ನಿಮ್ಮ ಹಣೆ ಮೇಲಿರುವ ರೇಖೆಗಳಿಂದ ತಿಳಿಯಬಹುದಾದ 6 ರಹಸ್ಯಗಳು!

‘ನಮ್ಮ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗೋದು’ ಈ ಪದವನ್ನು ನಾವು ಹೆಚ್ಚಾಗಿ ಕೇಳಿರುತ್ತೇವೆ. ಒಮ್ಮೊಮ್ಮೆ ಈ ಪದವನ್ನು ಕೇಳಿದಾಗ ನಮಗೆ ಅನಿಸಿ ಬಿಡುತ್ತದೆ ಇದು ನಿಜಾನಾ ಅಂತಾ..ನಮಗೆ ಒಳೆಯದಾದರೂ ಅಥವಾ ಕೆಟ್ಟದ್ದೇ ಆದರೂ ಕೂಡ ನಾವು ಎಲ್ಲಾ ನನ್ನ ಹಣೆಬರಹ ಎಂದು ಹಲವಾರು ಬಾರಿ ಗೊಣಗಿರುವುದುಂಟು. ಈ ಪದವನ್ನು ನಾವು ಬಾಯಿ ಮಾತಿಗೆ ಆಡಿದರೂ ಕೂಡ ಇದರಲ್ಲೊಂದು ಅರ್ಥವಿದೆ. ಜ್ಯೋತಿಷ್ಯ ಶಾಸ್ತ್ರದ ಒಂದು ಪ್ರಕಾರವಾದ ಸಮುದ್ರ ವಿಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಹಣೆಯ ಮೇಲೆ ಅವನ ಭವಿಷ್ಯದಲ್ಲಾಗುವ ಪ್ರತಿಯೊಂದು ವಿಷಯಗಳನ್ನು ಬರೆಯಲಾಗಿದೆ ಎಂದು ನಂಬುತ್ತದೆ. ಹಾಗಾದರೆ ಹಣೆಯ ಮೇಲಿನ ರೇಖೆಗಳು ಯಾವೆಲ್ಲಾ ವಿಷಯಗಳನ್ನು ತಿಳಿಸುತ್ತದೆ ನೋಡಿ:

​ಹಣೆಯಲ್ಲಿ ಸ್ಪಷ್ಟ ಹಾಗೂ ಅಸ್ಪಷ್ಟ ರೇಖೆಗಳು

ಕೆಲವೊಬ್ಬರ ಹಣೆಯ ಮೇಲಿನ ಕೆಲವೊಂದು ರೇಖೆಗಳು ಸ್ಪಷ್ಟವಾಗಿದ್ದರೆ, ಸ್ವಲ್ಪ ರೇಖೆಗಳು ಅಸ್ಪಷ್ಟವಾಗಿರುತ್ತದೆ. ಈ ರೀತಿಯಾಗಿ ಹಣೆಯ ಮೇಲೆ ರೇಖೆಯನ್ನು ಹೊಂದಿರುವವರು ಕೋಪಿಷ್ಟರಾಗಿರುತ್ತಾರೆ. ಒಮ್ಮೆ ನೀವು ಸರಿಯಾಗಿ ಅಕಾಲಿಕ ಮರಣ ಹೊಂದಿದವರ ಹಣೆಯ ರೇಖೆಯನ್ನು ಗಮನಿಸಿ, ಅವರ ಹಣೆಯ ರೇಖೆಗಳು ಸ್ಪಷ್ಟ ಹಾಗೂ ಅಸ್ಪಷ್ಟವಾಗಿರುತ್ತದೆ. ಹಣೆಯಲ್ಲಿ ಇಂತಹ ರೇಖೆಯುಳ್ಳವರು ಪರಶಿವನನ್ನು ಜಪಿಸುವುದರಿಂದ ಮುಂದೆ ಎದುರಾಗಬಹುದಾದ ಸಮಸ್ಯೆಯಿಂದ ಹೊರಬಹುದು.

