ಅಶ್ವಗಂಧ ಬಳಸೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗತ್ತೆ ಗೊತ್ತೇ!

ಅಶ್ವಗಂಧ ಬೇರುವಿನಿಂದ ಶರೀರದ ದಾತುಗಳ ಬೆಳವಣಿಗೆ ಆಗುತ್ತದೆ ಮತ್ತು ಬಲಿಷ್ಠ ಆಗುತ್ತದೆ.ಅದರ ಎಲೆಯನ್ನು ನೀವು ಸೇವನೆ ಮಾಡುವುದರಿಂದ ಲೇಖನ ಆಗುತ್ತದೆ.ಅಂದರೆ ಅಶ್ವಗಂಧ ಎಲೆಯ ಕಷಾಯವನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ.ಅದ್ಭುತವಾದ ಮನೆಮದ್ದು ಎಂದು ಹೇಳಬಹುದು. ಬೆರಿನಿಂದ ತೂಕ ಹೆಚ್ಚಿಗೆ ಆಗುತ್ತದೆ. ಎಲೆಯಿಂದ ತೂಕ ಕಡಿಮೆ ಆಗುತ್ತದೆ.ಈ ರೀತಿ ಬೇರೆ ಬೇರೆ ವಿಭಿನ್ನ ವಿಶಿಷ್ಟತೆಯನ್ನು ಹೊಂದಿದೆ.

ಮೊದಲು ಒಂದು ಇಡೀ ಅಶ್ವಗಂಧ ಎಲೆ ತೆಗೆದುಕೊಳ್ಳಿ ಒಂದು ಲೀಟರ್ ನೀರಿಗೆ ಹಾಕಿ ಕುದಿಸಿ.ಇದನ್ನು ಬೆಳಗ್ಗೆ ಒಂದು ಗ್ಲಾಸ್ ಸಂಜೆ ಒಂದು ಗ್ಲಾಸ್ ಕುಡಿದರೆ ಒಂದು ತಿಂಗಳಿಗೆ ಕನಿಷ್ಠ ಪಕ್ಷ 3 ರಿಂದ 6 ಕೆಜಿ ತೂಕ ಕಡಿಮೆ ಆಗುತ್ತದೆ.ಇದರ ಜೊತೆಗೆ ಆಹಾರ ಪತ್ಯೆ ಮಾಡಬೇಕು. ಚಹಾ ಕಾಫಿ ಆಲೂಗಡ್ಡೆ ಬದನೇಕಾಯಿ ಮಾಂಸಹಾರ ಬೇಕರಿ ಪದಾರ್ಥ, ಹಸಿ ಮೆಣಸಿನಕಾಯಿ ಸೇವನೆಯನ್ನು ನಿಲ್ಲಿಸಬೇಕು.ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಸೇವನೆ ಮಾಡಬೇಕು.ಇದನೆಲ್ಲ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ. ಒಂದು ವೇಳೆ ದೇಹದ ತೂಕ ಕಡಿಮೆ ಆಗದೆ ಇದ್ದಾರೆ ಪಂಚಾಕರ್ಮ ಚಿಕಿತ್ಸೆ ತೆಗೆದುಕೊಳ್ಳಬೇಕು.

ಇನ್ನು ಆಯುರ್ವೇದದಲ್ಲಿ ಉತ್ತಮ ಪರಿಹಾರವೆಂದರೆ .ಅಶ್ವಗಂಧ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡಿಕೊಂಡು ಒಂದು ಡಬ್ಬದಲ್ಲಿ ಶೇಖರಣೆ ಮಾಡಿ.ಪ್ರತಿದಿನ ಎರಡು ಬಾರಿ ಉಗುರು ಬೆಚ್ಚಗೆ ಇರುವ ಹಾಲಿಗೆ ಒಂದು ಚಮಚ ಪುಡಿಯನ್ನು ಹಾಕಿಕೊಂಡು ಕುಡಿಯುವುದರಿಂದ 2-3 ತಿಂಗಳಲ್ಲಿ ನಿಮ್ಮ ನರಗಳು ಬಲಗೊಳ್ಳುತ್ತವೆ.

ಇನ್ನು ಮಧುಮೇಹದಿಂದ ಬಳಲುತ್ತಿರುವವರು ಕಲ್ಲು ಸಕ್ಕರೆ ಹಾಕುವ ಬದಲು ಹಳೆಯ ಬೆಲ್ಲವನ್ನು ಮಿಶ್ರಣ ಮಾಡಿಕೊಂಡು ಅಶ್ವಗಂಧವನ್ನು ಸೇವಿಸಬಹುದು. ಇನ್ನು ಈ ನರಗಳ ಬಲಹೀನತೆ ಇರುವವರು ತಪ್ಪದೇ ಪ್ರತಿದಿನ ಹಾಲನ್ನು ಸೇವಿಸಬೇಕು. ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ನರಗಳ ದೌರ್ಬಲ್ಯತೆ ಕಡಿಮೆ ಆಗುತ್ತದೆ.ಇನ್ನು ನರ ದೌರ್ಬಲ್ಯತೆ ಇರುವವರು ಪ್ರತಿದಿನ ಉಗುರು ಬೆಚ್ಚಗೆ ಇರುವ ನೀರಿಗೆ ಸ್ವಲ್ಪ ನಿಂಬೆ ರಸ, ಸ್ವಲ್ಪ ಅರಿಶಿಣ, ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿದಿನ ಕುಡಿಯುವುದರಿಂದ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ.

Related Post

Leave a Comment