ಕಾಳು ಜೀರಿಗೆ ಎಂತಾ ಶಕ್ತಿ ಇದೆ ಗೊತ್ತಾ ಇದ್ರಲ್ಲಿ? ಎಂತದ್ದೇ ನಂಜು ಅಲರ್ಜಿ ಸೋಂಕು ಇದ್ರೂ ದೂರ ಮಾಡತ್ತೇ!

ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವ ಜೀರಿಗೆ,ಕಪ್ಪು ಜೀರಿಗೆ ಹಾಗು ಇನ್ನೊಂದು ಕಾಳು ಜೀರಿಗೆ. ಇನ್ನು ಕಾಳು ಜೀರಿಗೆ ಅನ್ನು ಅನೇಕ ರೀತಿಯಲ್ಲಿ ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದೂ ಹೇಳಬಹುದು. ಮುಖ್ಯವಾಗು ನಂಜು ನಿವಾರಕ ಎಂದೂ ಹೇಳಬಹುದು. ಇದರಿಂದ ಸ್ವಲ್ಪ ಸಿಂಪಲ್ ಆಗಿ ಇರುವ ಕಷಾಯವನ್ನು ತಿಳಿಸಿಕೊಡುತ್ತೇನೆ.

ಮೊದಲು ಒಂದು ಚಮಚ ಕಾಳು ಜೀರಿಗೆ ಹಾಕಿ ಫ್ರೈ ಮಾಡಬೇಕು. ನಂತರ ಇದಕ್ಕೆ ಒಂದು ಲೋಟ ನೀರು ಹಾಕಬೇಕು. ಇದನ್ನು ಅರ್ಧಕ್ಕೆ ಬರುವಷ್ಟು ಚೆನ್ನಾಗಿ ಕುದಿಸಿ ನಂತರ ಶೋದಿಸಿಕೊಳ್ಳಬೇಕು. ಇದನ್ನು ಒಂದು ಅಥವಾ ಎರಡು ಗುಟುಕು ಕುಡಿದರೆ ಸಾಕಾಗುತ್ತದೆ.

ಇದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಸಹಾಯ ಆಗುತ್ತದೆ. ದೇಹದಲ್ಲಿ ಇರುವ ಟ್ಯಾಕ್ಸಿನ್ಸ್ ಅನ್ನು ಹೊರಗೆ ಹಾಕುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಅಥವಾ ನಂಜು ಏನಾದರು ಇದ್ದರೆ ಹಾಗು ದೇಹದಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕುವುದಕ್ಕೆ ಸಹಾಯ ಮಾಡುತ್ತದೆ ಹಾಗು ಜೀರ್ಣಕ್ಕೆ ಕೂಡ ತುಂಬಾ ಒಳ್ಳೆಯದು.

ಕೆಲವೊಮ್ಮೆ ಆಹಾರದಲ್ಲಿ ವ್ಯತ್ಯಾಸ ಆದಾಗ ಆಜೀರ್ಣ ಆಗುತ್ತದೆ. ಈ ಸಮಸ್ಸೆ ದೂರ ಇಡುವುದಕ್ಕೆ ಕಾಳು ಜೀರಿಗೆ ಕಷಾಯ ಮಾಡಿ ಕುಡಿಬೇಕು. ವಾರದಲ್ಲಿ ಒಮ್ಮೆ ಅಥವಾ ತಿಂಗಳಲ್ಲಿ ಒಂದೆರಡು ಸರಿ ಕುಡಿದ್ರೆ ಸಾಕಾಗುತ್ತದೆ.

ಇನ್ನು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರೇಲ್ ಅನ್ನು ಕಡಿಮೆ ಮಾಡುವುದಕ್ಕೆ ಕೂಡ ಸಹಾಯ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟ್ರೇಲ್ ಪ್ರಮಾಣ ಕಡಿಮೆ ಆಗುವುದರಿಂದ ನಮ್ಮ ಹೃದಯದ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ನಂಜು, ಅಲರ್ಜಿ, ಹುಳು ಕಡ್ಡಿಗೂ ಇದು ಬೆಸ್ಟ್ ಮನೆಮದ್ದು ಎಂದೂ ಹೇಳಬಹುದು. ಈ ಕಷಾಯವನ್ನು ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊಡಬಹುದು.

Related Post

Leave a Comment