ಔಷಧಿ ಇಲ್ಲದೆ ಬಿಪಿ ಕಂಟ್ರೋಲ್ ಮಾಡಬಹುದು!

0 328

BP can be controlled without medicine :ಅಧಿಕ ರಕ್ತದ ಒತ್ತಡ ಇದನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ. ಇದನ್ನು ಸರಿ ಮಾಡುವುದು ಹೇಗೆ ಎಂದರೆ ಜೀರ್ಣ ಕ್ರಿಯೆ ಸಮಸ್ಸೆ ನಿವಾರಣೆ,ಮಾನಸಿಕ ಒತ್ತಡ ಮಲ ಬದ್ಧತೆ ಸಮಸ್ಸೆ ನಿವಾರಣೆ ಮಾಡಿಕೊಳ್ಳುವುದು ಮತ್ತು ಸಾತ್ವಿಕ ಆಹಾರವನ್ನು ಸೇವನೆ ಮಾಡುವುದು. ಆದಷ್ಟು ಹಣ್ಣು ತರಕಾರಿ ಸೊಪ್ಪಿನ ಸೇವನೆ ಮಾಡಬೇಕು. ಇದರ ಜೊತೆಗೆ ರಕ್ತ ನಾಳಗಳಲ್ಲಿ ಬ್ಲಾಕೆಜ್ ಆಗಿರುವುದನ್ನು ತೆಗೆಯುವುದಕ್ಕೆ ನೀವು ಮನೆಯಲ್ಲೇ ಒಂದು ಚಿಕಿತ್ಸೆಯನ್ನು ಮಾಡಿಕೊಳ್ಳಬಹುದು.

ಇಂದಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆಯ ವಿಷ್ಯಕ್ಕೆ ಬಂದಾಗ ರಕ್ತದ ಒತ್ತಡ ಹಾಗೂ ಸಕ್ಕರೆ ಕಾಯಿಲೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ! ಇವೆರಡೂ ಕೂಡ ಸೈಲೆಂಟ್ ಕಿಲ್ಲರ್ ಎಂದರೆ ತಪ್ಪಾಗಲಾರದು! ಕೆಲವೊಮ್ಮೆ ಯಾವುದೇ ಮುನ್ಸೂಚನೆಗಳನ್ನು ನೀಡದೇ ಕಾಡುವ ಈ ಎರಡು ಕಾಯಿಲೆಗಳ ಬಗ್ಗೆ ಎಷ್ಟು ಜಾಗರೂಕತೆ ವಹಿಸಿದರೂ ಕಡಿಮೆಯೇ!

ಅದರಲ್ಲೂಇತ್ತೀಚಿನ ದಿನಗಳಲ್ಲಿ ಹೇಗೆ, ಒತ್ತಡದ ಜೀವನಶೈಲಿ ಹಾಗೂ ಅಸಮರ್ಪಕ ಆಹಾರ ಪದಾರ್ಥಗಳ ಸೇವನೆಯಿಂದಾಗಿ, ಇಂದಲ್ಲಾ ನಾಳೆ ನಮಗೂ ರಕ್ತದ ಒತ್ತಡ ಬರಬಹುದು ಎಂಬ ಭಯ ಎಲ್ಲರಿಗೂ ಕಾಡುವಂತಾಗಿದೆ! ಅದರಲ್ಲೂ ಮಧ್ಯವಯಸ್ಸು ದಾಟಿದವರು ಹಾಗೂ ಯುವ ಒತ್ತಡದ ಜಂಜಾಟದಲ್ಲಿ ದುಡಿಯುವ ಯುವಜನತೆಯರು ಪ್ರತಿ ತಿಂಗಳು ರಕ್ತದ ಒತ್ತಡದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರೇ ಹೇಳುತ್ತಾರೆ. ಯಾಕೆಂದರೆ ಒಂದು ವೇಳೆ ವ್ಯಕ್ತಿ ಯ ಆರೋಗ್ಯದಲ್ಲಿ ಈ ರಕ್ತದ ಒತ್ತಡ ಹೆಚ್ಚಾದಂತೆ, ಮುಂದಿನ ದಿನಗಳಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಒಂದರ ಹಿಂದೆ ಒಂದು ಕಾಡುವ ಅಪಾಯ ಹೆಚ್ಚಿರುತ್ತದೆ…

