ಕೋಟಿ ಕೊಟ್ಟರೂ ಸಿಗದ ಆರೋಗ್ಯ ಈ ಹಣ್ಣಿನಲ್ಲಿದೆ!

ಅತ್ತಿ ಹಣ್ಣು ಅತ್ತಿಯು ವೇದ ಕಾಲದಿಂದ ಬಳಕೆಯಲ್ಲಿರುವ ಮರವಾಗಿದೆ.ಔಷಧಿ ಗುಣಗಳನ್ನು ಹೊಂದಿರುವ ಈ ಅತ್ತಿ ಮರವನ್ನು ಹಿಂದೂ ಗಳು ಧಾರ್ಮಿಕ ಯಜ್ಞಯಾಗಾದಿಗಳಲ್ಲಿ ಉಪಯೋಗಿಸುವಂತಹ ವಾಡಿಕೆ ಕೂಡ ಅನಾದಿ ಕಾಲದಿಂದಲೂ ಬಂದಿದೆ.ಇದರ ರೆಂಬೆಯನ್ನು ನಮ್ಮ ಪೂರ್ವಜರು ಹಲ್ಲುಜ್ಜಲು ಬಳಸುತ್ತಿದ್ದರು.ಇನ್ನು ಅತ್ತಿ ಹಣ್ಣು ನೋಡಲು ಎಷ್ಟು ಸುಂದರವೋ ಅಷ್ಟೇ ಅದರೊಳಗೆ ಹುಳಗಳು ಅಂದರೆ ಜಂತುಗಳನ್ನು ನಾವು ಕಾಣಬಹುದಾಗಿದೆ.ಅತ್ತಿ ಮರವನ್ನುಸಂಸ್ಕೃತದಲ್ಲಿ ಔದುಂಬರ ,ತುಳುವಿನಲ್ಲಿ ಅರ್ತಿ ,ಹಿಂದಿಯಲ್ಲಿ ಗುಲರ್ ,ಇಂಗ್ಲಿಷ್ ನಲ್ಲಿ ಕ್ಲಸ್ಟರ್ ಫಿಗ್
ಎಂದು ಕರೆಯುತ್ತಾರೆ.

ಆ ಪುಷ್ಪಾ ,ಜಂತುಫಲ ,ಸದಾ ಫಲ ,ಶ್ವೇತ ವಲ್ಕಲ ,ಕ್ಷೀರ ವೃಕ್ಷ ,ಕ್ರಿಮಿ ಕಂಠ ,ಬ್ರಹ್ಮವೃಕ್ಷ ,ಹರಿತಾಕ್ಷ ,ಹೇಮದುಕ್ತ ,ಶೀತ ಫಲ ,ಚುಚ್ಚುಕ್ಷ ಯಜ್ಞ ಫಲ ಎಂಬುದು ಅತ್ತಿಯ ಪರ್ಯಾಯ ಪದಗಳಾಗಿವೆ.ಅತ್ಯಂತ ಜನಪ್ರಿಯವಾಗಿರುವ ಈ ಅತ್ತಿ ಮರವೂ 9 ರಿಂದ 12 ಮೀಟರ್ ಗಳಷ್ಟು ಉದ್ದ ಬೆಳೆಯುತ್ತದೆ.ಎಲೆ,ಫಲ,ಕಾಯಿ ತೊಗಟೆಯ ಬಿಳಿ ಬಣ್ಣದಲ್ಲಿ ಉಂಟಾದ ದ್ರವ ಹೊರಬರುತ್ತದೆ.ಕಾಯಿ ಹಸಿರಾಗಿದ್ದು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ.ಇನ್ನು ಹಣ್ಣಿನ ಒಳಗಡೆ ಇರುವೆಗಳು ಇರುತ್ತದೆ ಮತ್ತು ನೂರಾರು ಸಣ್ಣಪುಟ್ಟ ಬೀಜಗಳು ಇರುತ್ತವೆ.ಭಾರತ ಹಾಗೂ ಶ್ರೀಲಂಕಾದಲ್ಲಿ ಅತ್ತಿ ಮರವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಇನ್ನೂ ಈ ಅತ್ತಿಯ ಮರದಲ್ಲಿ 3 ಬಗೆಯ ಮರಗಳಿವೆ.ಅವು ಯಾವುವೆಂದರೆ ಔದುಂಬರ ,ಕಾಕ ಉದುಂಬರ ,ನುಜ್ಜುಂಬರ.ಇವನ್ನು ಸಸ್ಯಶಾಸ್ತ್ರದಲ್ಲಿ ಫೀಕಸ್ ಗ್ಲೋಮರೇಟಾ ,ಫೀಕಸ್ ಇಸ್ಪೀಡಾ ಮತ್ತು ಫೀಕಸ್ ಕರಿಕಾ ವಿಕಾಸ್ ಕರೆಯಲಾಗುತ್ತದೆ.ಈ ಮರದ ತೊಗಟೆ ,ಕಾಯಿ ,ಹಣ್ಣು ,ಬೇರು ಔಷಧೀಯ ಗುಣಗಳನ್ನು ಒಳಗೊಂಡಿದೆ.ಇನ್ನೂ ಈ ಅತ್ತಿ ಹಣ್ಣಿನ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.