​ತ್ರಿಶೂಲದಾಕೃತಿಯ ರೇಖೆಗಳು

ಕೆಲವೊಬ್ಬರ ಹಣೆಯ ರೇಖೆಗಳು ಪರಶಿವನ ಕೈಯಲ್ಲಿರುವ ತ್ರಿಶೂಲದ ಆಕಾರದಲ್ಲಿರುತ್ತದೆ. ಅತವರು ತುಂಬಾನೇ ಅದೃಷ್ಟಶಾಲಿಗಳಾಗಿರುತ್ತಾರೆ. ಸಮಾಜದಲ್ಲಿ ಇಂತಹ ವ್ಯಕ್ತಿಗಳು ಇತರರಿಂದ ಗೌರವಕ್ಕೆ ಭಾಜೀನರಾಗಿರುತ್ತಾರೆ. ತ್ರಿಶೂಲದಾಕಾರದ ರೇಖೆಯುಳ್ಳವರ ಸೊಸೆ, ಮಗ ಮತ್ತು ಅವರ ಮಕ್ಕಳೂ ಕೂಡ ದೀರ್ಘಾಯುಷಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಹಣೆಯಲ್ಲಿ ತ್ರಿಶೂಲದಾಕಾರದ ರೇಖೆಯುಳ್ಳವರು ಶ್ರೀಮಂತರಾಗಿರಲಿ, ಮರ್ಧಯಮ ವರ್ಗದವರಾಗಿರಲಿ ಅಥವಾ ಬಡವರೇ ಆದರೂ ಕೂಡ ಅವರಿಗೆ ಹಣದ ಅವಶ್ಯಕತೆ ಒದಗಿ ಬಂದಾಗ ಎಲ್ಲಿಂದಾದರೂ ಕೂಡ ಹಣ ಬಂದು ಇವರ ಕೈ ಸೇರುತ್ತದೆ. ಇವರಿಗೆ ಹಣಕ್ಕೆ ತೊಂದರೆಯಿರುವುದಿಲ್ಲ. ಅದೃಷ್ಟ ಲಕ್ಷ್ಮೀಯರು ಸದಾಕಾಲ ಇವರ ಮನೆಯಲ್ಲೇ ಇರುತ್ತಾರೆ.

​ಕೂದಲು ರಹಿತ ಅರ್ಧಚಂದ್ರಾಕಾರದ ರೇಖೆ

ಇಂತಹ ಮಹಿಳೆಯರ ಹಣೆಗಳಲ್ಲಿ ಕೂದಲಿರುವುದಿಲ್ಲ. ಇವರ ಹಣೆಯ ಭಾಗ ಸುಮಾರು 3 ಬೆರಳುಗಳಷ್ಟು ಅಗಲವನ್ನು ಹೊಂದಿರುತ್ತದೆ. ಇವರ ಹಣೆಯ ರೇಖೆಗಳು ಅರ್ಧಚಂದ್ರಾಕಾರದಲ್ಲಿರುತ್ತದೆ. ಇಂತಹ ಮಹಿಳೆಯರು ಆರೋಗ್ಯವಂತರು ಹಾಗೂ ಅದೃಷ್ಟಶಾಲಿಗಳಾಗಿರುತ್ತಾರೆ. ಕೂದಲುರಹಿತ 3 ಇಂಚುಗಳ ಚಂದ್ರನಾಕಾರದ ಹಣೆಯುಳ್ಳ ಮಹಿಳೆಯರ ಹಣೆಯಲ್ಲಿ ಸ್ವಸ್ಥಿಕ್‌ ಚಿಹ್ನೆಗಳಿದ್ದರೆ ಇನ್ನು ಒಳ್ಳೆಯದು. ಇವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷಗಳನ್ನು ಪಡೆಯುತ್ತಾರೆ.

