ಈ ಪೂಜೆ ಮಾಡುವುದರಿಂದ ಉದ್ಯೋಗ ಲಭಿಸುತ್ತದೆ!

0 3,311

ಉದ್ಯೋಗ ಪಡೆಯುವುದು ಎಲ್ಲರ ಕನಸು, ಪಡೆಯುವ ಉದ್ಯೋಗ ಮನಸ್ಸಿಗೆ ಇಷ್ಟವಾಗುವಂತದಾಗಿರ ಬೇಕೆಂದು ಎಲ್ಲರೂ ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಈ ಸರಳ ಸಲಹೆಗಳನ್ನು ಪಾಲಿಸಿದಲ್ಲಿ ಮನಸ್ಸಿಗೆ ಇಷ್ಟವಾಗುವ ಉದ್ಯೋಗ ಸಿಗುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ.

ಕೆಲವರಿಗೆ ಡ್ರೀಮ್ ಜಾಬ್ ಎಂಬುದು ಇರುತ್ತದೆ. ಕೆಲಸಕ್ಕೆ ಸೇರಿದರೇ ಅಲ್ಲೇ ಸೇರಬೇಕು ಎಂಬ ಹಂಬಲ ಕೆಲವರಿಗಾದರೆ ಮತ್ತೆ ಕೆಲವರಿಗೆ ಜೀವನದಲ್ಲಿ ಒಮ್ಮೆಯಾದರೂ ಇಂಥ ಕೆಲಸವನ್ನು ಇಂಥ ಕಂಪನಿಯಲ್ಲಿ ಮಾಡಬೇಕು ಎಂಬ ಕನಸು ಇರುತ್ತದೆ. ಹೀಗೆ ಒಬ್ಬೊಬ್ಬರಿಗೆ ತಮ್ಮ ಉದ್ಯೋಗದ ಬಗ್ಗೆ ಒಂದೊಂದು ರೀತಿಯ ಆಸೆ ಆಕಾಂಕ್ಷೆಗಳು ಇರುತ್ತವೆ. ಇದು ಕೆಲವರಿಗೆ ಈಡೇರಿದರೆ ಮತ್ತೆ ಕೆಲವರಿಗೆ ಈಡೇರುವುದಿಲ್ಲ. ಅದರಲ್ಲೂ ಕೆಲವರಿಗೆ ಉತ್ತಮ ಕೆಲಸ ಸಿಗಬೇಕು ಎಂಬ ಆಸೆ ಇರುತ್ತದೆ. ಆದರೆ ಅದು ಸಾಧ್ಯವಾಗಿರುವುದಿಲ್ಲ. ಇದಕ್ಕಾಗಿ ವರ್ಷಗಟ್ಟಲೇ ಕಾಯುವವರಿದ್ದಾರೆ. 

ಮನಸ್ಸಿಗೆ ಇಷ್ಟ ಆಗದೇ ಇದ್ದರೂ ಅದು ಎಂಥ ಸಂಬಳ ಕೊಡುವ ಕೆಲಸವಾದರೂ ಮಾಡಲು ಬಹಳವೇ ಕಷ್ಟವಾಗುತ್ತದೆ. ಅದೇ ಕೆಲಸ ಮನಸ್ಸಿಗೆ ಹಿಡಿಸುವುದಾದರೆ..? ಆತ್ಮತೃಪ್ತಿಯಿಂದ ಮಾಡಿಬಿಡುತ್ತಾರೆ. ಹೀಗಾಗಿ ಒಳ್ಳೇ ಕೆಲಸ ಸಿಗಲು, ಇಷ್ಟಪಟ್ಟ ಕೆಲಸವೇ ಸಿಗಲು, ಇಷ್ಟಪಟ್ಟ ಕಡೆ ಕೆಲಸ ಸಿಗಲು ಕೆಲವರು ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ದೈವಾನುಗ್ರಹಕ್ಕೆ ಪೂಜೆ – ಪುನಸ್ಕಾರಗಳನ್ನು ಮಾಡಿಸುತ್ತಾರೆ. ದಾನಗಳನ್ನು ಸೇರಿದಂತೆ ಇನ್ನೂ ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಇವುಗಳ ಜೊತೆಗೆ ಇನ್ನೊಂದಿಷ್ಟು ಸರಳ ಉಪಾಯಗಳನ್ನು ಅನುಸರಿಸಿದರೆ ನಿಮಗೆ ಇಷ್ಟವಾಗುವ, ನೀವಿಷ್ಟ ಪಡುವ ಜಾಬ್ ನಿಮಗೆ ಸಿಗುತ್ತದೆ. ಅದು ಯಾವುದು..? ಹೇಗೆ ಮಾಡಬೇಕು ಎಂಬುದರ ಬಗ್ಗೆ ನೋಡೋಣ…

