ಈ ಸೂಚನೆ ಬಂದರೆ ನಿಮಗೆ ಗಂಡಾಂತರ ಕಾದಿದೆ ಎಂದು ಅರ್ಥ!

ಸಾಮಾನ್ಯವಾಗಿ ಕಷ್ಟಗಳು ಎಲ್ಲರ ಬದುಕಲ್ಲೂ ಬರುವುದು ಸಹಜ ಆದರೆ ಕೆಲವೊಮ್ಮೆ ಸಹಿಸಲಾರದಷ್ಟು ಕಷ್ಟ ನಷ್ಟಗಳು ಉಂಟಾಗುತ್ತಿದ್ದರೆ ಅದಕ್ಕೆ ಅರ್ಥ ಬೇರೆಯೇ ಇರುತ್ತದೆ.ಇನ್ನೂ ಈ ರೀತಿ ಬಿಟ್ಟು ಇನ್ನೂ ಕೆಲವು ಸೂಚನೆಗಳು ಆಗುತ್ತಿದ್ದರೆ ಅದರ ಅರ್ಥ ನಿಮಗೆ ದೊಡ್ಡ ಗಂಡಾಂತರ , ಕಷ್ಟನಷ್ಟಗಳು ಉಂಟಾಗಲಿವೆ ಎಂಬುದರ ಸೂಚನೆಯಾಗಿರುತ್ತದೆ ಅಂತಹ ಕೆಲವು ವಿಷಯಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..

ಯಾವುದೇ ವ್ಯಕ್ತಿ ತನಗರಿವಿಲ್ಲದೆ ಬಡವನಾಗುವುದು ಅಥವಾ ಅತೀ ಕಷ್ಟಗಳನ್ನು ಅನುಭವಿಸುವ ಮುನ್ನ ಈ ಕೆಲವು ಮುನ್ಸೂಚನೆಗಳು ಬರುತ್ತದೆ.ಮನೆಯಲ್ಲಿ ಯಾವುದೇ ಕಾರಣವಿಲ್ಲದೆ ತುಳಸಿ ಗಿಡವು ಒಣಗಿದರೆ ಅಥವಾ ಒಣಗುತ್ತಿದ್ದರೆ ಅಂತಹ ಮನೆಯಲ್ಲಿ ಬಹಳ ಕಷ್ಟ ನಷ್ಟಗಳು ತೊಂದರೆಗಳು ಉಂಟಾಗುತ್ತದೆ.ಮನೆಯಲ್ಲಿ ತಯಾರಿಸಿರುವ ಅಡುಗೆಗೆ ಹುಳುಗಳು ಬೀಳುತ್ತಿದ್ದರೆ ಅದರ ಅರ್ಥ ನಿಮಗೆ ಯಾವುದೊ 1 ದೊಡ್ಡ ಸಮಸ್ಯೆ ಎದುರಾಗಲಿದೆ.

ಮನೆಯಲ್ಲಿ ಇಟ್ಟಿರುವಂತಹ ಯಾವುದೇ ಗಿಡಗಳು ಒಣಗಿದರೆ ಅಥವಾ ಬಾಡಿದ ರೀತಿ ಕಾಣಿಸಿದರೆ ಅದರ ಅರ್ಥ ಮನೆಗೆ ಮತ್ತು ಮನೆಯ ಕುಟುಂಬ ಸದಸ್ಯರಿಗೆ ಯಾವುದೋ ಒಂದು ರೀತಿಯ ಕಠಿಣ ತೊಂದರೆಗಳು ಎದುರಾಗುತ್ತದೆ ಎಂದು ಅರ್ಥ.ಕಸ ಗುಡಿಸುವ ಪೊರಕೆಗಳನ್ನು ತಾಯಿ ಮಹಾಲಕ್ಷ್ಮೀ ಗೆ ಹೋಲಿಸಲಾಗಿದೆ ಹಾಗಾಗಿ ಯಾವುದೇ ಕಾರಣಕ್ಕೂ ಪೊರಕೆಯನ್ನು ಕಾಲಿನಲ್ಲಿ ತುಳಿಯಬಾರದು.ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರಾದರೂ ಪೊರಕೆಯನ್ನು ಕಾಲಿನಲ್ಲಿ ತುಳಿಯುತ್ತಿದ್ದರೆ ಇದರ ಅರ್ಥ ಅವರ ಮನೆಗೆ ಯಾವುದೋ ಒಂದು ದೊಡ್ಡ ಸಂಕಷ್ಟ ಎದುರಾಗಲಿದೆ ಎಂಬುದರ ಮುನ್ಸೂಚನೆ ಇದಾಗಿರುತ್ತದೆ.

ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡಬೇಡಿ ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.ಮನೆಯಲ್ಲಿ ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು
ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.ಯಾವುದೇ ಮುಖ್ಯವಾದ ಕೆಲಸಕ್ಕೆ ಹೋಗುವ ಆಗ ಪಲ್ಲಿ ಏನಾದರೂ ಕಾಣಿಸಿಕೊಂಡರೆ ಆ ಕೆಲಸ ಫಲಿಸುವುದಿಲ್ಲ ಮತ್ತು ಅದರಲ್ಲಿ ನಷ್ಟ ವುಂಟಾಗುತ್ತದೆ.ಮೇಲೆ ತಿಳಿಸಿರುವ ಯಾವುದೇ ರೀತಿಯ ಮುನ್ಸೂಚನೆಗಳು ನಿಮಗೆ ಆಗಿದ್ದಲ್ಲಿ ಖಂಡಿತ ನಿಮಗೆ ಯಾವುದೋ ಒಂದು ಸಮಸ್ಯೆ ಎದುರಾಗಲಿದೆ ಎಂದು ಅರ್ಥ.

ಧನ್ಯವಾದಗಳು.

Related Post

Leave a Comment