​ಉದ್ದನೆಯ ರೇಖೆ

ಹಣೆಯಲ್ಲಿ ನೀಳವಾದ ರೇಖೆಯುಳ್ಳ ಮಹಿಳೆಯರನ್ನು ನಾವು ಹೆಚ್ಚಾಗಿ ನೋಡಲು ಸಾಧ್ಯವಿಲ್ಲ. ಕೆಲವೊಂದು ವಿಶೇಷ ಮಹಿಳೆಯರ ಹಣೆಯಲ್ಲಿ ಮಾತ್ರ ನಾವು ಈ ರೀತಿಯ ರೇಖೆಗಳನ್ನು ನೋಡಲು ಸಾಧ್ಯ. ಹೆಚ್ಚಿನವರ ಹಣೆಯಲ್ಲಿ ರೇಖೆಗಳು ಅರ್ಧಕ್ಕೆ ಅಸ್ಪಷ್ಟವಾಗಿರುತ್ತದೆ. ಈ ರೀತಿ ಉದ್ದನೆಯ ನೀಳವಾದ ರೇಖೆಯನ್ನು ನಾವು ಹಣೆಯಲ್ಲಿ ಗುರುತಿಸುವುದು ತುಂಬಾನೇ ಕಷ್ಟ. ಹಣೆಯಲ್ಲಿ ಇಂತಹ ನೀಳವಾದ ರೇಖೆಯುಳ್ಳವರು ತುಂಬಾನೇ ಅದೃಷ್ಟಶಾಲಿಗಳು ಅದರಲ್ಲೂ ನೀಳವಾದ ರೇಖೆಯೊಂದಿಗೆ ತ್ರಿಶೂಲದಾಕಾರದ ಚಿತ್ರವಿದ್ದರಂತೂ ಕೇಳೋದೇ ಬೇಡ ಯಾಕೆಂದರೆ ಅವರು ದೈವೀ ಸಂಭೂತರಾಗಿರುತ್ತಾರೆ. ಅವರ ಮೇಲೆ ದೇವರ ವಿಶೇಷ ಆಶೀರ್ವಾದವಿರುತ್ತದೆ ಹಾಗೂ ಇಂತವರು ಹೆಚ್ಚಾಗಿ ಭವಿಷ್ಯದಲ್ಲಿ ಸಂತರು, ತಪಸ್ವಿಗಳಾಗುತ್ತಾರೆ.

​ಅಗಲವಾದ ಹಣೆ

ಅಗಲವಾದ ಹಣೆಯನ್ನು ಹೊಂದಿದವರು ಭವಿಷ್ಯದಲ್ಲಿ ಬೋಧನೆಯನ್ನು ಹೆಚ್ಚು ಇಷ್ಟಪಡುವವರಾಗಿರುತ್ತಾರೆ. ವಿಶಾಲವಾದ ಅಗಲ ಹಣೆಯು ಆ ವ್ಯಕ್ತಿಯ ಅದೃಷ್ಟವನ್ನು ಸೂಚಿಸುತ್ತದೆ. ಅಗಲವಾದ ಹಣೆಯುಳ್ಳವರು ಜೀವನದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಕೂಡ ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ಇವರ ಸಂಗಾತಿಯ ಆಯಸ್ಸು ಕೂಡ ಹೆಚ್ಚಿರುತ್ತದೆ. ಅದೇ ರೀತಿ ಇಂತವರು ಅನೇಕ ಬಾರಿ ದುರಾದೃಷ್ಟವನ್ನು ಅನುಭವಿಸಬೇಕಾಗುತ್ತದೆ.

​ಬಿಲ್ಲಿನಾಕಾರದ ಹಣೆ

ಈ ರೀತಿಯ ಹಣೆಯುಳ್ಳವರು ತುಂಬಾನೇ ವಿರಳ ಎನ್ನಬಹುದು. ಈ ರೀತಿಯ ಹಣೆಯನ್ನು ನಾವು ಹೆಚ್ಚಿನವರಲ್ಲಿ ಕಾಣಲು ಸಾಧ್ಯವಿಲ್ಲ. ಇಂತವರು ಸಮಾಜದಲ್ಲಿ ವಿರಳವಾದರೂ ಕೂಡ ಜಗತ್ತಿನಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿರುತ್ತಾರೆ. ಜೀವನದಾದ್ಯಂತ ಇವರು ಬೇರೆಯವರಿಂದ ಗೌರವವನ್ನು ಪಡೆದುಕೊಳ್ಳುತ್ತಾರೆ. ಅವರು ಸತ್ತು ಮಣ್ಣಲ್ಲಿ ಮಣ್ಣಾದರೂ ಕೂಡ ಅವರ ಹೆಸರು ಪ್ರಪಂಚದಲ್ಲಿ ಅಜರಾಮರವಾಗಿರುತ್ತದೆ.

​ಹಣೆಯ ಮೇಲೆ ಮೂರು ನೇರ ರೇಖೆಗಳು

ಹಣೆಯ ಮೇಲೆ ನೀಳವಾದ ಮೂರು ಸಮನಾಂತರ ರೇಖೆಯನ್ನು ಹೊಂದಿರುವವರು ಅತ್ಯಂತ ಸಂತೋಷದಾಯಕ, ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಗಳಾಗಿರುತ್ತಾರೆ. ಇಂತವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಾಧನೆಯನ್ನು ಮಾಡುತ್ತಾರೆ.

Related Post

Leave a Comment