ನಿಮ್ಮ ಅಗೈಯಲ್ಲಿ ತ್ರಿಶೂಲದ ಚಿಹ್ನೆ ಇದ್ದಾರೆ ನೀವು ಅದೃಷ್ಟವಂತರು!

ನಮ್ಮ ಭವಿಷ್ಯ ನಮ್ಮ ಕೈಲಿದೆ ಎನ್ನುವ ಮಾತು ಎಷ್ಟು ನಿಜವೇ ಅಥವಾ ಸುಳ್ಳೇ, ಅದು ತರ್ಕಕ್ಕೆ ನಿಲುಕದ್ದು! ಆದರೆ ಕುಂಡಲಿಯಲ್ಲಿ ಹೇಗೆ ಗ್ರಹಗತಿಗಳ ಸಂಚಾರ ಇರುತ್ತದೆಯೋ ಹಾಗೆಯೇ ನಮ್ಮ ಅಂಗೈಯಲ್ಲಿ ಗ್ರಹಗಳ ಪರ್ವತ ಇರುತ್ತದೆ. ಅದರ ಮೇಲಿರುವ ಚಿಹ್ನೆಗಳು ವಿಭಿನ್ನವಾಗಿರುತ್ತವೆ. ಅವು ನಮ್ಮ ಭವಿಷ್ಯ ಹಾಗೂ ಅದೃಷ್ಟವನ್ನು ನಿರ್ಧರಿಸುತ್ತವೆ. ಹಸ್ತ ಶಾಸ್ತ್ರದ ಪ್ರಕಾರ ಅಂಗೈಯಲ್ಲಿರುವ ಪ್ರತಿಯೊಂದು ರೇಖೆಯು ವಿಶೇಷ ವಿಚಾರವನ್ನು ಬಿಚ್ಚಿಡುತ್ತದೆ.

ಅಂಗೈಯಲ್ಲಿ ಇರುವ ವಿಶೇಷ ರೇಖೆಯಲ್ಲಿ ತ್ರಿಶೂಲದ ರೇಖೆಯು ಒಂದು. ಅಂಗೈಯಲ್ಲಿರುವ ಕೆಲವು ಪ್ರಮುಖ ಸ್ಥಳಗಳಲ್ಲಿ ತ್ರಿಶೂಲವು ಒಂದೊಂದು ವಿಶೇಷ ಸಂಕೇತವನ್ನು ಪ್ರತಿಬಿಂಬಿಸುತ್ತದೆ. ತ್ರಿಶೂಲದ ಸಂಕೇತವು ನಿಮ್ಮ ಕೈಯಲ್ಲಿ ಅಥವಾ ನಿಮ್ಮ ಹತ್ತಿರದವರ ಕೈಯಲ್ಲಿ ಈ ಚಿಹ್ನೆ ಇದೆಯೇ ಎಂದು ನೋಡಿ… ಹಾಗೂ ಅದರ ಪರಿಣಾಮ ಏನು ಎನ್ನುವುದನ್ನು ಪರಿಶೀಲಿಸಿ…

ಶುಕ್ರ ಪರ್ವತದಲ್ಲಿ ತ್ರಿಶೂಲ

ಶುಕ್ರ ಪರ್ವತದಲ್ಲಿ ತ್ರಿಶೂಲದ ಚಿಹ್ನೆ ಕಂಡುಬಂದರೆ ವ್ಯಕ್ತಿಯ ಜೀವನದಲ್ಲಿ ಪ್ರೀತಿ ಮತ್ತು ಅದೃಷ್ಟದ ಸಂಕೇತವಾಗಿರುತ್ತದೆ. ಇವರು ಇತರ ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಹೆಚ್ಚು ಸಕಾರಾತ್ಮಕ ವಿಚಾರದ ಬಗ್ಗೆ ಹೆಚ್ಚು ಯೋಚಿಸುತ್ತಾರೆ.

