ಕಟಕ ರಾಶಿಯವರ ಯಾವ ರುದ್ರಾಕ್ಷಿಯನ್ನು ಧರಿಸಿದರೆ ಒಳ್ಳೆಯದು!

ರುದ್ರಾಕ್ಷಿ ಧಾರಣೆಯಿಂದ ಬುದ್ಧಿ ಶಕ್ತಿಗಳ ಜೊತೆಗೆ ಧನ ಪ್ರಾಪ್ತಿಯಾಗುತ್ತದೆ ಹಾಗು ನಮ್ಮ ಕ್ರಾಂತಿ ಪ್ರಭೆಯನ್ನು ಸಹ ಶುದ್ಧಿಕರಿಸುತ್ತದೆ.ಇದರಿಂದ ನಮ್ಮ ಮನಸ್ಥೈರ್ಯವು ಹೆಚ್ಚಾಗಿ ನಮ್ಮ ಇಷ್ಟರ್ಥ ನೆರವೇರುವುದು ಎಂದು ಜ್ಯೋತಿಷ್ಯ ತಜ್ಞರ ಅಭಿಪ್ರಾಯ. ರುದ್ರಾಕ್ಷಿ ಧಾರಣೆಯಿಂದ ಪ್ರತಿಯೊಬ್ಬರೂ ಒಂದೊಂದು ದೇಹಕ್ಕಾಗಿ ಒಂದೊಂದು ಪರಿಹಾರವಾಗಿ ಒಂದೊಂದು ಸಮಸ್ಸೆಗೆ ಅನುಗುಣವಾಗಿ ಧರಿಸುತ್ತಾರೆ ಹಾಗು ರಾಶಿಗಳ ಅನುಗುಣವಾಗಿ ರುದ್ರಾಕ್ಷಿಯನ್ನು ಧರಿಸುತ್ತಾರೆ.

ರುದ್ರಾಕ್ಷಿ ಧಾರಣೆಯಿಂದ ಅನೇಕ ಅರೋಗ್ಯ ಸಮಸ್ಸೆಗಳು ದೂರವಾಗುತ್ತದೆ ಎಂದು ಅವರ ನಂಬಿಕೆ. ಇನ್ನು ಕಟಕ ರಾಶಿಯವರು ಹೆಚ್ಚು ಬಾವನ ಜೀವಿಗಳು ಆಗಿರುತ್ತಾರೆ. ಇವರು ಅತೀ ಕೋಮಲ ಸ್ವಭಾವರಾಗಿದ್ದು ಶಾಂತಚಿತ್ತಾರಾಗಿರುತ್ತಾರೆ. ಕಲೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಇವರ ಗುಣ ಆಗಿರುತ್ತದೆ. ಇವರ ಸ್ವಭಾವದಿಂದ ಯಾರಾದರೂ ಜಾಡಿಗಳು ಹೇಳಿದರೆ ಅವು ನಿಜವೆಂದು ಬೇಗನೇ ನಂಬುತ್ತಾರೆ. ಈ ರೀತಿ ಸ್ವಭಾವದಿಂದ ಅನೇಕ ಕಷ್ಟಗಳಿಗೆ ಗುರಿ ಆಗುತ್ತಾರೆ.

ಇನ್ನು ಕಟಕ ರಾಶಿಯವರು ಬೇರೆಯವರಿಗೆ ಸ್ಪದಿಸುವರು ಅದರೆ ಇವರ ಸಾಂಸರಿಕ ಜೀವನ ಅಷ್ಟೇನು ಸುಖಕರವಲ್ಲ ಹಾಗು ಅರೋಗ್ಯದಲ್ಲು ಸಹ ಹೆಚ್ಚು ಏರುಪೇರುಗಳು ಆಗುತ್ತವೆ. ಹಾಗಾಗಿ ಈ ರಾಶಿಯವರು ಎರಡು ಮುಖದ ರುದ್ರಾಕ್ಷಿ ಧರಿಸುವುದು ಉತ್ತಮ. ಈ ರುದ್ರಾಕ್ಷಿಯನ್ನು ಸಾಕ್ಷಾತ್ ಅರ್ಧನಾರೇಶ್ವರ ಸ್ವರೂಪ ಎಂದು ಹೇಳಲಾಗಿದೆ. ಈ ರುದ್ರಾಕ್ಷಿ ಧರಿಸಿದರೆ ರಾಜಕೀಯದಲ್ಲಿ ಇರುವವರಿಗೆ ಉತ್ತಮ ಫಲಗಳು ಸಿಗಲಿವೆ. ಇದರಿಂದ ನಿದ್ರಾಹಿನತೆ ಅರೋಗ್ಯ ಸಮಸ್ಸೆಗಳು ದೂರವಾಗುವುದು.

Related Post

Leave a Comment