ಒಣಗಿದ ತುಳಸಿ ಗಿಡವನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ನಂತರ ಕಡ್ಡಿಗಳನ್ನು ಪುಡಿ ಮಾಡಿಕೊಳ್ಳಿ. ನಂತರ ಜಾಲರಿ ಸಹಾಯದಿಂದ ಶೋದಿಸಿಕೊಳ್ಳಿ. ಇನ್ನು ತುಳಸಿ ಪುಡಿ ದೊಡ್ಡ ದಂಟ್ಟನ್ನು ಎರಡು ಚಮಚ ತೆಗೆದುಕೊಳ್ಳಿ. ಇದಕ್ಕೆ ಒಣಗಿದ ಗುಲಾಬಿ ಹೂವು, ಇನ್ನು ಮಿಕ್ಸಿಗೆ 5-6 ಏಲಕ್ಕಿ ಲವಂಗ, ಚಕ್ಕೆ,10-15 ಲವಂಗ,2 ಚಮಚ ಸೋಂಪು ಕಾಳನ್ನು ಪುಡಿ ಮಾಡಿ ಹಾಕಬೇಕು.
ನಂತರ ಟೀ ಮಾಡುವುದಕ್ಕೆ ಇಡಬೇಕು.ಟೀ ಕುಡಿಯುವಾಗ ಮಿಕ್ಸ್ ಮಾಡಿರುವ ತುಳಸಿ ಪುಡಿಯನ್ನು ಹಾಕಿ ಟೀ ಮಾಡಿ ಕುಡಿಯಿರಿ. ಇದನ್ನು ಕುಡಿದರೆ ನಿಮಗೆ ತುಂಬಾ ರುಚಿಯಾಗಿ ಇರುತ್ತದೆ ಹಾಗು ಒಳ್ಳೆಯ ಎನರ್ಜಿ ಕೂಡ ಬರುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇನ್ನು ಕೆಲವರಿಗೆ ಕೆಮ್ಮು ಶೀತ ಆಗುತ್ತಿರುತ್ತದೆ. ಇದಕ್ಕೆ 5-6 ಮೆಣಸಿನಕಾಳು ಹಾಕಬೇಕು ಮತ್ತು ಒಣ ಶುಂಠಿ ಪುಡಿ ಹಾಕು ಮಿಕ್ಸ್ ಪುಡಿ ಮಾಡಿಕೊಳ್ಳಿ. ನಂತರ ಒಂದು ಲೋಟ ನೀರನ್ನು ಸ್ಟವ್ ಮೇಲೆ ಕುದಿಸುತ್ತ ಇದ್ದೀನಿ. ಇದಕ್ಕೆ ಈ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ತುಳಸಿ ಪುಡಿಯನ್ನು ಹಾಕಿ ಕುದಿಸಿ. ಇದಕ್ಕೆ ನೀವು ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿಕೊಳ್ಳಬಹುದು. ಯಾವುದೇ ಗಂಟಲು ಕೆರೆತ, ತಂಡಿ ಶೀತ ನೆಗಡಿ ಆಗುತ್ತಿದ್ದರೆ ಇದು ತುಂಬಾ ಒಳ್ಳೆಯದು. ನಂತರ ಇದನ್ನು ಫಿಲ್ಟರ್ ಮಾಡಿಕೊಂಡು ಕುಡಿಯಿರಿ.
ಇನ್ನು ಮುಖದಲ್ಲಿ ಭಂಗು ಹಾಗು ಕಪ್ಪು ಕಲೆ ಸಮಸ್ಸೆ ಇದ್ದರೆ ಒಂದು ಬೌಲ್ ನಲ್ಲಿ ಒಂದು ಚಮಚ ಕಡಲೆ ಹಿಟ್ಟು ಮತ್ತು ಇದಕ್ಕೆ 1 ಚಮಚ ತುಳಸಿ ಪುಡಿ ಹಾಗು ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಇದನ್ನು ಡೈಲಿ ಮುಖಕ್ಕೆ ಹಚ್ಚಿದರೆ ಮುಖ ಎಷ್ಟೇ ಕಪ್ಪಾಗಿದ್ದರು ಕಲೆ ಆಗಿದ್ದರು ಸಹ ನಿವಾರಣೆ ಆಗುತ್ತದೆ.