ಯಾವ ದಿನ ಹುಟ್ಟಿದರೆ ಏನು ಫಲ?

ಹುಟ್ಟಿದ ವಾರದ ಪ್ರಕಾರ ನಿಮ್ಮ ಗುಣ ,ನಡತೆ ,ಸ್ವಭಾವ ಹೇಗಿರುತ್ತದೆ ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..

  • ಭಾನುವಾರ

ಈ ವಾರ ಜನಿಸಿದವರು ಸುಖ ಜೀವಿಗಳಾಗಿರುತ್ತಾರೆ.ಸುಖದ ಕಲ್ಪನೆಯಲ್ಲಿಯೇ ಜೀವಿಸುತ್ತಾರೆ.ಸ್ವಯಂಪ್ರೇರಿತ ಉತ್ಸಾಹ ಇವರದ್ದಾಗಿರುತ್ತದೆ ಆದರೆ ಅದಕ್ಕೆ ಬೇಕಾದಂತಹ ವಿಶ್ರಾಂತಿಯನ್ನು ನೀವು ನೀಡದಿದ್ದರೆ ಉತ್ಸಾಹ ಕುಂದುತ್ತಾ ಹೋಗಬಹುದು.
ಸರಳ ಹಾಗೂ ನ್ಯಾಯಯುತವಾಗಿ ಧರ್ಮದಿಂದ ನಡೆಯುತ್ತಾರೆ.ಮೋಸ ವಂಚನೆ ಯಂತಹ ಕೆಲಸಗಳು ಇವರಿಗೆ ಇಷ್ಟವಾಗುವುದಿಲ್ಲ.ಸುಳ್ಳು ಹೇಳುವವರನ್ನು ಮತ್ತು ರಹಸ್ಯ ಕಾರರನ್ನು ಇವರು ನಂಬುವುದಿಲ್ಲ.ಇನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ ಇದರಿಂದ ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ.ಆರೋಗ್ಯ ಮತ್ತು ಆಹಾರದ ಸಮಸ್ಯೆ ಎದುರಾಗುವುದಿಲ್ಲ.

  • ಸೋಮವಾರ

ಈ ವಾರ ಹುಟ್ಟಿದವರು ಶಾಂತ ಸ್ವಭಾವದವರು ಆಗಿರುತ್ತಾರೆ.ನೇರ ಮಾತುಗಾರರು ಮತ್ತು ಕಳಂಕರಹಿತರು.ಕಷ್ಟ ಬಂದಾಗ ಎಂತಹ ಕೆಲಸವನ್ನಾದರೂ ಮಾಡುತ್ತಾರೆ.ಇವರಿಗೆ ಇಂದು ಬೇಕಾಗಿರುವುದು ನಾಳೆ ಬೇಡವೆನಿಸುತ್ತದೆ ಹಾಗಾಗಿ ಇವರ ಇಷ್ಟಕ್ಕೆ ಅಷ್ಟು ಬೆಲೆ ಇರುವುದಿಲ್ಲ.ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರುತ್ತಾರೆ.ಗಳಿಸುವ ಗುಣ ಇವರನ್ನು ಪ್ರೇರೇಪಿಸುತ್ತದೆ.ಸೋಮವಾರದಂದು ಸ್ತ್ರೀಯರು ಹುಟ್ಟಿದ್ದರೆ ಅವರಿಗೆ ಗಂಡ ಮನೆ ಮಕ್ಕಳು ಇವಿಷ್ಟೇ ಪ್ರಪಂಚವಾಗಿರುತ್ತದೆ.ದಾನ ಧರ್ಮ ಪ್ರವೃತ್ತಿ ಉಳ್ಳವರಾಗಿರುತ್ತಾರೆ.