ಮಧುಮೇಹ ಕಾಯಿಲೆಗೆ ರಾಮಬಾಣ ಅತ್ತಿ ಹಣ್ಣಿನ ಬೀಜ ಮತ್ತು ನೇರಳೆ ಹಣ್ಣಿನ ಬೀಜದ ಚೂರ್ಣವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಪ್ರತಿನಿತ್ಯ ಸೇವಿಸಿದರೆ ಬಹುಬೇಗನೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.ಇನ್ನೂ ಅತ್ತಿ ಮರದ ತೊಗಟೆಯ ಭಸ್ಮವನ್ನು ಜೇನು ತುಪ್ಪ ಮತ್ತು ತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.ಇದರ ಎಲೆ ,ಫಲ ಮತ್ತು ಚಕ್ಕೆ ಚೂರ್ಣಕ್ಕೆಸಮ ಪ್ರಮಾಣದ ಜೇಷ್ಠ ಮಧು ಚೂರ್ಣವನ್ನು ಸೇರಿಸಿ ಅದಕ್ಕೆ ಅತ್ತಿ ಎಲೆಗಳ ರಸ ಸೇರಿಸಿ ಸೇವಿಸುವುದರಿಂದ ಕೆಮ್ಮು ಮತ್ತು ಉಬ್ಬಸ ರೋಗಗಳು ಕಡಿಮೆಯಾಗುತ್ತದೆ.ಅತ್ತಿಯ ಹಾಲಿಗೆ ಸಕ್ಕರೆಯನ್ನು ಸೇರಿಸಿ ಕುಡಿಯುವುದರಿಂದ ಅತಿಸಾರ ರೋಗ ಕೂಡ ಕಡಿಮೆಯಾಗುತ್ತದೆ.ಅತ್ತಿ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ಅಶಕ್ತತೆ , ಸ್ನಾಯುಗಳಲ್ಲಿ ದೌರ್ಬಲ್ಯ ಕೂಡ ನಿವಾರಣೆಯಾಗುತ್ತದೆ .ಅತ್ತಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಮುಪ್ಪಾಗುವುದನ್ನು ನಿಧಾನಗೊಳಿಸುತ್ತದೆ ಹಾಗೂ ಇದರಿಂದ ಚಿರ ಯವ್ವನ ನಿಮ್ಮದಾಗುತ್ತದೆ.

ಹೀಗೆ ಈ ಅತ್ತಿಮರದ ಪ್ರತಿಯೊಂದು ಭಾಗದಲ್ಲಿ ಸಹ ಉಪಯೋಗಗಳಿವೆ ಮತ್ತು ಔಷಧಿಯ ಗುಣಗಳು ಸಮೃದ್ಧಿಯಾಗಿರುವುದರಿಂದ ಅನಾದಿ ಕಾಲದಿಂದ ಇದು ಚೂರ್ಣಗಳಲ್ಲಿ ಬಳಕೆಯಾಗುತ್ತದೆ.

ಧನ್ಯವಾದಗಳು.

Related Post

Leave a Comment