ಮಂಗಳ ಪರ್ವತದ ಮೇಲೆ ತ್ರಿಶೂಲ

ಮಂಗಳ ಪರ್ವತದ ಮೇಲೆ ತ್ರಿಶೂಲ ಚಿಹ್ನೆಯನ್ನು ಹೊಂದಿದ್ದರೆ ವ್ಯಕ್ತಿ ಹೆಚ್ಚು ಸಂಪತ್ತನ್ನು ಗಳಿಸುತ್ತಾನೆ ಎನ್ನುವುದನ್ನು ಸೂಚಿಸುತ್ತದೆ. ಮಂಗಳದ ಮೇಲ್ಭಾಗದ ಆರೋಹಣದಲ್ಲಿ ತ್ರಿಶೂಲ ಕಂಡುಬಂದರೆ, ವ್ಯಕ್ತಿಯು ಕ್ರೀಡಾಪಟು ಅಥವಾ ಪೊಲೀಸ್ ಅಧಿಕಾರಿಗಳ ವ್ಯಕ್ತಿತ್ವವನ್ನು ಹೊಂದಿರುತ್ತದೆ.

ಚಂದ್ರನ ಬೆಟ್ಟಕ್ಕೆ ಹೋದರೆ

ಈ ಮೇಲೆ ಚಿತ್ರದಲ್ಲಿ ತೋರಿಸದ ಹಾಗೆ ತ್ರಿಶೂಲದ ಚಿಹ್ನೆಯು ಚಂದ್ರನ ಬೆಟ್ಟಕ್ಕೆ ಹೋದರೆ ವ್ಯಕ್ತಿಯು ವೃತ್ತಿ ಜೀವನದಲ್ಲಿ ಬಹಳ ಯಶಸ್ಸನ್ನು ಗಳಿಸುತ್ತಾನೆ ಎಂದು ಸೂಚಿಸುತ್ತದೆ. ಅಲ್ಲದೆ ವ್ಯಕ್ತಿಯು ಉತ್ತಮ ವ್ಯವಹಾರ ಹಾಗೂ ಸಂವಹನ ಕೌಶಲ್ಯವನ್ನು ಹೊಂದಿದ್ದಾನೆ ಎಂದು ಸೂಚಿಸುತ್ತದೆ.

ಚಂದ್ರನ ಪರ್ವತದಲ್ಲಿ ತ್ರಿಶೂಲ

ಚಂದ್ರನ ಪರ್ವತದಲ್ಲಿರುವ ತ್ರಿಶೂಲವು ವ್ಯಕ್ತಿಯ ಕಲ್ಪನೆ ಮತ್ತು ಸೃಜನ ಶೀಲತೆಯ ಚಿಂತನೆಯನ್ನು ಬಲಪಡಿಸುತ್ತದೆ. ಈ ವ್ಯಕ್ತಿಗಳು ಹೆಚ್ಚು ಪ್ರಣಯಾತ್ಮಕ ವರ್ತನೆಯನ್ನು ಹೊಂದಿರುತ್ತಾರೆ.

ಹೃದಯ ರೇಖೆಯ ಬಳಿ ತ್ರಿಶೂಲ

ಹೃದಯ ರೇಖೆಯ ಬಳಿ ತ್ರಿಶೂಳದ ಚಿಹ್ನೆಯಿದ್ದರೆ ಬಹಳ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ಗುರುವಿನ ಪರ್ವತದ ಕೆಳಗೆ ಕೊನೆಗೊಂಡಿದ್ದರೆ ವ್ಯಕ್ತಿಯು ಭಾವನಾತ್ಮಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಸ್ಥಿರತೆಯನ್ನು ಹೊಂದಿರುತ್ತಾರೆ. ಅತ್ಯಂತ ಶ್ರೀಮಂತರ ಕೈಯಲ್ಲಿ ಈ ಚಿಹ್ನೆ ಇರುತ್ತದೆ ಎಂದು ಹೇಳಲಾಗುತ್ತದೆ.

ಅದೃಷ್ಟ ರೇಖೆಯ ಕೊನೆಯಲ್ಲಿ ತ್ರಿಶೂಲ

ಅದೃಷ್ಟ ರೇಖೆಯ ಕೊನೆಯಲ್ಲಿ ತ್ರಿಶೂಲವಿದ್ದರೆ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಹಾಗೂ ಶ್ರೀಮಂತ ವ್ಯಕ್ತಿಯಾಗುತ್ತಾನೆ. ತ್ರಿಶೂಲವು ಶನಿಯ ಪರ್ವತದಲ್ಲಿ ಕೊನೆಗೊಂಡರೆ ಆಸ್ತಿ ವ್ಯವಹಾರಗಳ ಮೂಲಕ ಸಂಪತ್ತನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗುವುದು.

