ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಬಗ್ಗೆ ಅನೇಕರಿಗೆ ತಿಳಿಯದಿರುವ ರಹಸ್ಯ!

ರಹಸ್ಯಮಯ ದೇವಾಲಯ ಎಂದರೆ ತಿರುಪತಿ ಬಾಲಾಜಿ ದೇವಾಲಯ. ತಿರುಪತಿ ಬಗ್ಗೆಎಲ್ಲರಿಗೂ ತಿಳಿದಿದೆ. ಆದರೆ ಈ ದೇವಾಲಯದ ಕೆಲವೊಂದು ರಹಸ್ಯಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ತಿರುಪತಿ ಇರುವುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ. ತಿರುಪತಿಯಲ್ಲಿ ವೆಂಕಟೇಶ್ವರನನ್ನು ಪೂಜಿಸಲಾಗುತ್ತದೆ. ವೆಂಕಟರಮಣ ಸ್ವಾಮಿಯನ್ನು ಭಗವಾನ್ ವಿಷ್ಣುವಿನ ಅವತಾರ ಅಂತ ಕರೆಯಲಾಗುತ್ತದೆ.ತಿರುಪತಿಯ ಗರ್ಭಗುಡಿಯಲ್ಲಿರುವ
ಮೂರ್ತಿಯನ್ನು ಯಾವುದೇ ಮನುಷ್ಯ ನಿರ್ಮಿಸಿಲ್ಲ. ಸ್ವತಹಃ ಭಗವಂತನೇ ಕಲ್ಲಾಗಿ ನಿರ್ಮಾಣವಾದ ಮೂರ್ತಿ ಇದು.

ದಿವ್ಯ ಮೂರ್ತಿಯನ್ನು ಕಣ್ಣ ಮುಂದೆ ದರ್ಶನ ಮಾಡಿದಾಗ ನಿಜವಾಗಿಯೂ ಅಲ್ಲಿ ದೇವರೇ ನೆಲೆಸಿದ್ದಾರೆ ಎನ್ನುವ ಭಾವನೆ ಪ್ರತಿಯೊಬ್ಬ ಭಕ್ತರಿಗೂ ಆಗುತ್ತದೆ. ಅದು ಮೂರ್ತಿಯಲ್ಲ ಸಾಕ್ಷಾತ್ ದೇವರು ಅಂತ ಅನಿಸುತ್ತದೆ. ಇನ್ನು ತಿಮ್ಮಪ್ಪನ ವಿಗ್ರಹದ ತಲೆಯ ಮೇಲೆ ಇರುವ ಕೂದಲು ಅಸಲಿ ಕೂದಲು. ಈ ಕೂದಲು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುತ್ತದೆ. 2200 ವರ್ಷಗಳಿಂದಲೂ ಈ ಕೂದಲು ವಿಗ್ರಹದಲ್ಲಿದೆ. ವಿಗ್ರಹಕ್ಕೆ ಕಿರೀಟ ಹಾಕುವುದರಿಂದ ಭಕ್ತರಿಗೆ ಆ ಕೂದಲು ಕಾಣಿಸುವುದಿಲ್ಲ.

ತಿರುಪತಿ ವೆಂಕಟೇಶ್ವರನ ವಿಗ್ರಹದಿಂದ ಸಮುದ್ರದ ಅಲೆಗಳು ಭೋರ್ಗರೆವ ರೀತಿಯಾಗಿ ಶಬ್ದ ಬರುತ್ತದೆ ಅಂತೆ. ಮೂರ್ತಿಗೆ ಕಿವಿ ಇಟ್ಟು ಕೇಳಿದರೆ ಸಮುದ್ರದ ಮಧ್ಯೆ ನಿಂತ ಅನುಭವ ಆಗುತ್ತದೆ ಅಂತೆ. ಇದನ್ನು ಸ್ವತಃ ಅಲ್ಲಿನ ಅರ್ಚಕರೇ ಹೇಳುತ್ತಾರೆ. ತಿರುಪತಿಗೆ ಬಂದು ಭಕ್ತಿಯಿಂದ ಕೇಳಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತದೆ. ಇಷ್ಟಾರ್ಥ ಪೂರೈಕೆ ಆದನಂತರ ಮತ್ತೆ ತಿರುಪತಿಗೆ ಹೋಗುವವರು ಮುಡಿಯನ್ನು ಅಲ್ಲಿಗೆ ಅರ್ಪಿಸಿ ಬರುತ್ತಾರೆ.

