ನಿಮ್ಮ ಅಂಗೈಯಲ್ಲಿ M ಗುರುತು ಇದ್ದರೆ ಈ 3 ತಪ್ಪುಗಳನ್ನು ಮಾಡಬೇಡಿ!

ಜ್ಯೋತಿಷ್ಯದ ಪ್ರಕಾರ ನಮ್ಮ ಕೈಯಲ್ಲಿ ಇರುವ ಕೆಲ ರೇಖೆಗಳು ಮುಂದೆ ಬರುವ ಕೆಲ ಸೂಚನೆಗಳನ್ನು ನೀಡುತ್ತದೆಯಂತೆ.
ಅಂದ ಹಾಗೆ ಗರ್ಭಾವಸ್ಥೆಯಲ್ಲಿ ಮಗುವಿನ ಕೈಯಲ್ಲಿ ಗೆರೆಗಳು ರೂಪುಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.ಇದರಲ್ಲಿ ಹುಟ್ಟಿನಿಂದ ಮರಣದವರೆಗಿನ ವಿವರಣೆ ಕೊಡಲಾಗುತ್ತದೆಯಂತೆ ಮತ್ತು ಇದನ್ನು ಹಸ್ತಸಾಮುದ್ರಿಕಾ ಎಂದು ಹೇಳಲಾಗುತ್ತದೆ.ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ರೇಖೆಗಳಲ್ಲಿ 16ನೇ ವಯಸ್ಸಿನ ನಂತರ ಬದಲಾವಣೆ ಕಂಡುಬರುತ್ತದೆ ಹಾಗೂ ಈ ರೇಖೆಗಳ ಪರಿಣಾಮ ಜೀವನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಕೈಯನ್ನು ವಿಶ್ಲೇಷಿಸುವ ಮೊದಲು ಕೈಯ ವಿನ್ಯಾಸವನ್ನು ನೋಡಲಾಗುತ್ತದೆ.ಹಸ್ತ ಸಾಮುದ್ರಿಕೆ ನೋಡುವಾಗ ಸಾಮಾನ್ಯವಾಗಿ ಪುರುಷರ ಬಲ ಗೈ ಹಾಗೂ ಮಹಿಳೆಯರ ಎಡಗೈ ನೋಡುತ್ತಾರೆ.ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ಕಡಿಮೆ ಗೆರೆಗಳು , ಸುಂದರವಾದ ಕೈಯನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.ಕೈಯಲ್ಲಿ ಕೆಲ ರೇಖೆಗಳು ಕಂಡುಬರುತ್ತವೆ ಮತ್ತು ಒಂದೊಂದು ರೇಖೆಗೂ ವಿಭಿನ್ನವಾದ ಅರ್ಥವನ್ನು ನೀಡಲಾಗಿದೆ.ಇನ್ನೂ ಕೆಲವು ಜನರ ಹಸ್ತದಲ್ಲಿ M ಆಕೃತಿ ಕಂಡು ಬರುತ್ತದೆ.M ಆಕೃತಿ ಇರುವವರ ಜೀವನ ಹಾಗೂ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದರ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ ಎಂದು ತಿಳಿಯೋಣ ಬನ್ನಿ.

ಸಾಮಾನ್ಯ ವಾಗಿ ಈ ಗುರುತು ಹೊಂದಿರುವ ವ್ಯಕ್ತಿಗಳು ಬೇರೊಬ್ಬರು ಪ್ರಸ್ತಾಪಿಸುವ ಹಾದಿಯಲ್ಲಿ ನಡೆಯಲು ಇಷ್ಟ ಪಡುವುದಿಲ್ಲ ಬದಲಾಗಿ ತಮ್ಮದೇ ಆದ ದಾರಿಯಲ್ಲಿ ಸಾಗುತ್ತಾರೆ ಮತ್ತು ಕಷ್ಟಪಟ್ಟು ದುಡಿಯುತ್ತಾರೆ.ಉತ್ತಮ ಜೀವನ ನಡೆಸಿ ಇತರರಿಗೆ ಮಾದರಿಯಾಗುತ್ತಾರೆ.ಇವರ ಬಳಿ ಸಾಕಷ್ಟು ಹಣವಿದ್ದರೂ ಕೂಡ ಇವರ ಕೈ ಯಲ್ಲಿ ಹಣ ನಿಳ್ಳುವುದಿಲ್ಲ.ಯಾವುದಾದರೂ ಒಂದು ಕಡೆ ಖರ್ಚಾಗುತ್ತಲೇ ಇರುತ್ತದೆ.ಮಾನಸಿಕ ಕಿರಿಕಿರಿ ಇಂದ ದುರ್ಬಲವಾಗಿ ಕಂಡರೂ ಅವರು ತುಂಬಾ ಶಕ್ತಿಶಾಲಿ ಮತ್ತು ಶಕ್ತಿವಂತರು ಆಗಿರುತ್ತಾರೆ.ಈ ರೇಖೆ ಇರುವ ವ್ಯಕ್ತಿಗಳು ಶಾಂತರೂಪಿಗಳಾಗಿರುತ್ತಾರೆ,ಇತರರಿಗೆ ಸಹಾಯ ಮಾಡಲು ಮುಂದಾಗುವ ಇವರು
ಸುಳ್ಳು ಹೇಳಲು ಇಷ್ಟಪಡುವುದಿಲ್ಲ ಮತ್ತು ಸುಳ್ಳು ಹೇಳುವುದನ್ನು ಸಹಿಸುವುದಿಲ್ಲ.ಹಸ್ತದಲ್ಲಿ ಇಂತಹ ಗುರುತು ಇರುವ ವ್ಯಕ್ತಿಗಳು ಪ್ರೀತಿ ಪ್ರೇಮವನ್ನು ಹೆಚ್ಚು ಗೌರವಿಸುತ್ತಾರೆ ಮತ್ತು ಎಲ್ಲರನ್ನು ತ್ವರಿತವಾಗಿ ನಂಬುತ್ತಾರೆ ಹಾಗೂ ಇದರಿಂದ ನಂಬಿದ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇವರನ್ನು ಕಲಾಯುಗ ಕರ್ಣ ಎಂದರೆ ತಪ್ಪಾಗಲಾರದು ಯಾಕೆಂದರೆ ಇವರು ದಾನ ಪ್ರವೃತ್ತಿ ಹೊಂದಿದವರಾಗಿರುತ್ತಾರೆ.
ತಾನು ಮಾಡಿದ ಒಳ್ಳೆಯ ಕೆಲಸಗಳನ್ನು ಇತರರೊಂದಿಗೆ ಹಂಚಿಕೊಂಡು ಹೆಮ್ಮೆ ಪಡುವ ವ್ಯಕ್ತಿ ಇವರಲ್ಲ ಬದಲಾಗಿ ತಮ್ಮ ಕೈಯಲ್ಲಾಗುವಷ್ಟು ಸಹಾಯ ಮಾಡಿ ತಾವು ಏನೂ ಮಾಡೇ ಇಲ್ಲ ಎಂಬುವಂತೆ ನಡೆದುಕೊಳ್ಳುತ್ತಾರೆ ಎಂದು ಹಸ್ತ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಯಾವ 3 ತಪ್ಪುಗಳನ್ನು ಮಾಡಬಾರದು ಎಂದು ನೋಡುವುದಾದರೆ

