ನೆಲ ಒರೆಸುವ ನೀರಿಗೆ ಇದನ್ನು ಹಾಕಿ ಸಾಕು ನೆಲ ಯಾವತ್ತು ಕನ್ನಡಿಯ ತರ ಹೊಳೆಯುತ್ತದೆ!

ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿ ಅನ್ನು ಕೊಡುತ್ತೇವೆ.

1, ಮನೆಯಲ್ಲಿ ನೋಣಗಳು ಹೆಚ್ಚಾಗಿ ಇದ್ದರೆ ನೆಲವನ್ನು ವರೆಸುವಾಗ 1 ಅಥವಾ 2 ಕರ್ಪೂರವನ್ನು ತೆಗೆದುಕೊಂಡು ಜಜ್ಜಿ ಪುಡಿ ಮಾಡಿ ನೆಲ ವರೆಸುವ ನೀರಿಗೆ ಈ ಕರ್ಪೂರ ಪುಡಿ ಹಾಕಿ ವರೆಸಬೇಕು. ಈ ರೀತಿ ಮಾಡಿದರೆ ಮನೆಗೆ ನೋಣ ಬರುವುದಿಲ್ಲ.

2, ನೆಲ ವರೆಸುವ ನೀರಿಗೆ ಕರ್ಪೂರ ಪುಡಿ, ಅಡುಗೆ ಸೋಡಾ, ಉಪ್ಪು, ನಿಂಬೆ ಹಣ್ಣಿನ ರಸ, ಕಂಫರ್ಟ್ ಹಾಕಿ ಮಿಕ್ಸ್ ಮಾಡಿ ನೆಲ ವರೆಸಿದರೆ ನೆಲ ತುಂಬಾ ಚೆನ್ನಾಗಿ ಫಳ ಫಳ ಹೊಳೆಯುತ್ತದೆ. ಇದನ್ನು ವಾರದಲ್ಲಿ ಒಂದು ಬಾರಿ ಬಳಸಿದರೇ ಸಾಕು. ಇನ್ನು ಉಪ್ಪು ಮನೆಯಲ್ಲಿ ಇರುವ ನೆಗಟಿವ್ ಎನರ್ಜಿ ಅನ್ನು ಹೊರಗೆ ಹಾಕುತ್ತದೆ.

3,ಮನೆಯಲ್ಲಿ ಹೆಚ್ಚಾಗಿ ಇರುವೆ ಇದ್ದರೆ ಅರಿಶಿನ ಅಥವಾ ಕರ್ಪೂರ ಪುಡಿ ಹಾಕಿದರೆ ಇರುವೆಗಳು ಬರುವುದಿಲ್ಲ.

4, ಇನ್ನು ರಂಗೋಲಿ ಹಾಕುವಾಗ ರಂಗೋಲಿಗೆ ಅರಿಶಿಣ ಪುಡಿ ಅಥವಾ ಸುಣ್ಣದ ಪುಡಿಯನ್ನು ಮಿಕ್ಸ್ ಮಾಡಿ ಹಾಕುವುದರಿಂದ ಕ್ರಿಮಿ ಕಿಟಗಳು ನಿಮ್ಮ ಮನೆಗೆ ಬರುವುದಿಲ್ಲ.

Related Post

Leave a Comment