ತಿರುಪತಿಯಲ್ಲಿ ಪ್ರತಿದಿನ 20000 ಹೆಚ್ಚು ಭಕ್ತರು ತಮ್ಮ ಮುಡಿಯನ್ನು ಅರ್ಪಿಸುತ್ತಾರೆ. ಅಲ್ಲಿಗೆ ಬರುವ ಭಕ್ತರು ತಮಗೆ ಆದಷ್ಟು ಕಾಣಿಕೆಯನ್ನು ಹಾಕುತ್ತಾರೆ ಹೀಗಾಗಿ ಈ ದೇವಾಲಯ ಜಗತ್ತಿನ ಶ್ರೀಮಂತ ದೇವಾಲಯಗಳಲ್ಲಿ ಒಂದು ಕರೆಸಿಕೊಂಡಿದೆ. ದೇವರ ಹುಂಡಿಯಲ್ಲಿ ಬಿದ್ದ ಕಾಣಿಕೆಯನ್ನು ಎಣಿಸುವುದಕ್ಕೆ 50 ಜನರನ್ನು ನಿಯೋಜಿಸಲಾಗಿದೆ. ಭಕ್ತರ ಕಾಣಿಕೆಯಿಂದಲೇ ಪ್ರತಿ ತಿಂಗಳು 3000 ಕೋಟಿ ಹಣ ಹರಿದುಬರುತ್ತದೆ.

ಈ ಹಣವನ್ನು ಸಮಾಜಕ್ಕಾಗಿ ಬಳಸಲಾಗುತ್ತದೆ ಮತ್ತು ಕರೋನ ಸಂದರ್ಭದಲ್ಲಿ ತಿರುಪತಿ ದೇವಾಲಯಕ್ಕೆ ಕೂಡ ಬೀಗ ಹಾಕಲಾಗಿತ್ತು. ಇಂತಹ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ದೇವಾಲಯದ ಹೆಸರಿನಲ್ಲಿರುವ ಫಿಕ್ಸಡ್ ಡೇಪೋಸಿಟ್ ಹಣದ ಬಡ್ಡಿಯಿಂದ 3000 ಸಿಬಂದಿಗಳಿಗೆ ಮೂರು ತಿಂಗಳ ಸಂಬಳ ಮತ್ತು ಪೆನ್ಷನ್ ಅನ್ನು ಒಂದೇ ಸಲ ಕೊಟ್ಟಿದ್ದರು. ಪ್ರಪಂಚದ ಮೂಲೆ ಮೂಲೆಯಿಂದ ತಿರುಪತಿಗೆ ಭಕ್ತರು ಬರುತ್ತಾರೆ. ರಾಜಕಾರಣಿಗಳಿಂದ ಇಡಿದು ಉದ್ಯಮಿಗಳವರೆಗೆ ಸಾಮಾನ್ಯ ಜನರಿಂದ ಹಿಡಿದು ಕೋಟ್ಯಾಧಿಪತಿಗಳವರೆಗೂ ತಿರುಪತಿಗೆ ಬಂದು ಬಾಲಾಜಿಯ ದರ್ಶನ ಪಡೆಯುತ್ತಾರೆ.

ತಿರುಪತಿಗೆ ಹೋದಾಗ ಒಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮುಖ್ಯದ್ವಾರದ ಎಡ ಭಾಗದಲ್ಲಿ ಒಂದು ಬೆತ್ತವನ್ನು ಇಡಲಾಗಿದೆ. ವೆಂಕಟೇಶ್ವರ ದೇವರು ಬಾಲ್ಯದಲ್ಲಿ ಇರುವಾಗ ಅವರ ಅಮ್ಮ ಪಡೆದ ಬೆತ್ತ ಇದು. ಇದರಿಂದ ವೆಂಕಟೇಶ್ವರನಿಗೆ ಗಾಯ ಆಗಿದ್ದು ಅದು ಇಲ್ಲಿಯವರೆಗೂ ನೋವು ಇದೆ. ಇದೇ ಕಾರಣಕ್ಕೆ ಪ್ರತಿ ಶುಕ್ರವಾರ ಬಾಲಾಜಿ ಹಣೆಯ ಭಾಗದಲ್ಲಿ ಚಂದನದ ಲೇಪನ ಹಾಕಲಾಗುತ್ತದೆ.