ಯಾರ ಅಂಗೈನಲ್ಲಿ ಎಂಬ ಗುರುತು ಇರುತ್ತದೆಯೋ ಅಂಥವರು ಸ್ವಲ್ಪ ಸೋಂಬೇರಿಗಳಾಗಿರುತ್ತಾರೆ ಹಾಗೂ ಯಾವುದೇ ಕೆಲಸ ಮಾಡುವಾಗ ಸಫಲತೆ ಕಾಣದಿದ್ದಾಗ ತಕ್ಷಣ ಅರ್ಧಕ್ಕೆ ಆ ಕೆಲಸದಿಂದ ನಿರ್ಗಮಿಸಿ ಬಿಡುತ್ತಾರೆ.ಹೀಗೆ ಮಾಡದೆ ಇವರು ತಮ್ಮ ಪ್ರಯತ್ನವನ್ನು ಸಂಪೂರ್ಣವಾಗಿ ನೀಡಿ ಯಶಸ್ಸು ಗಳಿಸಬೇಕು.ಇವರಿಗೆ ತುಂಬಾ ಕಡಿಮೆ ಸ್ನೇಹಿತರು ಇರುತ್ತಾರೆ ಹಾಗಾಗಿ ಇವರು ಸ್ನೇಹಿತರ ಜತೆ ಬೆರೆಯುವುದು ಬಹಳ ಕಡಿಮೆ.ಇನ್ನೂ ಯಾವುದೇ ಕೆಲಸವನ್ನು ಮಾಡುವಾಗ ಸಮಯ ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ ಯಾಕೆಂದರೆ ಸ್ನೇಹಿತರು ಕಡಿಮೆಯಿರುವ ಕಾರಣ ಇವರು ಒಂಟಿ ಎಂಬ ಭಾವನೆಯಲ್ಲಿರುತ್ತಾರೆ ಹಾಗಾಗಿ ಇವರು ತಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಿ ಕೆಲವು ಸ್ನೇಹಿತರನ್ನು ಗಳಿಸಿಕೊಂಡು ಜೀವನದಲ್ಲಿ ಖುಷಿಯಾಗಿರಬೇಕು.

ಹಣದ ವಿಷಯದಲ್ಲಿ ಹೆಚ್ಚು ಚಿಂತೆ ಪಡುತ್ತಾರೆ,ಆಸ್ತಿ ಅಂತಸ್ತಿನ ವಿಚಾರದಲ್ಲಿ ಹೆಚ್ಚು ಚಿಂತೆಗೀಡಾಗುತ್ತಾರೆ.ಇನ್ನೂ ಹೆಚ್ಚು ಮನಸ್ಸಿನಲ್ಲಿ ಚಿಂತೆ ಮಾಡುತ್ತಾರೆ ಬಹಳ ನಕಾರಾತ್ಮಕ ಚಿಂತನೆಗೆ ಒಳಗಾಗುತ್ತಾರೆ ಹಾಗಾಗಿ ಹೀಗೆ ಮಾಡದೆ ಏಕಾಗ್ರತೆಯಿಂದ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಸದಾ ಸಕಾರಾತ್ಮಕ ಯೋಚನೆ ಮಾಡುತ್ತಾ ಸಕಾರಾತ್ಮಕವಾಗಿ ಬದುಕಬೇಕು.ಈ ಮೇಲೆ ತಿಳಿಸಿರುವ ಅಂಶಗಳು ಕೆಲವರಿಗೆ ಅನ್ವಯವಾಗಬಹುದು ಮತ್ತು ಇನ್ನು ಕೆಲವರಿಗೆ ಅನ್ವಯವಾಗದಿರಬಹುದು ಆದರೆ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಇದನ್ನು ತಿಳಿಸಲಾಗಿದೆ.ಇನ್ನು ನಿಮ್ಮ ಹಸ್ತದಲ್ಲಿ M ಅಕ್ಷರ ಇದೆಯಾ ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Related Post

Leave a Comment