ ಸೂಚನೆಗಳನ್ನು ನೀಡುತ್ತವೆ ಅಂತಹ ಸೂಚನೆಗಳಿಂದ ನವು ಮುಂಬರುವ ಶುಭ ಶಕುನ ಮತ್ತು ಅಪಶಕುನದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.ಪಲ್ಲಿ ಮನೆಯಲ್ಲಿ ಇರುವುದರಿಂದ ಮನೆಯಲ್ಲಿರುವ ಚಿಕ್ಕಪುಟ್ಟ ಕ್ರಿಮಿಕೀಟಗಳು ತೊಲಗುತ್ತವೆ ಆದರೆ ಕೆಲವೊಮ್ಮೆ ಪಳ್ಳಿಗಳು ಮುನ್ಸೂಚನೆಯಾಗಿ ನಮ್ಮ ಮೇಲೆ ಬೀಳುತ್ತದೆ ಅದರ ಫಲವೇನು ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..
ಹೊರಗಡೆ ಹೋಗಿ ಯಾವುದೇ ಮುಖ್ಯವಾದ ಕೆಲಸವನ್ನು ಮಾಡಿ ಮನೆಯ ಒಳಗೆ ಬಂದಾಗ ಪಲ್ಲಿ ಯನ್ನು ನೋಡಿದರೆ ಆ ಕೆಲಸ ಫಲಿಸುವುದಿಲ್ಲ ಹಾಗೂ ಆ ಕೆಲಸ ದಲ್ಲಿ ನಮಗೆ ನಷ್ಟ ಉಂಟಾಗುತ್ತದೆ ಹಾಗಾಗಿ ಹೊರಗಡೆಯಿಂದ ಬಂದ ನಂತರ ತಕ್ಷಣ ಮನೆಯ ಮೇಲ್ಭಾಗವನ್ನು ನೋಡಬೇಡಿ.ಇನ್ನೂ ಪಲ್ಲಿ ನಮ್ಮ ತಲೆಯ ಮೇಲೆ ಬಿದ್ದರೆ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಹಾಗೂ ಗಂಡಾಂತರ ಎದುರಾಗುವ ಮುನ್ಸೂಚನೆಯಾಗಿರುತ್ತದೆ.ಪಲ್ಲಿ ನಿಮ್ಮ ಬಲ ಭುಜದ ಮೇಲೆ ಬಿದ್ದರೆ ಹಣ ಬರಲಿದೆ ಎಂದು ಅರ್ಥ.
ಪಲ್ಲಿ ಹೊಸ ಮನೆ ಅಥವಾ ಬಾಡಿಗೆಯ ಹೊಸ ಮನೆಗೆ ಪ್ರವೇಶಿಸುವಾಗ ಸತ್ತು ಬಿದ್ದಿರುವುದನ್ನು ನೋಡಿದರೆ ಇದು ಅಪಶಕುನ ಸೂಚಿಸುತ್ತದೆ ಹಾಗೂ ಯಾವುದೇ ಕಾರಣಕ್ಕೂ ಅಂತಹ ಮನೆಗೆ ಹೋಗಬಾರದು ಇದರಿಂದ ಆರೋಗ್ಯದ ಸಮಸ್ಯೆ ಮತ್ತು ಆರ್ಥಿಕ ಸಮಸ್ಯೆ ಎದುರಾಗಬಹುದು.ಪಲ್ಲಿಗಳನ್ನು ಯಾವುದೇ ಕಾರಣಕ್ಕೂ ಸಾಯಿಸಬಾರದು ಏಕೆಂದರೆ ಇದರಿಂದ ದೇವಿ ಮಹಾಲಕ್ಷ್ಮಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.ಅಡುಗೆ ಮನೆಯಲ್ಲಿ ಪಲ್ಲಿ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಏಕೆಂದರೆ ಪಲ್ಲಿ ಆಹಾರದ ಮೇಲೆ ಬಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ತುಂಬ ಕೆಟ್ಟ ಸಮಸ್ಯೆಯನ್ನುಂಟು ಮಾಡುತ್ತದೆ.
ಧನ್ಯವಾದಗಳು.