ಗರ್ಭಗುಡಿಯಲ್ಲಿ ಸಾಕ್ಷಾತ್ ದೇವರು ಈಗಲೂ ಇದ್ದಾರೆ ಎನ್ನುವ ಕಾರಣಕ್ಕೆ ಗರ್ಭಗುಡಿಯ ವಾತಾವರಣವನ್ನು ಯಾವಾಗಲೂ ತಂಪಾಗಿ ಇರಿಸಲಾಗುತ್ತದೆ.ಫ್ಯಾನ್ ಕೂಡ ಅಳವಡಿಸಲಾಗಿದೆ. ಇಷ್ಟೆಲ್ಲ ಮಾಡಿದರೂ ಬಾಲಾಜಿಯ ಮೇಲೆ ಬೆವರು ಸುರಿಯುತ್ತದೆ. ಅದನ್ನು ಅರ್ಚಕರು ಕಣ್ಣಾರೆ ನೋಡಿದ್ದಾರೆ.ಅರ್ಚಕರು ಅದನ್ನು ಯಾವಾಗಲು ವರೆಸುತ್ತಿರುತ್ತಾರೆ.

ಬಾಲಾಜಿಗೆ ಸೀರೆ ತೊಡಿಸುವ ಅಲಂಕಾರವೂ ಕೂಡ ಇದೆ. ಇದಕ್ಕೆ ಕಾರಣ ಬಾಲಾಜಿಯಲ್ಲಿ ಲಕ್ಷ್ಮಿಯ ರೂಪವು ಕೂಡ ಇದೆ ಎನ್ನುವುದು ಲಕ್ಷ್ಮಿದೇವಿಯು ತಿರುಮಲದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ.ಮೂರ್ತಿಗೆ ಸ್ನಾನ ಮಾಡಿಸಿ ಚಂದನದ ಲೇಪ ಹಚ್ಚುವ ವೇಳೆ ವಿಗ್ರಹದ ಹೃದಯದ ಭಾಗದಲ್ಲಿ ಲಕ್ಷ್ಮಿಯ ಸ್ವರೂಪ ಕಾಣಿಸುತ್ತದೆ. ಬಾಲಾಜಿ ಹೃದಯದಲ್ಲಿ ಲಕ್ಷ್ಮಿ ವಿರಾಜಮಾನವಾಗಿದ್ದಾಳೆ ಎಂಬ ನಂಬಿಕೆ ಇದೆ.

ಪ್ರತಿ ಗುರುವಾರದಂದು ನಡೆಯುವ ನಿಜರೂಪ ದರ್ಶನಂ ಕಾರ್ಯಕ್ರಮದಲ್ಲಿ ಸ್ವಾಮಿಯ ವಿಗ್ರಹವನ್ನು ಬಿಳಿಯ ಮರದ ಕೊರಡಡ ತೆಯ್ದಿರುವ ಲೇಪನವನ್ನು ಅಲಂಕರಿಸಲಾಗುತ್ತದೆ. ಕಾರ್ಯಕ್ರಮದ ಬಳಿಕ ಒಣಗಿದ ಲೇಪನದ ಸಿಪ್ಪೆಯನ್ನು ತೆಗೆದಾಗ ಒಳ ಭಾಗದಲ್ಲಿ ಲಕ್ಷ್ಮಿ ದೇವಿಯ ಚಿತ್ರ ಇರುವುದು ಕಾಣಿಸುತ್ತದೆ.ಇದನ್ನು ಅರ್ಚಕರು ಮಾರಾಟ ಮಾಡುತ್ತಾರೆ.