ಬುಧ ಪರ್ವತದ ಮೇಲೆ ತ್ರಿಶೂಲ

ಬುಧ ಪರ್ವತದ ಮೇಲೆ ತ್ರಿಶೂಲವಿದ್ದರೆ ಅದು ವ್ಯಕ್ತಿಯನ್ನು ಶ್ರೀಮಂತಗೊಳಿಸುತ್ತದೆ. ಕೆಲಸದ ಆರಂಭದಲ್ಲೇ ಹೆಚ್ಚಳ, ಜವಾಬ್ದಾರಿಯುತ ಕೆಲಸ ದೊರೆಯುತ್ತದೆ. ಸಂವಹನ ಕೌಶಲ್ಯ ಹೆಚ್ಚಿರುತ್ತದೆ. ಅಲ್ಲದೆ ಇವರು ದೊಡ್ಡ ಸಮೂಹದ ಜನರ ಗಮನ ಸೆಳೆಯುತ್ತಾರೆ. ಒಟ್ಟಿನಲ್ಲಿ ಇವರು ಉತ್ತಮ ಭಾಷಣಕಾರರು ಹಾಗೂ ಆಕರ್ಷಕ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ.

ಗುರು ಪರ್ವತದ ಮೇಲೆ ತ್ರಿಶೂಲ

ಗುರು ಪರ್ವತದ ಮೇಲೆ ತ್ರಿಶೂಲವಿದ್ದರೆ ಯಶಸ್ಸು, ಮನ್ನಣೆಯನ್ನು ಪಡೆಯುವಂತಹ ಸಂಕೇತವಾಗಿರುತ್ತದೆ. ಮಹತ್ವಕಾಂಕ್ಷಿಯಾಗಿರುವ ವ್ಯಕ್ತಿತ್ವ ಈ ವ್ಯಕ್ತಿಗಳದ್ದಾಗಿರುತ್ತದೆ.

ಇವರು ತಮ್ಮ ಸುತ್ತಲಿನ ಜನರನ್ನು ಮುನ್ನಡೆಸಲು ಸಹಾಯ ಮಾಡುತ್ತಾರೆ. ಈ ಲಕ್ಷಣ ಸಾಮಾನ್ಯವಾಗಿ ನಾಯಕನ ಲಕ್ಷಣವನ್ನು ತೋರುತ್ತದೆ.

ಶನಿಯ ಬೆಟ್ಟದ ಮೇಲೆ ತ್ರಿಶೂಲ

ಶನಿ ಗ್ರಹದ ಪರ್ವತದ ಮೇಲೆ ತ್ರಿಶೂಲವಿದ್ದರೆ ಅದು ಬುದ್ಧಿವಂತಿಕೆ ಹಾಗೂ ಭೌತಿಕ ಸಂಪತ್ತಿನ ಸಂಕೇತವಾಗಿರುತ್ತದೆ. ಈ ಸ್ಥಾನದಲ್ಲಿ ತ್ರಿಶೂಲ ಹೊಂದಿದವರು ವೃತ್ತಿ ಜೀವನದಲ್ಲಿ ಬಹಳ ಕಷ್ಟ ಪಟ್ಟು ಯಶಸ್ಸು ಸಾಧಿಸಿ ಶ್ರೀಮಂತರಾಗುತ್ತಾರೆ ಎನ್ನಲಾಗುವುದು.

ಸೂರ್ಯ ಪರ್ವತದ ಮೇಲೆ ತ್ರಿಶೂಲ

ಸೂರ್ಯ ಪರ್ವತದ ಮೇಲೆ ತ್ರಿಶೂಲ ಇರುವುದು ನಕ್ಷತ್ರ ರಚನೆಯ ಸಂಕೇತ. ಈ ಸಂಕೇತ ಹೊಂದಿದವರು ಪ್ರಸಿದ್ಧಿ, ಶ್ರೀಮಂತಿಕೆ, ಬುದ್ಧಿವಂತಿಕೆ ಹಾಗೂ ಉತ್ತಮ ವೃತ್ತಿ ಜೀವನವನ್ನು ಹೊಂದಿರುತ್ತಾರೆ ಎನ್ನಲಾಗುವುದು.

ಯಾವ ಕೈಯ ಹಸ್ತವನ್ನು ಗಮನಿಸಬೇಕು?

