ಲೋಕಸಭಾ ಚುನಾವಣೆಯ ಕಾವು ವೈರಲ್ ಆಯ್ತು ಶ್ರೀರಾಮುಲು ಸಾಧನೆಯ ಹಾಡು!

ಲೋಕಸಭಾ ಚುನಾವಣೆಯ ಕಾವು ದೇಶದೆಲ್ಲೆಡೆ ಬಹಳ ಜೋರಾಗಿದೆ. ವಿವಿಧ ಪಕ್ಷಗಳು ಚುನಾವಣಾ ಕಣಕ್ಕಿಳಿಯುವ ಸ್ಪರ್ಧಿಗಳ ಪಟ್ಟಿಯನ್ನು ಸಹಾ ಬಿಡುಗಡೆ ಮಾಡಿದೆ. ರಾಜ್ಯದಲ್ಲೂಯೂ ಈಗ ಚುನಾವಣೆಯ ಹಿನ್ನೆಲೆಯಲ್ಲಿ ಸಾಕಷ್ಟು ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಸಂದರ್ಭದಲ್ಲಿ ಶ್ರೀರಾಮುಲು (Sri Ramulu) ಅವರು ಮಾಡಿರುವಂತಹ ಜನ ಪರ ಸೇವಾ ಕಾರ್ಯಕ್ರಮಗಳ ಕುರಿತಾಗಿ ಒಂದು ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಶ್ರೀರಾಮುಲು ಅವರು ಒಂದು ಸಾಧಾರಣ ಹಿನ್ನೆಲೆ ಯಿಂದ ಬಂದು ತಮ್ಮ ಪರಿಶ್ರಮ ಮತ್ತು ಸಾಧನೆಯ ಮೂಲಕ ಇಂದು ಒಬ್ಬ ದಕ್ಷ ನಾಯಕನಾಗಿ ಬೆಳೆದಿದ್ದಾರೆ. ರಾಜಕಾರಣದಲ್ಲಿ ಅವರು ಮಾಡುತ್ತಿರುವಂತಹ ಸಾಧನೆ ಅನೇಕರಿಗೆ ಮಾದರಿಯಾಗಿದೆ. ಶ್ರೀರಾಮುಲು ಅವರು ಜನರಿಗಾಗಿ ಮಾಡಿದಂತಹ ಸೇವಾ ಕಾರ್ಯಗಳಿಂದ ಅವರು ಸಾಕಷ್ಟು ಜನಮನ್ನಣೆಯನ್ನು ಗಳಿಸಿದ್ದಾರೆ. ಅವರ ಇಂತಹುದೊಂದು ಸಾಧನೆಯನ್ನು ತಿಳಿಸುವ ಹಾಡೀಗ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಶ್ರೀ ರಾಮುಲು ಅವರು ಕರ್ನಾಟಕದಲ್ಲಿ (Karnataka) ಶಾಸಕರಾಗಿ, ಸಚಿವರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಒಬ್ಬ ನಾಯಕನಾಗಿ ಅವರು ನಾಡಿದಂತಹ ಸಾಧನೆಗಳು ಏನು ಎನ್ನುವುದನ್ನು ಈಗ ಹೊರ ಬಂದಿರುವ ಹಾಡಿನಲ್ಲಿ ತಿಳಿಸಲಾಗಿದೆ. ಈ ಅದ್ಭುತವಾದ ಹಾಡನ್ನು ರಾಜೇಂದ್ರ ಅವರು ಬರೆದಿದ್ದು ಇದಕ್ಕೆ ರವಿ ಕಲ್ಯಾಣ ಅವರು ಇದಕ್ಕೆ ರಾಗ ಸಂಯೋಜನೆ ಮಾಡಿದ್ದು, ಗಾಯಕ ನಲಗೊಂಡ ಗದ್ದರ್ ಅವರ ಕಂಠ ಸಿರಿಯಲ್ಲಿ ಹಾಡು ಮೂಡಿ ಬಂದಿದೆ.

ಈ ಬಾರಿ ಲೋಕಸಭಾ ಚುನಾವಣೆಗೆ ಶ್ರೀರಾಮುಲು ಅವರು ಬಳ್ಳಾರಿಯಿಂದ ಸ್ಪರ್ಧಿಸುತ್ತಿದ್ದು, ಈಗ ಅವರನ್ನು ಕುರಿತಾಗಿ ಬಿಡುಗಡೆ ಆಗಿರುವ ಹಾಡನ್ನು ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ತಮ್ಮ ನಾಯಕನು ಜನರಿಗಾಗಿ ಮಾಡಿರುವ ಕಾರ್ಯಗಳ ಕುರಿತಾಗಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಾಯಕನು ಗೆದ್ದು ಬರಬೇಕೆಂದು ಶುಭ ಹಾರೈಸುತ್ತಿದ್ದಾರೆ.‌

Related Post

Leave a Comment