ಅಕ್ಷತೆ,ಫಲ, ಮಂತ್ರಾಕ್ಷತೆ, ಸುವರ್ಣ ಮಂತ್ರಾಕ್ಷತೆ.. ಮಹತ್ವ ತಿಳಿದವರೇ ಮಹನೀಯರು!

ಅಕ್ಷತೆ ಇಲ್ಲದೆ ಯಾವುದೇ ಶುಭಕಾರ್ಯ ಸಂಪೂರ್ಣಗೊಳ್ಳುವುದಿಲ್ಲ.ದೇವರ ಪೂಜೆ ಯಾವುದೇ ಮಂಗಲಕಾರ್ಯ ಹಾಗೂ ಮದುವೆಯಲ್ಲಿ ಅಕ್ಷತೆ ಹಾಕದೆ ಮಾಡುವ ಕಾರ್ಯ ಸಂಪೂರ್ಣಗೊಳ್ಳುವುದಿಲ್ಲ.ಹೀಗಾಗಿ ತಾಳಿ ಕಟ್ಟುವ ವೇಳೆ ಅಕ್ಷತೆಯನ್ನು ಹಾಕುವುದು.ದೇವರ ಪೂಜೆ ಮುಗಿದ ನಂತರ ಭಗವಂತನಿಗೆ ಅಕ್ಷತೆಯನ್ನು ಅರ್ಪಿಸುವುದು.ಹಾಗಾದರೆ ಅಕ್ಷತೆ ಮಹತ್ವ ಏನು ಎನ್ನುವುದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ಅಕ್ಷತೆಯಲ್ಲಿ ನಾಲ್ಕು ವಿಧಗಳು ಇವೇ.1, ಅಕ್ಕಿಯಲ್ಲಿ ಮಾಡಿದ ಅಕ್ಷತೆ-ಪ್ರತಿದಿನ ಮಾಡುವ ಪೂಜೆ ವ್ರತ ಶುಭ ಕಾರ್ಯಗಳಿಗೆ ಅಕ್ಕಿಯಿಂದ ಮಾಡಿದ ಅರಿಶಿಣ ಅಕ್ಷತೆ ಮತ್ತು ಕುಂಕುಮದ ಅಕ್ಷತೆಯನ್ನು ಉಪಯೋಗಿಸುತ್ತಾರೆ.2, ತಿಲಕ್ಷತೆ-ಹಿರಿಯರ ಕಾರ್ಯಗಳಲ್ಲಿ ಉಪಯೋಗಿಸುವ ಕರಿ ಎಳ್ಳು ಅಕ್ಷತೆಗೆ ತಿಲಕ್ಷತೆ ಎಂದು ಹೆಸರು.3,ಮಂತ್ರಾಕ್ಷತೆ-ಮಂತ್ರಿಸಿದ ಅಕ್ಷತೆಗೆ ಮಂತ್ರಾಕ್ಷತೆ ಎಂದು ಎನ್ನುವ ಹೆಸರು.ರಾಘವೇಂದ್ರ ಸ್ವಾಮಿಯ ಮಠದಲ್ಲಿ ಭಕ್ತರಿಗೆ ನೀಡುವುದು ಮಂತ್ರಾಕ್ಷತೆ.4, ಸುವರ್ಣ ಮಂತ್ರಾಕ್ಷತೆ-ಸಾದು ಸನ್ಯಾಸಿಗಳ ಬಳಿ ಹಾಗೂ ಮಠಗಳಿಗೆ ಹೋದಾಗ ಗುರುಗಳು ನಿಮ್ಮನ್ನು ಆಶೀರ್ವಾರ್ದಿಸಿ ನೀಡುವ ಅಕ್ಷತೆಯೇ ಸುವರ್ಣ ಮಂತ್ರಾಕ್ಷತೆ.

