ಮದುವೆಗೆ ಈ 4 ರಾಶಿಳಲ್ಲಿ ಜನಿಸಿದ ಹುಡುಗ ಸಿಕ್ಕಿದರೆ ಹುಡುಗಿಯರೆ ಅದೃಷ್ಟವಂತೆಯರು!

ಸಾಮಾನ್ಯವಾಗಿ ಹದಿಹರೆಯದಲ್ಲಿ ಹುಡುಗರಿಗೆ ಹುಡುಗಿಯರ ಮೇಲೆ ಹಾಗೂ ಹುಡುಗಿಯರಿಗೆ ಹುಡುಗರ ಮೇಲೆ ಆಕರ್ಷಣೆ ಉಂಟಾಗುತ್ತದೆ.ಹೀಗೆ ಆಕರ್ಷಣೆ ಉಂಟಾಗಲು ಯಾವುದಾದರೂ 1 ಚಿಕ್ಕ ವಿಷಯ ಸಾಕು.ಕೆಲವರಿಗೆ ಸೌಂದರ್ಯ ಆಕರ್ಷಣೆ ಉಂಟು ಮಾಡಿದರೆ,ಇನ್ನೂ ಕೆಲವರಿಗೆ ಮಾತು,ಕೆಲವರಿಗೆ ನಡತೆ ಗುಣ ಸ್ವಭಾವ ಇನ್ನಿತರ ಗುಣಗಳು ಇಷ್ಟವಾಗುತ್ತದೆ.ಆದರೆ
ಈ ಎಲ್ಲ ಬಾಹ್ಯ ಆಕರ್ಷಣೆಗಿಂತ ಒಳಗಿನಿಂದ ಸದ್ಗುಣ ಹೊಂದಿದವರನ್ನು ಅರಿಸಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಹಣ ಆಸ್ತಿ ಅಂತಸ್ತುಗಳಿಗಿಂತ ಜೀವನದಲ್ಲಿ ಮುಖ್ಯವಾದದ್ದು ಬೇರೆ ಇದೆ.ಅಂತಹ ಸದ್ಗುಣಗಳನ್ನು ಹೊಂದಿರುವವರು ಈ 4 ರಾಶಿಯ ಹುಡುಗರು ಆಗಿರುತ್ತಾರೆ.ಇನ್ನೂ ಪ್ರತಿ ಯುವತಿಗೂ ತಮ್ಮ ಜೀವನ ಸಂಗಾತಿಯೂ ತಮ್ಮನ್ನು ಸುಖವಾಗಿ ನೋಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ.ಅಂತವರಿಗಾಗಿಯೇ ಈ ರಾಶಿಯ ಹುಡುಗರು ಜನಿಸಿದ್ದಾರೆ ಎನ್ನಬಹುದು.

  • ಮಿಥುನ ರಾಶಿಯ ಪುರುಷರು

ಈ ರಾಶಿಯ ಹುಡುಗರು ವಿನೋದ ಪ್ರಿಯರಾಗಿರುತ್ತಾರೆ.ಸುತ್ತಮುತ್ತಲಿನ ಜನರಲ್ಲಿ ಸಂತೋಷವನ್ನು ಹರಡುತ್ತಾರೆ.ಇನ್ನು ತಮ್ಮ ಜೀವನ ಸಂಗಾತಿಯೊಂದಿಗೆ ನಂಬಿಕೆಯುಳ್ಳವರು ಇವರಾಗಿರುತ್ತಾರೆ.ತಮ್ಮ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಇವರು ನೀಡುತ್ತಾರೆ.ಇವರು ಉತ್ತಮ ಮಾತುಗಾರರಾಗಿರುವುದರಿಂದ ಮಾತಿನಲ್ಲಿ ತಮ್ಮ ಸಂಗಾತಿಯನ್ನು ಖುಷಿ ಪಡಿಸುತ್ತಾರೆ.ಈ ಪುರುಷರೊಂದಿಗೆ ಮದುವೆಯಾಗುವುದರಿಂದ ನಿಮ್ಮ ಜೀವನದಲ್ಲಿ ಸದಾ ಸಂತೋಷ,ಸುಖ ಶಾಂತಿ,ನೆಮ್ಮದಿ ನೆಲೆಸುತ್ತದೆ
ಹಾಗೂ ನಿಮ್ಮ ದಾಂಪತ್ಯ ಜೀವನವು ಆದರ್ಶವಾಗಿರುತ್ತದೆ.

  • ಕಟಕ ರಾಶಿಯ ಪುರುಷರು

ಈ ರಾಶಿಯ ಹುಡುಗರು ತಮ್ಮ ಸಂಗಾತಿಗೆ ಮತ್ತು ತಮ್ಮ ಕುಟುಂಬದ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ
ಹಾಗೂ ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆ.ಸಂಬಂಧದಲ್ಲಿ ಬದ್ದತೆಯನ್ನು ಕಾಪಾಡುತ್ತಾರೆ.ಇನ್ನು ಇವರ ಪತ್ನಿ ಇವರನ್ನು ನೋಡಿ ಹೆಮ್ಮೆ ಪಡುವ ಕೆಲಸ ಇವರು ಮಾಡುತ್ತಾರೆ.ಇನ್ನು ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡುವವರಾಗಿರುತ್ತಾರೆ.ಶಿಸ್ತುಬದ್ಧವಾಗಿ ಮಕ್ಕಳನ್ನು ಬೆಳೆಸುತ್ತಾರೆ.ಈ ರಾಶಿಯ ಹುಡುಗರನ್ನು ಮದುವೆಯಾಗುವುದರಿಂದ ಇವರ ಆತ್ಮೀಯತೆ ನೋಡಿ ಎರಡೂ ಕುಟುಂಬ ಗಳ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ.