ನಿಮ್ಮಿಷ್ಟದ ದೇವರ ಸ್ಮರಿಸಿ
ಕುಲದೇವರು ಇಲ್ಲವೇ ಇಷ್ಟದೇವರ ಅನುಗ್ರಹ ಬಹಳ ಮುಖ್ಯವಾಗುತ್ತದೆ. ಹೀಗೆ ನಿಮ್ಮಿಷ್ಟದ ದೇವರನ್ನು ಪೂಜೆ ಮಾಡುವುದರಿಂದ, ಆರಾಧನೆ ಮಾಡುವುದರಿಂದ ಕೆಲಸ ಸಿಗುವುದಲ್ಲದೆ, ಮಾಡುವ ಕೆಲಸದಲ್ಲಿ ಯಶಸ್ಸು ಸಹ ಲಭ್ಯವಾಗುತ್ತದೆ. ಇದರ ಜೊತೆಗೆ ದೇವರ ಮುಂದೆ 11 ಊದುಬತ್ತಿ ಮತ್ತು ದೀಪ ಬೆಳಗುವುದರಿಂದ  ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಮನೆಯಿಂದ ಹೊಸ ಕಾರ್ಯಕ್ಕೆ ಇಲ್ಲವೇ ಕೆಲಸಕ್ಕೆ ಹೊರಡುವ ಮುನ್ನ ಎಡಗಾಲನ್ನು ಇಟ್ಟು ಹೊರಗೆ ದಾಟಬೇಕು. ಜೊತೆಗೆ ಸಿಹಿ ಇಲ್ಲವೇ ಮೊಸರು –ಸಕ್ಕರೆಯನ್ನು ತಿಂದರೆ ಆ ಕೆಲಸದಲ್ಲಿ ಯಶಸ್ಸು ಸಿಗುವುದು ಖಚಿತ. 

ಹನುಮಾನ್ ಚಾಲೀಸಾ ಪಠಿಸಿ–ನೌಕರಿ ಸಿಗದಿದ್ದರೆ, ಕೆಲಸದ ಸ್ಥಳದಲ್ಲಿ ತೊಂದರೆ – ತಾಪತ್ರಯಗಳಾಗುತ್ತಿದ್ದರೆ ಹನುಮಂತ ಹಾರುತ್ತಿರುವ ಭಂಗಿಯುಳ್ಳ ಫೋಟೋವನ್ನು ಮನೆಯಲ್ಲಿ ಇಡಬೇಕು. ಆಂಜನೇಯನನ್ನು ದಿನನಿತ್ಯ ಪೂಜೆ ಮಾಡಬೇಕು ಹಾಗೂ  ಪ್ರತಿ ಮಂಗಳವಾರ ಹನುಮಂತನಿಗೆ ಸಂಬಂಧಿಸಿದ ಸ್ತ್ರೋತ್ರಗಳ ಪಠಣೆ ಮಾಡಬೇಕು. ಹನುಮಾನ್ ಚಾಲೀಸಾವನ್ನು ಪಠಣೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ.

ಮೊದಲ ಸೋಮವಾರ ಹೀಗೆ ಮಾಡಿ–ಮನಸ್ಸಿಗೆ ಇಷ್ಟ ಆಗುವ ಕೆಲಸ ಸಿಗಬೇಕೆಂದರೆ ತಿಂಗಳ ಮೊದಲ ಸೋಮವಾರದ ದಿನ ಬಿಳಿ ಬಣ್ಣದ ಬಟ್ಟೆಯಲ್ಲಿ ಕಪ್ಪು ಅಕ್ಕಿಯನ್ನು ಹಾಕಿ ಅದನ್ನು ಕಾಳಿ ದೇವಸ್ಥಾನಕ್ಕೆ ಒಯ್ಯಬೇಕು. ಅಲ್ಲಿ ಕಾಳಿ ದೇವಿಯ ಪಾದಗಳ ಮೇಲೆ ಇವುಗಳನ್ನು ಇಟ್ಟು ಬೇಡಿಕೊಂಡರೆ, ಕೆಲಸದಲ್ಲಿ ಆಗುವ ತೊಡಕುಗಳು ನಿವಾರಣೆ ಆಗುತ್ತವೆ. ಇನ್ನು ಪ್ರತಿದಿನ ಬೆಳಗ್ಗೆ ಪಕ್ಷಿಗಳಿಗೆ ಏಳು ವಿಧದ ಧಾನ್ಯಗಳನ್ನು ನೀಡಿದರೆ ಕೆಲಸ ಬೇಗ ಸಿಗಲಿದೆ. ಪ್ರತಿ ಸೋಮವಾರ ಶಿವಲಿಂಗಕ್ಕೆ ಜಲ ಹಾಗೂ ಅಕ್ಷತೆ ಅರ್ಪಿಸಿದರೆ ಇಷ್ಟಾರ್ಥ ನೆರವೇರುತ್ತದೆ. 

ಈ ಮಂತ್ರವ ಪಠಿಸಿ –ಒಂದು ನಿಂಬೆ ಹಣ್ಣಿನಲ್ಲಿ ನಾಲ್ಕು ಲವಂಗವನ್ನು ಇಟ್ಟುಕೊಂಡು 108 ಬಾರಿ “ಓಂ ಶ್ರೀ ಹನುಮತೇ ನಮಃ” ಎಂಬ ಮಂತ್ರ ಜಪಿಸಬೇಕು. ಆ ನಿಂಬೆಹಣ್ಣನ್ನು ಜೊತೆಗೆ ಇಟ್ಟುಕೊಳ್ಳಬೇಕು. ಇದರಿಂದ ಸಮಸ್ಯೆಗಳೆಲ್ಲವೂ ನಿವಾರಣೆ ಆಗುತ್ತದೆ.

Leave A Reply

Your email address will not be published.