ಮಾಘ ಸ್ನಾನ ಯಾವಾಗ ಆರಂಭ ಮತ್ತು ಅಂತ್ಯ? ಸ್ನಾನದ ನೀರಿಗೆ ಏನು ಬೇರೆಸಬೇಕು? ಸೂರ್ಯನಿಗೆ ಅರ್ಘ್ಯ ಕೊಡುವ ವಿಧಾನ!

ಮಾಘ ಸ್ನಾನದ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತೇನೆ.ಈ ಮಾಘ ಸ್ನಾನ ಜನವರಿ 17ನೇ ತಾರೀಕು ಸೋಮವಾರ ಹುಣ್ಣಿಮೆ ಬರುತ್ತದೆ.ಈ ಹುಣ್ಣಿಮೆಗೆ ಪುಷ್ಯಾ ಮಾಸ ಹುಣ್ಣಿಮೆ ಎಂದು ಹೇಳುತ್ತಾರೆ.ಈ ಮಾಘ ಸ್ನಾನವು ಪುಷ್ಯಾ ಮಾಸ ಹುಣ್ಣಿಮೆ ಇಂದ ಪ್ರಾರಂಭವಾಗಿ ಮಾಘ ಹುಣ್ಣಿಮೆಗೆ ಮುಕ್ತಾಯ ಆಗುತ್ತದೆ.ಒಂದು ತಿಂಗಳವರೆಗೂ ಈ ಮಾಘ ಸ್ನಾನ ಇರುತ್ತದೆ.

ಈ ಮಾಘ ಸ್ನಾನದ ಮಹತ್ವವೇನು ಅನ್ನುವುದಾದರೆ ಈ ಮಾಘ ಮಾಸದಲ್ಲಿ ಸ್ನಾನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಜೊತೆಯಲ್ಲಿ ದಾನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.ಉಪವಾಸ ಇರುವುದು ಮತ್ತು ಸ್ನಾನ ಅದನಂತರ ಸೂರ್ಯನಾರಾಯಣನಿಗೆ ಅರ್ಘ್ಯ ಕೊಡುವುದು.ಈ ಮಾಘ ಮಾಸದ ಸ್ನಾನವನ್ನು ಆದಷ್ಟು ಬ್ರಾಹ್ಮೀಮುಹೂರ್ತದಲ್ಲಿ ಮಾಡಬೇಕು.ಬ್ರಾಹ್ಮೀ ಮುಹೂರ್ತ ಎಂದರೆ ಬೆಳಗಿನ ಜಾವಾ 4:00 ಗಂಟೆಯಿಂದ 5:00 ಗಂಟೆವರೆಗೂ ಮಾಡಬೇಕಾಗುತ್ತದೆ. ಈ ರೀತಿ ಮಾಡಿದರೆ ನಿಮ್ಮ ಎಂತಹ ಕಷ್ಟ ಇದ್ದರೂ ಪರಿಹಾರವಾಗುತ್ತದೆ.ಯಾವುದೇ ಕೆಲಸ ಮಾಡುವಾಗ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿದರೆ ಹೆಚ್ಚು ಯಶಸ್ಸು ಸಿಗುತ್ತದೆ. ಇನ್ನು ಸೂರ್ಯೋದಯ ಆದ ನಂತರ ಸ್ನಾನ ಮಾಡಿದರೆ ಕನಿಷ್ಠ ಫಲ ಸಿಗುವುದು.

ಮಾಘ ಸ್ನಾನ ಪ್ರಾರಂಭ ಮಾಡುವ ಮುನ್ನ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಹಿಂದಿನ ದಿನ ಉಪವಾಸವನ್ನು ಮಾಡಿ ಅಥವಾ ಹಾಲು ಹಣ್ಣನ್ನು ಸೇವನೆ ಮಾಡಬೇಕು. ನಂತರ ಬ್ರಾಹ್ಮೀಮುಹೂರ್ತದಲ್ಲಿ ಸ್ನಾನವನ್ನು ಮಾಡಬೇಕು ಮತ್ತು ಸ್ನಾನ ಮಾಡುವ ಸಂದರ್ಭದಲ್ಲಿ ಸ್ನಾನದ ನೀರಿಗೆ ಸ್ವಲ್ಪ ಚಿಟಿಕೆ ಅರಿಶಿಣ ಅಥವಾ ಗರಿಕೆ ಹಾಕಿಕೊಂಡು ಸ್ನಾನ ಮಾಡಬೇಕಾಗುತ್ತದೆ. ಆದಷ್ಟು ಸಂಕಲ್ಪ ಮಾಡಿಕೊಂಡು ಮಾಘ ಸ್ನಾನವನ್ನು ಮಾಡಬೇಕು. ಸಂಕಲ್ಪ ಮಾಡುವುದು ಹೇಗೆ ಎಂದರೆ ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಸಂಕಲ್ಪ ಮಾಡಿದ ನಂತರ ಸ್ನಾನವನ್ನು ಮಾಡಬೇಕು.

