ಚಿಟಿಕೆ ಅರಿಶಿಣ ದೊಡ್ಡ ರೋಗಗಳು ನಿಮ್ಮ ಹತ್ತಿರನು ಸುಳಿಯಲ್ಲ!

ಸೌಂದರ್ಯ ವರ್ಧಕವಾಗಿ, ಆರೋಗ್ಯಕ್ಕಾಗಿ ಸಾಕಷ್ಟು ಪ್ರಯೋಜನಗಳನ್ನು ನೀಡುವ ಮೂಲಿಕೆ ಅರಿಶಿನ ಅನಾದಿ ಕಾಲದಿಂದಲೂ ಬಳಕೆಯಲ್ಲಿದೆ. ಆಯುರ್ವೇದದ ಪ್ರಕಾರ ಯಾವೆಲ್ಲಾ ಉಪಯೋಗಗಳಿವೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಸರಿಸುಮಾರು 4 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮಸಾಲೆ ಪದಾರ್ಥ ಅರಿಶಿನ . ಆಯುರ್ವೇದದಲ್ಲಿ ಉತ್ಕೃಷ್ಟ ಸ್ಥಾನ ಪಡೆದಿರುವ ಈ ಅರಿಶಿನ ದೇವರ ಪೂಜೆಯಲ್ಲೂ ಬಳಕೆಯಾಗುತ್ತದೆ. ಆರೋಗ್ಯಕ್ಕಂತೂ ಲೆಕ್ಕಿಸದಷ್ಟು ಪ್ರಯೋಜನಗಳನ್ನು ನೀಡುತ್ತದೆ.

ರೋಗ ನಿರೋಧಕ ಗುಣ, ಕರ್ಕ್ಯುಮ್‌, ನಂಜು ನಿರೋಧಕ ಗುಣ ಹೊಂದಿದೆ. ಆಯುರ್ವೇದದ ಪ್ರಕಾರ ಅರಿಶಿನ ಪುಡಿ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್‌ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

ಅರಿಶಿನ–ಚಿನ್ನದ ಬಣ್ಣವನ್ನು ಹೋಲುವ ಅರಿಶಿಣ ಪುಡಿಯನ್ನು  ಆಯುರ್ವೇದದಲ್ಲಿ ಹರಿದ್ರಾ ಎನ್ನುತ್ತಾರೆ. ಇದು ಕಹಿ ಮತ್ತು ತುಸು ಖಾರದ ಗುಣವನ್ನು ಹೊಂದಿದೆ. ಸುಲಭವಾಗಿ ಜೀರ್ಣವಾಗುವ ಆಹಾರ ಹಾಗೂ ಇದು ಉಷ್ಣ ಗುಣವನ್ನು ಹೊಂದಿದೆ.ವಾತ, ಕಫದಂತಹ ಅಂಶಗಳನ್ನು ಸಮತೋಲನದಲ್ಲಿರುತ್ತದೆ. ಅರಿಶಿನ ಪುಡಿಗಿಂತ ಅರಿಶಿನದ ಬೇರು ಹೆಚ್ಚು ಆರೋಗ್ಯಕ್ಕೆ ಒಳ್ಳೆಯದು.

​ಮಧುಮೇಹ, ಮೂಲವ್ಯಾಧಿಗೆ ಮದ್ದು–ಅರಿಶಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಾಯಕವಾಗಿದೆ. ಅದರಲ್ಲಿ ಮುಖ್ಯವಾಗಿ ಮಧುಮೇಹಿಗಳಿಗೆ ಹಾಗೂ ಮೂಲವ್ಯಾಧಿ ಇರುವವರಿಗೆ ಅರಿಶಿನ ರಾಮಬಾಣದಂತೆ ಕೆಲಸ ಮಾಡುತ್ತದೆ.

ಕಾಲು ಚಮಚ ಅರಿಶಿನ, ಒಂದು ಚಮಚ ತ್ರಿಫಲ ಪೌಡರ್‌ ಸೇರಿಸಿ ಅದನ್ನು ಬಿಸಿ ನೀರಿಗೆ ಹಾಕಿ ರಾತ್ರಿ ಮಲಗುವ ಮುನ್ನ ಸೇವನೆ ಮಾಡಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದ್ದು, ಮೂಲವ್ಯಾಧಿ ಸಮಸ್ಯೆಯೂ ನಿವಾರಣೆಯಾಗುತ್ತದೆ.

