ಈ 3 ರಾಶಿಯವರಿಗೆ ಗುರುಬಲ ಇಲ್ಲದಿದ್ದರೂ ಹಣಕಾಸಿನ ತೊಂದರೆ ಇರುವುದಿಲ್ಲ!

ಸಾಮಾನ್ಯವಾಗಿ ಗುರು ಬಲ ಇದ್ದಾಗ ಎಲ್ಲವೂ ಒಳ್ಳೆಯದೇ ಆಗುತ್ತದೆ ಎನ್ನಲಾಗುತ್ತದೆ ಆದರೆ ಕೆಲವೊಮ್ಮೆ ಗುರುಬಲ ಇಲ್ಲದಿದ್ದರೂ ಸಹ ಒಳ್ಳೆಯದಾಗುತ್ತದೆ.ಇನ್ನು ಅಂತಹ 3 ಗುರುಬಲ ಇಲ್ಲದಿದ್ದರೂ ತಕ್ಕ ಮಟ್ಟಿಗೆ ಶುಭ ಫಲ ಇರುವ 3 ರಾಶಿಗಳ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಮಕರ ರಾಶಿಯುಂದ ಗುರು ಕುಂಭ ರಾಶಿಗೆ ಪ್ರವೇಶಿಸುತ್ತಾನೆ.ಹೀಗಾಗಿ ವೃಷಭ, ಕರ್ಕಾಟಕ ಮತ್ತು ಕನ್ಯಾ ರಾಶಿಯವರಿಗೆ ಗುರುಬಲ ಇಲ್ಲದಂತಾಗುತ್ತದೆ.ಇನ್ನೂ ಮಕರ ರಾಶಿಯಲ್ಲಿ ಗುರು ಇದ್ದಾಗ ವೃಷಭ, ಕರ್ಕಾಟಕ ಮತ್ತು ಕನ್ಯಾ ರಾಶಿಯವರಿಗೆ ಗುರುಬಲ ಇತ್ತು ,
ಈಗ ಗುರುಬಲ ಇಲ್ಲದಂತಾಗಿದೆ ಹಾಗಾಗಿ ಇನ್ನು ಮುಂದೆ ಈ 3 ರಾಶಿಯವರಿಗೆ ಎಂಥ ಫಲ ದೊರೆಯಬಹುದು ಎಂದು ನೋಡುವುದಾದರೆ

ವೃಷಭ ರಾಶಿಗೆ ದಶಮದಲ್ಲಿ ಗುರು ಬರುತ್ತಾನೆ,ಕರ್ಕಾಟಕ ರಾಶಿಗೆ ಅಷ್ಟಮದಲ್ಲಿ ಗುರು ಬರುತ್ತಾನೆ ,ಕನ್ಯಾ ರಾಶಿಗೆ 6ನೇ ಮನೆಯಲ್ಲಿ ಗುರು ಬರುತ್ತಾನೆ.ಹಾಗಾಗಿ ವೃಷಭ ರಾಶಿಗೆ ಸ್ವಲ್ಪ ಕಷ್ಟ ನಷ್ಟಗಳು ಕಡಿಮೆ ಆದರೂ ಸ್ವಲ್ಪ ಎಚ್ಚರಿಕೆ ಇಂದ ಇರುವುದು ಒಳ್ಳೆಯದು.ಇನ್ನು ಕರ್ಕಾಟಕ ಮತ್ತು ಕನ್ಯಾ ರಾಶಿಯವರಿಗೆ ಸ್ವಲ್ಪ ದಿನಗಳವರೆಗೆ ಅಷ್ಟು ಸಮಂಜಸವಾಗಿರುವುದಿಲ್ಲ.ಇನ್ನೂ ಈ 3 ರಾಶಿಯವರಿಗೆ ಈ ವರ್ಷ ಅಂದರೆ 2021 ರ ಸೆಪ್ಟೆಂಬರ್ 14 ರವರೆಗೂ ಗುರುಬಲ ಇರುವುದಿಲ್ಲ ಅದಾದ ನಂತರ 2 ತಿಂಗಳ ವರೆಗೂ ಗುರುಬಲ ಶುರುವಾಗುತ್ತದೆ.

ಹಾಗಾಗಿಈ ಜೂನ್ ತಿಂಗಳಿನಿಂದ ಸೆಪ್ಟೆಂಬರ್ 14 ರವರೆಗೂ ನಿಮ್ಮ ಯೋಜನೆಗಳನ್ನು ಹಾಕಿಕೊಂಡು , ಶುಭ ಕಾರ್ಯ ಕ್ರಮಗಳನ್ನು ನಿಗದಿ ಮಾಡಿಕೊಂಡುಗುರು ಬಲ ಇದ್ದಾಗ ಕಾರ್ಯ ಪ್ರಾರಂಭಿಸಿದರೆ ಸಕಲ ಕಾರ್ಯದಲ್ಲೂ ಯಶಸ್ಸು ದೊರೆಯುತ್ತದೆ.ಇನ್ನು ವೃಷಭ , ಕರ್ಕಾಟಕ ಮತ್ತು ಕನ್ಯಾ ರಾಶಿಯವರು ಗುರ ಬಲ್ಲ ಇಲ್ಲವೆಂದು ಚಿಂತೆ ಪಡಬೇಕಿಲ್ಲ
ಏಕೆಂದರೆ ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದಾಗ ಸ್ವಲ್ಪ ಸಮಸ್ಯೆ ಎದುರಾಗಬಹುದು ಆದರೆ ಅದರಲ್ಲಿ ಸೋಲನ್ನು ಅನುಭವಿಸುವುದಿಲ್ಲ , ಗೆಲ್ಲುವ ಸಾಮರ್ಥ್ಯ ಅವರಲ್ಲಿರುತ್ತದೆ.

ಇನ್ನು ಈ ವಿಶೇಷವಾದ ಸಮಯವನ್ನು ನೀವು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ಯಾವುದೇ ರೀತಿಯ ಭಯ ಪಡಬೇಡಿ ಯಾಕೆಂದರೆ ಆರ್ಥಿಕವಾಗಿ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.ಇನ್ನು ನಿಮಗೆ ಗುರುಬಲ ಇಲ್ಲದಿದ್ದರೂ ಭಗವಂತನ ಕೃಪೆ ನಿಮಗೆ ದೊರೆಯಬೇಕಾದಲ್ಲಿ ಈ ಮಂತ್ರವನ್ನು ಪ್ರತಿ ನಿತ್ಯ ಪಠಿಸಿ ಅಥವಾ ಕೇಳಿ

“ದುರ್ಗಾ ಸೂಕ್ತಂ” ಈ ಮಂತ್ರವನ್ನು ಪ್ರತಿದಿನ ಕೇಳಿಸಿಕೊಳ್ಳಿ ಎಲ್ಲಾ ರಾಶಿಯವರಿಗೂ ಒಳ್ಳೆಯದಾಗುತ್ತದೆ.

ಧನ್ಯವಾದಗಳು.

Related Post

Leave a Comment