ಭಗವಾನ್ ವಿಷ್ಣುವಿಗೆ ತುಳಸಿ ಎಂದರೆ ಪಂಚಪ್ರಾಣ. ವಿಷ್ಣುವಿನ ಅವತಾರ ಆಗಿರುವ ತಿರುಮಲೇಶನಿಗೂ ಕೂಡ ತುಳಸಿ ಅಂದರೆ ತುಂಬಾ ಇಷ್ಟ. ಬಹುತೇಕ ಎಲ್ಲ ದೇವಾಲಯದಲ್ಲಿ ತುಳಸಿ ಮಾಲೆಯನ್ನು ಮೂರ್ತಿಗೆ ಹಾಕಿದ ನಂತರ ಆ ತುಳಸಿಯನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ನೀಡಲಾಗುತ್ತದೆ. ಆದರೆ ತಿರುಪತಿಯಲ್ಲಿ ಹೀಗೆ ಮಾಡುವುದಿಲ್ಲ. ದೇವರಿಗೆ ಅರ್ಪಿಸಿದ ತುಳಸಿಯನ್ನು ಮೂರ್ತಿಗೆ ಹಾಕಿದ ನಂತರ ದೇವಾಲಯದ ಮುಂಭಾಗದಲ್ಲಿ ಇರುವ ಬಾವಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ತಿರುಪತಿಯಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಲಡ್ಡು ಮಾಡಲಾಗುತ್ತದೆ.ಈ ಲಡ್ಡು ಮಾಡುವುದಕ್ಕೆ ಯಾವುದೇ ಹೊಸ ತಂತ್ರಜ್ಞಾನವನ್ನು ಉಪಯೋಗ ಮಾಡುತ್ತಿಲ್ಲ. ಬಾಲಾಜಿಗೆ ನೈವೇದ್ಯಕ್ಕೆ ಅರ್ಪಿಸುವ ಹಾಲು ಹೂವು ಬೆಣ್ಣೆ ತುಪ್ಪ ಮೊದಲಾದವುಗಳನ್ನು ತಿರುಮಲದಿಂದ 24 ಕಿಲೋಮೀಟರ್ ದೂರ ಇರುವ ಗ್ರಾಮವೊಂದರಿಂದ ಶತಮಾನಗಳಿಂದ ತರಲಾಗುತ್ತಿದೆ.ಈ ಗ್ರಾಮದಲ್ಲಿ ಬಿಟ್ಟರೆ ಬೇರೆ ಯಾವುದೇ ಸಾಮಗ್ರಿಗಳನ್ನು ಬಳಸಿಕೊಂಳ್ಳಲಾಗುವುದಿಲ್ಲ. ರಹಸ್ಯ ಏನೆಂದರೆ ಈ ಗ್ರಾಮಕ್ಕೆ ಅಲ್ಲಿರುವ ನಿವಾಸಿಗಳನ್ನು ಬಿಟ್ಟರೆ ಬೇರೆ ಯಾರಿಗೂ ಪ್ರವೇಶ ಇಲ್ಲ. ಈ ಗ್ರಾಮಸ್ಥರೆಲ್ಲ ಇಂದಿಗೂ ಕೂಡ ಆ ಕಾಲದ ಕಟ್ಟು-ನಿಟ್ಟಿನ ಪಾಡುಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ವಿಶೇಷ ಏನೆಂದರೆ ಈ ಗ್ರಾಮಸ್ಥರು ಸೊಂಟದಿಂದ ಮೇಲೆ ವಸ್ತ್ರಗಳನ್ನು ತೊಡುವುದಿಲ್ಲವಂತೆ. ಅಲ್ಲಿನ ಜನ ತುಂಬಾ ಶುದ್ಧ ಮತ್ತು ಆಚಾರದಿಂದ ಜೀವನವನ್ನು ನಡೆಸುತ್ತಿದ್ದಾರೆ. ತಿರುಪತಿ ಗರ್ಭದಲ್ಲಿ ಇರುವ ದೀಪ ಸಾವಿರಾರು ವರ್ಷಗಳಿಂದಲೂ ಹಾಗೆ ಉರಿಯುತ್ತಿದೆ ಎನ್ನುವ ನಂಬಿಕೆ ಇದೆ. ಈ ದೀಪದಲ್ಲಿ ಯಾವುದೇ ಎಣ್ಣೆ, ತುಪ್ಪವು ಇಲ್ಲ ಆದರೆ ದೀಪ ಉರಿಯುತ್ತಿದೆ.ಇದು ಹೇಗೆ ಸಾಧ್ಯ ಎನ್ನುವುದಕ್ಕೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ.ಹೀಗೆ ಇಲ್ಲಿನ ಕೆಲವು ರಹಸ್ಯಗಳು NASA ಗೂ ಕೂಡ ಅರ್ಥ ಆಗಿಲ್ಲ ಹಾಗೂ ಆಗುವುದು ಇಲ್ಲ ಯಾಕೆಂದರೆ ಇದು ದೇವರ ಸೃಷ್ಟಿ.

Related Post

Leave a Comment