  • ಮಂಗಳವಾರ

ಈ ವಾರ ಹುಟ್ಟಿದವರು ಸದಾ ಉತ್ಸಾಹಿ ಗಳಾಗಿರುತ್ತಾರೆ. ಸೋಂಬೇರಿತನ ಇವರಿಗೆ ಇಷ್ಟವಾಗುವುದಿಲ್ಲ.ಯಾವುದೇ ಕೆಲಸವನ್ನು ಏಕಚಿತ್ತದಿಂದ ಬಹುಬೇಗ ಪೂರ್ಣಗೊಳಿಸುತ್ತಾರೆ.ಒಳಿತೋ ಕೆಡುಕೋ ಕೆಲಸವನ್ನು ಮಾಡಿ ಮುಗಿಸಿ ಬಿಡುತ್ತಾರೆ.ಹಠಮಾರಿತನ ದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ.ಇವರು ಅಂದುಕೊಂಡಷ್ಟು ಕೆಟ್ಟವರಲ್ಲ.ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.ಬುದ್ಧಿವಂತಿಕೆಯಿಂದ ಎಂಥದೇ ಸಮಸ್ಯೆ ಎದುರಾದರೂ ಅದನ್ನು ಬಗೆಹರಿಸಿಕೊಳ್ಳುತ್ತಾರೆ.

  • ಬುಧವಾರ

ಈ ವಾರ ಹುಟ್ಟಿದವರು ಹೆಚ್ಚಾಗಿ ಸಿನಿಮಾ,ನಾಟಕ,ಕಲೆ,ಸಾಹಿತ್ಯ,ಸಂಗೀತ,ಮನರಂಜನೆ,ಚರ್ಚೆ,ಹರಟೆ, ವಿನೋದ, ಮಾತು ಇವೆಲ್ಲವೂ ಇವರ ಮುಖ್ಯಗುಣಗಳಾಗಿರುತ್ತವೆ.ಇನ್ನೂ ಯಾವುದೇ ಕೆಲಸವನ್ನು ಮಾಡಿದರು ಅಲ್ಲಿ ನಿಮ್ಮ ಛಾಪನ್ನು ನೀವು ಮೂಡಿಸುತ್ತಾರೆ.ನೈಸರ್ಗಿಕವಾಗಿ ರಸಿಕರು,ಸುಖ ಬೋಗಿಗಳು ಇವರಾಗಿರುತ್ತಾರೆ.ಅನಾರೋಗ್ಯದ ಸಮಸ್ಯೆ ಎದುರಾಗಬಹುದು.
ಅತಿ ಚಂಚಲತೆ ಇವರದ್ದು, ಇವರ ಅತಿ ಬುದ್ಧಿವಂತಿಕೆ ಇವರನ್ನು ಎಲ್ಲೆಡೆ ಕರೆದೊಯ್ಯುತ್ತದೆ.

  • ಗುರುವಾರ

ಈ ವಾರ ಜನಿಸಿದವರು ಸ್ಥಿರ ಬುದ್ಧಿ ಉಳ್ಳವರಾಗಿರುತ್ತಾರೆ.ಯಾವುದೇ ಕೆಲಸವನ್ನು ಮಾಡಿ ಮುಗಿಸಲು ಕ್ಷುಲ್ಲಕ ಕಾರಣ ನೀಡುವುದು ಇವರಿಗೆ ಇಷ್ಟವಾಗುವುದಿಲ್ಲ.ಪರರನ್ನು ಒಮ್ಮೊಮ್ಮೆ ಕಾರ್ಯಸಾಧನೆಗೆ ಕರೆಯಲು ಇವರು ಮುಜುಗರ ಪಟ್ಟುಕೊಳ್ಳುತ್ತಾರೆ
ಇದರಿಂದ ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ.ಉತ್ತಮ ಸಲಹೆಗಾರರಾಗಿರುತ್ತಾರೆ.ಸದಾ ಗಂಭೀರತೆ ಮುಖದಲ್ಲಿ ಎದ್ದು ಕಾಣುತ್ತದೆ.ಇತರರಿಗೆ ಸಹಾಯ ಮಾಡುವ ಗುಣ ಇವರಲ್ಲಿದೆ.ಭೋಜನ ಪ್ರಿಯರು,ಯಾವುದೇ ವಸ್ತುವಿನ ಮೇಲೆ ಅತಿಯಾಸೆ ಇರುವುದಿಲ್ಲ.ದೊಡ್ಡ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆನ್ನುವುದು ಇವರ ಮನದಾಸೆ ಯಾಗಿರುತ್ತದೆ.

