ಬ್ರೀತಿಂಗ್ ಕೆಪ್ಯಾಸಿಟಿ ಹೆಚ್ಚಿಸಿಕೊಳ್ಳಲು ಈ ಎಣ್ಣೆಯ 2 ಹನಿಗಳು ಸಾಕು!

0 36

ಈಗ ದೇಶಾದ್ಯಂತ ಕೊರೋನಾ ಅಬ್ಬರಿಸುತ್ತಿದೆ.ಹೀಗಾಗಿ ಮುಖ್ಯವಾಗಿ ಶ್ವಾಸಕೋಶ ಸಂಬಂಧಿಸಿದ ಕಾಯಿಲೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಅಂಥವರು ತಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಇದರಿಂದ ಆರೋಗ್ಯವಾಗಿರಬಹುದು.ಇನ್ನೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇರುವವರು, ಅಸ್ತಮಾ ಕಾಯಿಲೆ ಇರುವವರು, ಉಸಿರಾಟದ ತೊಂದರೆ ಇರುವವರು ಮನೆಯಲ್ಲಿಯೇ ಸಿಗುವಂತಹ ಕೆಲವು ಸಾಮಗ್ರಿಗಳಿಂದ ಸುಲಭವಾಗಿ ಶ್ವಾಸಕೋಶದ ಸಾಮರ್ಥ್ಯ ವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಪುದೀನಾ:ಪುದೀನಾ ಎಲ್ಲರಿಗೂ ಗೊತ್ತಿರುವ ಸೊಪ್ಪು.ಈ ಪುದೀನಾ ಎಲೆಗಳನ್ನು ಬಳಸಿಕೊಂಡು ನಮ್ಮ ಶ್ವಾಸಕೋಶದ ಸಾಮರ್ಥ್ಯ ವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.ಇನ್ನೂ ಗ್ರಂಧಿಗೆ ಅಂಗಡಿಗಳಲ್ಲಿ ಪುದೀನಾ ಎಣ್ಣೆ ದೊರೆಯುತ್ತದೆ ಅದರ ಹೆಸರು ಪೆಪ್ಪರ್ ಮಿಂಟ್ ಆಯಿಲ್.ಪೆಪರ್ ಮಿಂಟ್ ಆಯಿಲ್ ನಲ್ಲಿ ಮುಖ್ಯವಾಗಿ ಮಿಥೈಲ್ ಕೆಮಿಕಲ್ ಕಾಂಪೌಂಡ್ ಇರುತ್ತದೆ.ಇದು ಆ್ಯಂಟಿ ಇನ್ ಫ್ಲಮೇಟರಿ ಗುಣವನ್ನು ಹೊಂದಿದೆ.ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇನ್ನೂ ಪೆಪ್ಪರ್ ಮಿಂಟ್ ಆಯಿಲ್ ನಿಂದ ಸಿಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

ಇನ್ನೂ ಪೆಪ್ಪರ್ ಮಿಂಟ್ ಆಯಿಲನ್ನು ಬಿಸಿನೀರಿಗೆ 2 ಹನಿಯಷ್ಟು ಹಾಕಿ ಹಾವಿ ತೆಗೆದುಕೊಳ್ಳುವುದರಿಂದ ಶೀತ ನೆಗಡಿಯಂತಹ ತೊಂದರೆ ನಿವಾರಣೆಯಾಗುತ್ತದೆ,ಕಫ ಕಡಿಮೆಯಾಗುತ್ತದೆ ಹಾಗೂ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ.ಇನ್ನು ನಮಗೆ ಶೀತ ,ನೆಗಡಿ ಆದಾಗ ತಲೆನೋವು ಉಂಟಾದಾಗ ಮೆಂಥೋಪ್ಲಸ್ , ಝಂಡುಬಾಮ್ ಮೊರೆ ಹೋಗುತ್ತೇವೆ ಅದರ ಜೊತೆಗೆ ಪುದೀನಾ ಎಣ್ಣೆಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ತಲೆ ಭಾರ ಕಡಿಮೆಯಾಗುತ್ತದೆ.ತಕೆಮ್ಮು ,ಕಫ ದಂತ ಸಮಸ್ಯೆಗಳಿಗೆ ಈ ಎಣ್ಣೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.

ಧನ್ಯವಾದಗಳು.

Leave A Reply

Your email address will not be published.