ಭವಿಷ್ಯದ, ಆಧುನಿಕ ಬೆಂಗಳೂರು ನಿರ್ಮಾಣದ ದೂರದೃಷ್ಟಿ: ಪಿ.ಸಿ.ಮೋಹನ್

ಭವಿಷ್ಯದ, ಆಧುನಿಕ ಬೆಂಗಳೂರಿನ ದೂರದೃಷ್ಟಿ

ಬೆಂಗಳೂರು ಮಹಾನಗರ ಹಿಗ್ಗುತ್ತಿದೆ. ಜನ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ಆಗಲೇಬೇಕಾಗಿದೆ. ಇಂಥ ಅಭಿವೃದ್ಧಿ ಕಾರ್ಯಗಳನ್ನು ಸುಸೂತ್ರವಾಗಿ ನಡೆಸುವ ಗುರಿಯನ್ನು ಹೊಂದಿದ್ದೇನೆ ಎಂಬುದಾಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪಿ.ಸಿ ಮೋಹನ್ ಅವರು ಭರವಸೆಯ ನುಡಿಯನ್ನು ಉಚ್ಚರಿಸಿದ್ದಾರೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳಿಗೆ ಹೈಟೆಕ್ ಸ್ಪರ್ಶ ನೀಡುವುದೇ ನನ್ನ ಮುಂದಿನ ಉದ್ದೇಶ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಭವಿಷ್ಯದ ಬೆಂಗಳೂರಿನ ಬಗ್ಗೆ ಸ್ಪಷ್ಟ ಕಲ್ಪನೆ ನನಗಿದೆ. ಪ್ರಮುಖವಾಗಿ ಹೈಸ್ಪೀಡ್​ ಸಂಚಾರ ವ್ಯವಸ್ಥೆ, ಅಡೆ ತಡೆಯಿಲ್ಲದ ಪ್ರಯಾಣ ಸೌಕರ್ಯ, ಅತ್ಯಾಧುನಿಕ ಬಡಾವಣೆಗಳು, ಒಂದೇ ಪ್ರದೇಶದಲ್ಲಿ ಮೂಲ ಸೌಕರ್ಯಗಳು ದೊರೆಯುವ ವಸತಿ ಪ್ರದೇಶ ನಿರ್ಮಾಣ ಮಾಡುವುದಕ್ಕೆ ನಾನು ಪಣ ತೊಟ್ಟಿದ್ದೇನೆ. ಯೋಜಿತ ನಗರ ನಿರ್ಮಾಣವನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಪಿ.ಸಿ ಮೋಹನ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಈಗ ಅಂತಾರಾಷ್ಟ್ರಿಯ ನಗರ. ಇಲ್ಲಿ ವಾಸ ಮಾಡುವ ಜನರು ಹಾಗೂ ಇಲ್ಲಿಗೆ ನಾನಾ ಉದ್ದೇಶಗಳಿಗೆ ಬರುವ ವಿದೇಶಗರು ಹಾಗೂ ಹೊರರಾಜ್ಯಗಳ ಜನರಿಗೆ ಬ್ರಾಂಡ್ ಬೆಂಗಳೂರಿನ ದರ್ಶನ ಮಾಡಿಸಲಿದ್ದೇನೆ. ಕಳೆದ 15 ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಕೈಗೊಂಡಿದ್ದೇನೆ. ಮುಂದಿನ ಬಾರಿ ಆಯ್ಕೆಯಾದಾಗಲೂ ಇನ್ನೂ ಹೆಚ್ಚಿನ ಆದ್ಯತೆಯೊಂದಿಗೆ ಕೆಲಸ ಮಾಡುವೆ ಎಂಬುದಾಗಿ ಪಿ.ಸಿ ಮೋಹನ್ ಅವರು ಹೇಳಿದ್ದಾರೆ. ನನ್ನ ಗೆಲುವು ಮತ್ತು ಬಿಜೆಪಿಯ ಅಧಿಕಾರಕ್ಕೆ ಬರುವುದರಿಂದ ಮಾತ್ರ ಇವೆಲ್ಲವೂ ಸಾಧ್ಯ ಎಂದು ಹೇಳಿದ್ದಾರೆ.

Related Post

Leave a Comment