  • ಶುಕ್ರವಾರ

ಈ ವಾರ ಹುಟ್ಟಿದವರು ಕಲಾವಂತರು, ಕೀರ್ತಿಶಾಲಿಗಳು, ಬುದ್ಧಿವಂತರು ಹಾಗೂ ಸ್ಥಿರವಾಗಿರುತ್ತಾರೆ.ಪಕ್ಷಿ ಪ್ರಾಣಿಗಳ ಮೇಲೆ ಅತಿ ಹೆಚ್ಚು ಒಲವನ್ನು ತೋರುತ್ತಾರೆ.ಇವರಿಗೆ ಸ್ನೇಹಿತರು ಹಾಗೂ ಕುಟುಂಬದವರು ಹೆಚ್ಚು ಪ್ರೀತಿ ತೋರಿಸುತ್ತಾರೆ.ಇನ್ನು ಪರರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಗುಣ ಸಾಮರ್ಥ್ಯ ಇವರಲ್ಲಿರುತ್ತದೆ.ಇವರು ಮಾಡುವ ಕೆಲಸವು ಶ್ಲಾಘನೀಯವಾದದ್ದು.
ಮೂಗಿನ ಮೇಲೆ ಕೋಪವಿದ್ದರೂ ಅಷ್ಟೇ ಬೇಗ ತಣ್ಣಗಾಗುತ್ತಾರೆ.ಕೆಟ್ಟವರನ್ನು ಬಹುಬೇಗ ಕ್ಷಮಿಸುವ ಗುಣ ಇವರಲ್ಲಿರುತ್ತದೆ.ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.ಹೊಟ್ಟೆ ತುಂಬ ಊಟ ಸುಖ ವಾದ ನಿದ್ರೆ ಇವರಿಗೆ ಪಂಚಪ್ರಾಣದ ಕೆಲಸವಾಗಿರುತ್ತದೆ.

  • ಶನಿವಾರ

ಈ ವಾರ ಹುಟ್ಟಿದವರು ಯಾವುದೇ ಕೆಲಸಕ್ಕೆ ಹಿಂಜರಿಯುವುದಿಲ್ಲ,ಧೈರ್ಯ ಜಾಸ್ತಿ ಅಂಜುಬುರುಕರನ್ನು ಕಂಡರೆ ಆಗುವುದಿಲ್ಲ.ಭಾವಜೀವಿಗಳು,ಆಟ,ಕಲೆ,ವಿಜ್ಞಾನ ಇವರಿಗೆ ಇಷ್ಟವಾದ ವಿಷಯಗಳು.ಕೊಟ್ಟ ಮಾತನ್ನು ಮರೆಯಲಾರರು.
ಇವರು ಕಾರ್ಯವನ್ನು ಬಹುಬೇಗ ಮಾಡಿ ಮುಗಿಸುವಲ್ಲಿ ಯಶಸ್ವಿಯಾಗುತ್ತಾರೆ.ಇನ್ನು ಇವರ ಸಾಮರ್ಥ್ಯಕ್ಕಿಂತ ಹೆಚ್ಚು ಕಷ್ಟವಾದ ಕೆಲಸಕ್ಕೆ ಕೈ ಹಾಕುತ್ತಾರೆ.ಇನ್ನು ಇವರಂತೆಯೇ ಇತರರು ಇರಬೇಕೆಂದು ಆಸೆ ಪಡುತ್ತಾರೆ.ನಿಮ್ಮ ಹುಟ್ಟಿದ ವಾರ ಯಾವುದು ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಧನ್ಯವಾದಗಳು.

Related Post

Leave a Comment