  • ತುಲಾ ರಾಶಿಯ ಪುರುಷರು

ಈ ರಾಶಿಯ ಹುಡುಗರು ಉನ್ನತ ಸ್ಥಾನ ಮಾನದಲ್ಲಿ ಇರುವವರಾಗಿರುತ್ತಾರೆ.ತಮ್ಮ ಸಂಗಾತಿಯನ್ನು ಬಹಳ ಸುಖವಾಗಿ ನೋಡಿಕೊಳ್ಳುವವರಾಗಿರುತ್ತಾರೆ,ಇವರು ಕೆಟ್ಟದ್ದನ್ನು ಸಹಿಸುವುದಿಲ್ಲ ಹಾಗೂ ಒಳ್ಳೆಯ ಕೆಲಸಕ್ಕೆ ಸದಾ ಮುಂದಿರುತ್ತಾರೆ.
ಸಾಮಾಜಿಕವಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ.ಇವರು ನಂಬಿಕೆಗೆ ಅರ್ಹರು ಮತ್ತು ಇವರ ಪತ್ನಿ ಯಾಗಲು ನೀವು 7 ಜನ್ಮದ ಪುಣ್ಯ ಮಾಡಿರಬೇಕು.ಇವರು ಉತ್ತಮ ಗುಣದವರಾಗಿರುತ್ತಾರೆ ಹಾಗೂ ಸಂಗಾತಿಯ ಸಂತೋಷಕ್ಕೆ ಹೆಚ್ಚು ಶ್ರಮ ವಹಿಸುತ್ತಾರೆ.ಪತಿಗಿಂತ ಹೆಚ್ಚಾಗಿ ತಮ್ಮನ್ನು ಅರ್ಥಮಾಡಿಕೊಳ್ಳುವ ಒಬ್ಬ ಒಳ್ಳೆಯ ಗೆಳೆಯನಂತೆ ನಿಮ್ಮ ಜೊತೆ ಇರುತ್ತಾರೆ.ಇವರನ್ನು ಮದುವೆಯಾಗುವುದರಿಂದ ಮೊದಲಿಗೆ ಸ್ವಲ್ಪ ಕಷ್ಟವಾದರೂ ನಂತರ ನಿಮ್ಮನ್ನು ಸಂತೋಷದ ಉತ್ತುಂಗದಲ್ಲಿ ಇರಿಸುತ್ತಾರೆ.

  • ವೃಶ್ಚಿಕ ರಾಶಿಯ ಪುರುಷರು

ಈ ರಾಶಿಯ ಹುಡುಗರು ಕ್ರಿಯಾತ್ಮಕವಾಗಿರುತ್ತಾರೆ.ಇವರನ್ನು ಮದುವೆಯಾಗಿ ಸುಖ ಪಡದವರು ಭೂಮಿಯ ಮೇಲೆ ಇಲ್ಲ ಎನ್ನಬಹುದು.ಈ ಹುಡುಗರು ತಮ್ಮ ಸಂಗಾತಿಯನ್ನು ಬಹಳ ಪ್ರೀತಿ ಮಾಡುತ್ತಾರೆ ಹಾಗೂ ಜೀವನವನ್ನು ಸುಂದರವಾಗಿಸಾಗಿಸುತ್ತಾರೆ.ಈ ರಾಶಿಯ ಹುಡುಗರು ಸ್ವಲ್ಪ ಸುಳ್ಳು ಹೇಳಿದರೂ ತಮ್ಮ ಸಂಗಾತಿಗೆ ನಿಯತ್ತಾಗಿರುತ್ತಾರೆ.
ಇನ್ನು ಇವರ ಮೇಲೆ ನಂಬಿಕೆ ಇಟ್ಟರೆ ಅದು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು
ಇವರು ಇಷ್ಟ ಪಡವುದಿಲ್ಲ.ಸುಂದರವಾದ ಮತ್ತು ಸಿಹಿಯಾದ ಉಡುಗೊರೆಗಳನ್ನು ನೀಡುತ್ತಾರೆ.ನಿಮ್ಮ ಮನಸ್ಸನ್ನು ಸಂತೋಷಪಡಿಸಲು ಹಾತೊರೆಯುತ್ತಾರೆ.ಇವರು ತಮ್ಮ ಸಂಗಾತಿಯ ಖಾಸಗಿ ತನಕ್ಕೆ ಹೆಚ್ಚು ಒತ್ತನ್ನು ನೀಡುತ್ತಾರೆ.ಈ ಹುಡುಗರನ್ನು ಮದುವೆಯಾಗುವುದರಿಂದ ಜೀವನವಿಡೀ ಸರಸ ಸಲ್ಲಾಪಗಳಿಂದ ಕೂಡಬಹುದು.

ಧನ್ಯವಾದಗಳು.

Related Post

Leave a Comment