ಇನ್ನೂ ಅಪಾಯಕಾರಿ ವಿಷ್ಯಗಳು ಏನೆಂದ್ರೆ, ಈ ರಕ್ತದೊತ್ತಡದ ಸಮಸ್ಯೆ ಹೆಚ್ಚಾದರೆ, ಹೃದಯದ ಸಮಸ್ಯೆ ಬಿಟ್ಟೂ ಬಿಡದೆ ಕಾಡುವ ಅಪಾಯ ಹೆಚ್ಚಿರುತ್ತದೆ. ಹಾಗೆಂದು ದೇಹದ ರಕ್ತದ ಒತ್ತಡ ತುಂಬಾ ಕಡಿಮೆ ಆದರೂ ಸಾಕಷ್ಟು ತೊಂದರೆ ಇದೆ! ಒಟ್ಟಾರೆಯಾಗಿ ಹೇಳಬೇಕೆಂದರೆ, ರಕ್ತದ ಒತ್ತಡ ಹೆಚ್ಚಾಗಲೂ ಬಾರದು ಹಾಗೂ ಕಡಿಮೆ ಆಗಲೂ ಬಾರದು… ಹೀಗಾಗಿ ಸಹಜವಾದ ರಕ್ತದ ಒತ್ತಡವನ್ನು ಕಾಯ್ದುಕೊಳ್ಳಲು, ಆರೋಗ್ಯಕಾರಿ ಜೀವನಶೈಲಿ ಹಾಗೂ ಸರಿಯಾದ ಆಹಾರ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡು ಜೀವನ ನಡೆಸಬೇಕಾಗುತ್ತದೆ.

ಬಿಪಿ ಸಮಸ್ಯೆ ನಿಯಂತ್ರಿಸಲು ಹಣ್ಣಿನ ಜ್ಯೂಸ್

ವೈದ್ಯರೇ ಹೇಳುವ ಹಾಗೆ, ನಮ್ಮ ದೇಹ ಯಾವುದೇ ಕಾರಣಕ್ಕೂ ನಿರ್ಜಲೀಕರಣ ಸಮಸ್ಯೆಗೆ ಒಳಗಾಗಬಾರದು ಎಂದರೆ ಆದಷ್ಟು ನೀರನ್ನು ಕುಡಿಯಬೇಕು ಎಂದು ಸಲಹೆ ನೀಡುತ್ತಾರೆ, ಅದರಲ್ಲಿ ಹಣ್ಣಿನ ರಸಗಳು ಸಹ ಸೇರಿರುತ್ತವೆ ಎಂಬು ದನ್ನು ಮರೆಯಬಾರದು.

ಯಾಕೆಂದ್ರೆ ತಾಜಾ ಹಣ್ಣಿನ ರಸಗಳಲ್ಲಿ, ನಮ್ಮ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಹಾಗೂ ಅನೇಕ ಬಗೆಯ ಕಾಯಿಲೆಗಳ ವಿರುದ್ಧ ಹೋರಾಡುವ ವಿಟಮಿನ್ಸ್‌ಗಳು, ಖನಿಜಾಂಶಗಳು ಅಡಗಿರುವುದರಿಂದ, ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಪರಿಹಾರ ಮಾಡುವ ವಿವಿಧ ಬಗೆಯ ದ್ರವಾಂಶಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ…

ದಾಳಿಂಬೆ ಹಣ್ಣಿನ ಜ್ಯೂಸ್
ಈಗಾಗಲೇ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು, ದಿನಾ ಒಂದು ಲೋಟ ದಾಳಿಂಬೆ ಜ್ಯೂಸ್‌ನ್ನು ಕುಡಿಯುವುದರಿಂದ, ಈ ಕಾಯಿಲೆಯನ್ನು ನಿಯಂತ್ರಿಸಬಹುದು. ಅಧ್ಯಾಯಾನದ ವರದಿ ಕೂಡ,ಈ ವಾಸ್ತವ ಸತ್ಯಾಂ ಶವನ್ನು ಒಪ್ಪಿಕೊಂಡಿದೆ.

ಇದಕ್ಕೆ ಮುಖ್ಯ ಕಾರಣಗಳು ಏನೆಂದ್ರೆ ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ, ಈ ಹಣ್ಣಿನ ಬೀಜಗಳಲ್ಲಿ, ರಕ್ತ ಸಂಚಾರ ವನ್ನು ದೇಹದ ನರನಾಡಿಗಳಿಗೆ, ಯಾವುದೇ ಅಡೆತಡೆಗಳಿಲ್ಲದೆ, ಪೂರೈಸಲು ಅಗತ್ಯವಾಗಿ ಬೇಕಾಗಿರುವ ವಿಟಮಿನ್‌ ಗಳು, ಖನಿಜಾಂಶಗಳು, ಕರಗುವ ನಾರಿನಾಂಶ, ಅದರಲ್ಲೂ ವಿಶೇಷವಾಗಿ ಪೊಟ್ಯಾಷಿಯಂ ಅಂಶಗಳು ಹೇರಳವಾಗಿ ಸಿಗುವುದರಿಂದ, ಈ ಹಣ್ಣಿನ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಕಿತ್ತಳೆ ಹಣ್ಣಿನ ಜ್ಯೂಸ್

ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿಯನ್ನು ಒಳಗೊಂಡಿರುವ, ಸಿಟ್ರಸ್ ಜಾತಿಗೆ ಸೇರಿರುವ, ಈ ಕಿತ್ತಳೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ ಅಲ್ವಾ?ಈ ಹಣ್ಣು ಎಷ್ಟು ಪ್ರಯೋಜನಕಾರಿ ಯೋ, ಅಂತೆಯೇ ಈ ಹಣ್ಣಿನಿಂದ ಮಾಡುವ ಪಾನೀಯ ಕೂಡ ಅಷ್ಟೇ ಪ್ರಯೋಜನಕಾರಿ, ವಿಶೇಷವಾಗಿ ರಕ್ತದೊತ್ತಡದ ಸಮಸ್ಯೆ ಯನ್ನು ನೈಸರ್ಗಿಕವಾಗಿ ನಿಯಂತ್ರಿಸಲು ತುಂಬಾನೇ ಸಹಕಾರಿ..ಅಷ್ಟೇ ಅಲ್ಲದೇ ಹೃದಯಕ್ಕೆ ಸಂಬಂಧಪಟ್ಟ ಹಲವಾರು ಆರೋಗ್ಯ ಸಮಸ್ಯೆಗಳನ್ನು ಕೂಡ ದೂರ ಮಾಡುವಲ್ಲಿ ನೆರವಾ ಗುತ್ತದೆ.

ಇನ್ನು ಈ ಹಣ್ಣಿನಲ್ಲಿ ವಿಟಮಿನ್ ಸಿ, ಪೊಟಾಶಿಯಂ ಅಂಶದ ಜೊತೆಗೆ ಫೋಲೆಟ್ ಅಂಶ ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ, ನಿಯಮಿತವಾಗಿ ಈ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅಧಿಕ ರಕ್ತದ ಒತ್ತಡ ನೈಸರ್ಗಿಕವಾಗಿ ನಿಯಂತ್ರಿಸಲು ಸಹಕಾರಿಯಾಗಲಿದೆ.

ಕ್ರ್ಯಾನ್‌ಬೆರಿ ಹಣ್ಣಿನ ಪಾನೀಯ

ಕ್ರ್ಯಾನ್‌ಬೆರಿ ಹಣ್ಣುಗಳಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳು ಹಾಗೂ ವಿಟಮಿನ್ ಸಿ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಯಾರೆಲ್ಲಾ ಈಗಾಲೇ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಬಳಲುತ್ತಿದ್ದಾರೋ, ಅಂತಹವರು, ಪ್ರತಿದಿನ ದಿನಕ್ಕೊಂದು ಲೋಟ ಈ ಹಣ್ಣಿನ ಪಾನೀಯ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಬೀಟ್ರೂಟ್ ಜ್ಯೂಸ್

ಸಾಮಾನ್ಯವಾಗಿ ಕತ್ತರಿಸುವಾಗ ಕೆಂಪಗೆ ಕಾಣುವ ಈ ಬೀಟ್ರೂಟ್‌ನ್ನು ಹೆಚ್ಚಿನವರ ಇಷ್ಟಪಡುವು ದಿಲ್ಲ! ಆದ್ರೆ ನೆನಪಿರಲಿ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಈ ತರಕಾರಿ ರಕ್ತದ ಒತ್ತಡಕ್ಕೆ ಸುಲಭವಾದ ಪರಿಹಾರವನ್ನು ಒದಗಿಸುತ್ತದೆ ಎಂದರೆ ನೀವು ನಂಬಲೇ ಬೇಕು!

ವಿಶೇಷವಾಗಿ ತನ್ನಲ್ಲಿ ನೈಸರ್ಗಿಕವಾದ ಸಿಹಿ ಅಂಶವನ್ನು ಹೊಂದಿರುವ ಈ ತರಕಾರಿಯನ್ನು, ಪ್ರತಿದಿನ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡಿ ಸಾಧಾರಣ ಮಟ್ಟಕ್ಕೆ ತಲುಪುವಂತೆ ಮಾಡು ತ್ತದೆ. ನೆನಪಿಡಿ ಈ ತರಕಾರಿಯ ಜ್ಯೂಸ್ ಮಾಡಿ ಕುಡಿಯುವಾಗ ಅದಕ್ಕೆ ಸಕ್ಕರೆಯನ್ನು ಮಿಶ್ರಣ ಮಾಡ ಬಾರದು. ಏಕೆಂದರೆ ಅದು ತನ್ನಲ್ಲಿ ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡಿರುತ್ತದೆ.

ಅನಾನಸ್ ಹಣ್ಣಿನ ಜ್ಯೂಸ್

ಹುಳಿ ಸಿಹಿ ಮಿಶ್ರಿತ ಈ ಅನಾನಸ್ ಹಣ್ಣಿನಲ್ಲಿ ಸೋಡಿಯಂ ಹಾಗೂ ಪೊಟ್ಯಾಷಿಯಂ ಅಂಶದ ಪ್ರಮಾಣ ಹೇರಳ ವಾಗಿ ಕಂಡು ಬರುವುದರಿಂದ, ದೇಹದ ರಕ್ತದ ಒತ್ತಡವನ್ನು ಕಡಿಮೆ ಮಾಡಿ ಸಾಧಾರಣ ಮಟ್ಟಕ್ಕೆ ತಲುಪುವಂತೆ ಮಾಡಲು ಹೆಚ್ಚು ಸಹಾಯಕವಾಗುತ್ತದೆ. ಹೀಗಾಗಿ ಹೀಗಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದವರು ಆಗಾಗ ಅನಾನಸ್ ಹಣ್ಣಿನ ಜ್ಯೂಸ್ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.