ದೇವಸ್ಥಾನ ಮಠಗಳಿಗೆ ಹೋದಾಗ ಅಕ್ಷತೆಯನ್ನು ಏನು ಮಾಡಬೇಕು ಎಂದರೆ ಸುವರ್ಣ ಮಂತ್ರಾಕ್ಷತೆ ಅನ್ನು ಬರಿ ಕೈಯಲ್ಲಿ ತೆಗೆದುಕೊಳ್ಳಬಾರದು.ಅಕ್ಷತೆಯನ್ನು ತೆಗೆದುಕೊಳ್ಳುವವರು ಪುರುಷರು ಶೈಲ್ಯಾದ ತುದಿಯಿಂದ ತೆಗೆದುಕೊಳ್ಳಬೇಕು. ಹೆಂಗಸರು ಆದರೇ ಸೀರೆಯ ಸೆರಗಿನ ತುದಿಯಿಂದ ತೆಗೆದುಕೊಳ್ಳಬೇಕು.

ಹೆಂಗಸರ ಸೀರೆ ಸೆರಗಿನಲ್ಲಿ ಸದಾ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ.ಹೀಗಾಗಿ ಹಿಂದಿನ ಕಾಲದಲ್ಲಿ ಸೆರಗಿನಲ್ಲಿ ಹಣವನ್ನು ಕಟ್ಟಿಕೊಂಡು ಇರುತ್ತಿದ್ದರು.ಸುವರ್ಣ ಮಂತ್ರಾಕ್ಷತೆ ನಿಮ್ಮ ಕೈ ಸೇರಿದೆ ಎಂದರೇ ಅದನ್ನು ಎಲ್ಲಿ ಬೇಕೋ ಅಲ್ಲಿ ಇಡಬಾರದು.ನೀವು ಹಣ ಇಡುವ ಜಾಗದಲ್ಲಿ ಭಗವಂತನ ಸ್ವರೂಪವಾದ ಸುವರ್ಣ ಮಂತ್ರಾಕ್ಷತೆ ಇಟ್ಟು ಪ್ರಾರ್ಥನೆಯನ್ನು ಮಾಡಿ.ಇದರಿಂದ ಮನೆಯಲ್ಲಿ ಸರ್ವ ದರಿದ್ರಗಳು ನಿವಾರಣೆ ಆಗುತ್ತಾದೇ.

ಸುವರ್ಣ ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿ ಇಟ್ಟು ನಿತ್ಯ ಪೂಜೆ ಮಾಡುವುದರಿಂದ ಆ ಮನೆಯ ಮೇಲೆ ಯಾವುದೇ ದುಷ್ಟ ಶಕ್ತಿಗಳ ಕಣ್ಣು ಬೀಳುವುದಿಲ್ಲ.ಸುವರ್ಣ ಮಂತ್ರಾಕ್ಷತೆಯನ್ನು ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿದರೆ ನಿಮ್ಮ ಜಾತಕದಲ್ಲಿ ಇರುವ ಗುರುಗ್ರಹದ ನೀಚ ದೋಷ, ಗುರು ಶಾಪ, ಗುರು ಹಸ್ತದ ದೋಷಗಳು ನಿವಾರಣೆ ಆಗುತ್ತಾದೇ.ವ್ಯಾಪಾರ ವ್ಯವಹಾರ ಮಾಡುವ ಜಾಗದಲ್ಲಿ ಈ ಮಂತ್ರಾಕ್ಷತೆಯನ್ನು ಇಟ್ಟು ಪೂಜೆ ಮಾಡಿದರೆ ತುಂಬಾ ಒಳ್ಳೆಯದು.ಸುವರ್ಣ ಮಂತ್ರಾಕ್ಷತೆಯನ್ನು ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿಯನ್ನು ಸಂಪನ್ನಗೊಳಿಸಬಹುದು.ಸಾಲ ಬಾದೆ ಎನ್ನುವುದು ನಿಮ್ಮನ್ನು ಕಾಡುವುದಿಲ್ಲ.ಬೆಳ್ಳಿಯ ತಾಯತದಲ್ಲಿ ಸುವರ್ಣ ಮಂತ್ರಾಕ್ಷತೆಯನ್ನು ಹಾಕಿ ಧರಿಸುವುದರಿಂದ ಸಕಲ ಕಾರ್ಯದಲ್ಲೂ ದಿಗ್ವಿಜಯಶಾಲಿಗಳು ಆಗುತ್ತೀರಿ.

ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಗೆ ದಿವ್ಯ ಶಕ್ತಿ ಇದೆ. ರಾಘವೇಂದ್ರ ಸ್ವಾಮಿಯ ಪವಾಡ ಇದರಲ್ಲಿ ಅಡಗಿದೆ. ಹೀಗಾಗಿ ಮಂತ್ರಾಲಯದಲ್ಲಿ ನೀಡುವ ಮಂತ್ರಾಕ್ಷತೆಯನ್ನು ಯಾರು ಕೂಡ ನಿರ್ಲಕ್ಷ ಮಾಡುವುದಿಲ್ಲ.ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗುತ್ತದೆ.ನಿಮಗೆ ಎದುರಾದ ಅರೋಗ್ಯ ಸಮಸ್ಸೆಯಿಂದ ಮುಕ್ತಿ ಹೊಂದಬಹುದು. ರಾಯರ ಮಠದಲ್ಲಿ ಸಿಗುವ ಮಂತ್ರಾಕ್ಷತೆಯನ್ನು ಬಿಳಿ ಬಟ್ಟೆಯಲ್ಲಿ ಹಾಕಿ ನಿಮ್ಮ ದೇಹದ ಬಲ ಭಾಗದಲ್ಲಿ ಇಟ್ಟುಕೊಳ್ಳಬೇಕು.ನಂತರ ಮನೆಯಲ್ಲಿ ಶ್ರೀಗಂಧ ನೀರಿನಲ್ಲಿ ಕಲಸಿ ಒದೆರಡು ತುಳಸಿ ದಳವನ್ನು ಹಾಕಿ ತಲೆಗೆ ಪ್ರೊಕ್ಷಣೆ ಮಾಡಿಕೊಂಡು ಗುರು ರಾಯರನ್ನು ನೆನೆದು ಕಾರ್ಯವನ್ನು ಶುರು ಮಾಡಬೇಕು.

ಯಾವುದೇ ಕಷ್ಟದ ಸಮಯ ಬಂದಾಗ ಎರಡು ಕಾಳು ಮಂತ್ರಾಕ್ಷತೆಯನ್ನು ತಲೆಯ ಮೇಲೆ ಇಟ್ಟುಕೊಂಡು ರಾಯರನ್ನು ನೆನೆದರೆ ಸಾಕು ಎಂತಹದೆ ಕಷ್ಟಗಳು ಇದ್ದರು ಕಡಿಮೆ ಆಗುತ್ತದೆ.ಅಕ್ಷತೆ ಫಲ ಭಿಕ್ಷೆಯು ಹೌದು ಫಲವು ಹೌದು.ಅಕ್ಷತೆ ವೇದ ಮಂತ್ರಗಳೊಂದಿಗೆ ಭಗವಂತ ರೂಪದ ವಿಶಿಷ್ಟ ಸಂಮಿದಾನ ಪ್ರಾಪ್ತ ಆಗಿದ್ದು ಭಗವಂತನಿಗೆ ಸಮಾರ್ಪಿತವಾಗಿ ಪರಿಶುದ್ದ ಪವಿತ್ರ ಎನಿಸಿದೆ.ಹೀಗಾಗಿ ಮಂತ್ರಾಕ್ಷತೆ ಮಹತ್ವ ಅನ್ನು ಎಲ್ಲಾರು ತಿಳಿದುಕೊಂಡಿರಬೇಕು.

Related Post

Leave a Comment