ಈ ರೀತಿಯಾಗಿ ಸಂಕಲ್ಪ ಮಾಡಿಕೊಂಡು ಸ್ನಾನವನ್ನು ಮಾಡಿದರೆ ನಿಮ್ಮ ಯಾವುದೇ ಒಂದು ಕೋರಿಕೆಗಳು ಇದ್ದರು ಕೂಡ ಬೇಗಾ ಈಡೇರುತ್ತದೆ. ಸ್ನಾನದ ನಂತರ ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು. ಸೂರ್ಯ ದೇವರನ್ನು ನೆನಪಿಸಿಕೊಂಡು ಅರ್ಘ್ಯವನ್ನು ಕೊಡಬೇಕು.ಅರ್ಘ್ಯವನ್ನು ಬಿಡುವಾಗ ಮಹಿಳೆಯರು ಈ ಒಂದು ಪಾಲನೆ ಮಾಡಬೇಕಾಗುತ್ತದೆ. ಕೂದಲನ್ನು ಆದಷ್ಟು ಫ್ರೀ ಆಗಿ ಬಿಟ್ಟಿರಬಾರದು.ಜಡೆಯನ್ನು ಹಾಕಿಕೊಂಡು ಅರ್ಘ್ಯವನ್ನು ಬಿಡಬೇಕಾಗುತ್ತದೆ. ಇದಿಷ್ಟು ಮಾಘ ಸ್ನಾನ ಮಾಡುವಾಗ ಪಾಲಿಸಬೇಕಾದ ನಿಯಮಗಳು.

ಈ ಒಂದು ಕಥೆಯಾ ಪ್ರಕಾರ ಯಮರಾಜ ಚಿತ್ರಗುಪ್ತನಿಗೆ ಹೇಳಿರುತ್ತಾನೆ. ಮಾಘ ಮಾಸದಲ್ಲಿ ಯಾರೆಲ್ಲ ಸ್ನಾನಕ್ಕೆ ಪ್ರಾಮುಖ್ಯತೆ ಕೊಡುತ್ತಾರೋ ಅವರ ಎಲ್ಲಾ ಪಾಪಗಳು ಕೂಡ ತೊಳೆಯಲ್ಪಡುತ್ತದೆ ಎಂದು ಹೇಳಿದ್ದರು. ಹಾಗಾಗಿ ಮಾಘ ಸ್ನಾನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕಾಗುತ್ತದೆ.

ಮಾಘ ಸ್ನಾನದಲ್ಲಿ ಮನೆಯಲ್ಲಿ ಸ್ನಾನ ಮಾಡುವುದಾದರೇ 6 ವರ್ಷ ಸ್ನಾನ ಮಾಡಿದಷ್ಟು ಫಲ ಸಿಗುತ್ತದೆ. ಹರಿಯುವ ನೀರಿನಲ್ಲಿ ಸ್ನಾನ ಮಾಡಿದರೆ 2ರಷ್ಟು ಫಲ ಸಿಗುತ್ತದೆ. ಸಮುದ್ರ ಸೇರುವ ಮಹಾಸಾಗರದಲ್ಲಿ ಸ್ನಾನ ಮಾಡಿದರೆ 100 ಪಟ್ಟು ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತದೆ. ಮೂರು ನದಿ ಸಂಗಮ ಆಗುವ ಸ್ಥಳದಲ್ಲಿ ಸ್ನಾನ ಮಾಡಿದರೆ 4800 ವರ್ಷಗಳ ಸ್ನಾನದ ಫಲವು ಲಭಿಸುತ್ತದೆ.ಹಾಗಾಗಿ ಮಾಘ ಮಾಸದಲ್ಲಿ ಪವಿತ್ರ ಜಲದಲ್ಲಿ ಸ್ನಾನ ಮಾಡುವುದರಿಂದ ವಿಶೇಷವಾದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯದ ಸಮಸ್ಯೆ ಕೊಡ ಪರಿಹಾರ ಆಗುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ಪಾಪಗಳು ಕೂಡ ನಾಶ ಆಗುತ್ತದೆ. ಈ ಸಮಯದಲ್ಲಿ ದಾನಮಾಡುವುದರಿಂದ ವಿಷ್ಣುವಿನ ಅನುಗ್ರಹ ಹೆಚ್ಚಾಗುತ್ತದೆ. ಸುಖ ಶಾಂತಿ ನೆಮ್ಮದಿ ಸೌಭಾಗ್ಯ ಸಂತಾನ ಪ್ರಾಪ್ತಿ ಕೂಡ ಆಗುತ್ತದೆ.

Related Post

Leave a Comment