ಹಸ್ತಸಾಮುದ್ರಿಕೆಯಲ್ಲಿ ಇದು ಅತಿ ಹೆಚ್ಚು ಕೇಳಲಾಗುವ ಸಾಮಾನ್ಯ ಪ್ರಶ್ನೆ. ಇದಕ್ಕೆ ಉತ್ತರ: ಎರಡೂ! ಆದರೆ ಸಾಮಾನ್ಯವಾಗಿ ಎದುರಿನ ವ್ಯಕ್ತಿ ತನ್ನ ಪ್ರಾಥಮಿಕ ಅವಶ್ಯಕತೆಗಳಿಗೆ ಮೊದಲಾಗಿ ಯಾವ ಕೈಯನ್ನು ಬಳಸುತ್ತಾನೋ ಆ ಕೈಯನ್ನೇ ಪರಿಗಣಿಸಲಾಗುತ್ತದೆ. ಉದಾಹರಣೆಗೆ ಬಲಗೈ ಅಭ್ಯಾಸದ ವ್ಯಕ್ತಿಗಳ ಬಲ ಹಸ್ತವನ್ನೂ, ಎಡಗೈ ಅಭ್ಯಾಸವುಳ್ಳವರ ಎಡಹಸ್ತವನ್ನೂ ನೋಡಲಾಗುತ್ತದೆ.

ಆದರೆ ಅಭ್ಯಾಸಬಲದ ಹಸ್ತವೇ ಏಕೆ?

ಏಕೆಂದರೆ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಇಂದು ಬೆಳೆದುಬರಲು ಈ ಕೈಗಳನ್ನುಉಪಯೋಗಿಸಬೇಕಾಗಿದ್ದು ಆ ಪ್ರಕಾರವೇ ಹಸ್ತದ ಆಕಾರ ರೂಪುಗೊಂಡಿರುತ್ತದೆ. ಈ ಆಕಾರ ಅಭ್ಯಾಸವಿಲ್ಲದ ಇನ್ನೊಂದು ಹಸ್ತದಲ್ಲಿ ಇರಲು ಸಾಧ್ಯವಿಲ್ಲ.

ಹಸ್ತದ ಗಾತ್ರ ಏನನ್ನು ಸೂಚಿಸುತ್ತದೆ?

ಮೊದಲಾಗಿ ಹಸ್ತದ ಗಾತ್ರವನ್ನು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಹಸ್ತದ ಗಾತ್ರ ದೊಡ್ಡದಿದ್ದರೆ ಈ ವ್ಯಕ್ತಿ ತನಗೆ ವಹಿಸಲಾದ ಕೆಲಸದ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಾನೆಯೇ ಹೊರತು ಈ ಕಾರ್ಯ ಸಾಧನೆಗೆ ಅಗತ್ಯವಾದ ಕೆಲಸವನ್ನು ಕಡಿಮೆ ಮಾಡುತ್ತಾನೆ ಎಂದು ತಿಳಿದುಕೊಳ್ಳಬಹುದು. ಆದರೆ ಹಸ್ತದ ಹೋಲಿಕೆಯಲ್ಲಿ ಚಿಕ್ಕ ಗಾತ್ರ ಹೊಂದಿರುವ ಹಸ್ತದ ವ್ಯಕ್ತಿಗಳು ತಮ್ಮ ಕರ್ತವ್ಯಗಳನ್ನು ಚ್ಯುತಿಗೆ ಅವಕಾಶ ಮಾಡಗೊಡದೇ ಪೂರೈಸುವವರೂ ಈ ಬಗ್ಗೆ ಚಿಂತಿಸುವಲ್ಲಿ ಕಡಿಮೆ ಸಮಯ

ಹಸ್ತದ ಆಕಾರ ಏನನ್ನು ಸೂಚಿಸುತ್ತದೆ?

ಹಸ್ತಸಾಮುದ್ರಿಕೆಯ ಪ್ರಕಾರ ಒಟ್ಟು ನಾಲ್ಕು ಪ್ರಕಾರದ ಹಸ್ತಗಳಿವೆ. ಇವು ನಾಲ್ಕು ಮೂಲಭೂತ ಅಂಶಗಳನ್ನು ಪ್ರತಿನಿಧಿಸುತ್ತವೆ. ಇವೆಂದರೆ: ವಾಯು, ಭೂಮಿ, ಅಗ್ನಿ ಮತ್ತು ಜಲ.

Related Post

Leave a Comment