​ಕೆಮ್ಮು , ನೆಗಡಿ ಸಮಸ್ಯೆ ಇದ್ದರೆ--ಸೋಂಕು ನಿವಾರಕವಾಗಿರುವ ಅರಿಶಿನ ಕೆಮ್ಮು, ನೆಗಡಿಗೆ ಉತ್ತಮ ಮನೆಮದ್ದಾಗಿದೆ. ಅರಿಶಿನವನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ದಮ್ಮು ಅಥವಾ ಉಸಿರಾಟದ ಸಮಸ್ಯೆಯನ್ನೂ ನಿವಾರಣೆ ಮಾಡಬಹುದಾಗಿದೆ.

ಹೀಗೆ ಮಾಡಿ–1/4 ಚಮಚ ಅರಿಶಿನಕ್ಕೆ ತುಸು ಜೇನುತುಪ್ಪ ಸೇರಿಸಿ ಬೆಳಗ್ಗೆ ಮತ್ತು ರಾತ್ರಿ ಸೇವನೆ ಮಾಡಬೇಕು. ಅಥವಾ ಜೇನುತುಪ್ಪದ ಬದಲು, ಅರಿಶಿನವನ್ನು ಬಿಸಿ ನೀರಿಗೆ ಸೇರಿಸಿ ಸೇವನೆ ಮಾಡಬಹುದು. ಗಂಟಲಿಗೆ ಹಾಕಿ ಗಾರ್ಗಲ್‌ ಮಾಡುವುದರಿಂದಲೂ ಕೆಮ್ಮು, ನೆಗಡಿಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಚರ್ಮದ ಸಮಸ್ಯೆಗಳಿಗೆ–ಅರಿಶಿನದಲ್ಲಿನ ಆಂಟಿ ಆಕ್ಸಿಡೆಂಟ್‌ಗಳು ಚರ್ಮದ ರಕ್ಷಣೆಯನ್ನು ಮಾಡುತ್ತದೆ. ಅದೂ ಅಲ್ಲದೆ ಪ್ರತಿದಿನ ಅರಿಶಿನವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಅನಗತ್ಯ ಕೂದಲನ್ನು ಕ್ರಮೇಣವಾಗಿ ನಿವಾರಣೆ ಮಾಡಬಹುದಾಗಿದೆ. ಸನ್‌ ಟ್ಯಾನ್‌, ಚರ್ಮದ ಕಾಯಿಲೆಗಳನ್ನು ನಿವಾರಣೆ ಮಾಡಲು ಇದು ಸಹಾಯಕವಾಗಿದೆ.

ಹೀಗೆ ಮಾಡಿ-ಅರಿಶಿನ ಪುಡಿಗೆ ರೋಸ್‌ ವಾಟರ್‌ ಸೇರಿಸಿ ಗಾಯ, ಕಲೆಯ ಮೇಲೆ ಹಚ್ಚಬಹುದು
ಚರ್ಮವನ್ನು ಕಾಂತಿಯುತಗೊಳಿಸಲು ಅರಿಶಿನ ಬೆಸ್ಟ್‌ ಮದ್ದಾಗಿದೆ. ಅದಕ್ಕಾಗಿ ನೀವು 2 ಚಮಚ ಅರಿಶಿನ, 2 ಚಮಚ ಲಿಂಬೆರಸ, ರೋಸ್‌ ವಾಟರ್‌, ಕಡಲೆಹಿಟ್ಟು ಸೇರಿಸಿ ಚೆನ್ನಾಗಿ ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಟ್ಯಾನ್‌ ಆದ ಜಾಗಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.

​ಮಲಬದ್ಧತೆಗೆ–ಕೆಲವೊಮ್ಮೆ ಆಹಾರ ಸರಿಯಾಗಿ ಜೀರ್ಣವಾಗದೆ ಮಲಬದ್ಧತೆ ಉಂಟಾಗುತ್ತದೆ. ಇದನ್ನು ಸರಿಪಡಿಸಲು ಅರಿಶಿನ ಉತ್ತಮ ಮದ್ದಾಗಿದೆ. ಅದಕ್ಕಾಗಿ ನೀವು ಅರಿಶಿನವನ್ನು ತುಪ್ಪದೊಂದಿಗೆ ಸೇವನೆ ಮಾಡಬಹುದು.ನೀರಿನೊಂದಿಗೆ ಅರಿಶಿನವನ್ನು ಬೆರೆಸಿ ಸೇವನೆ ಮಾಡಿದರೂ ಕೂಡ ಮಲಬದ್ಧತೆ ಸಮಸ್ಯೆ ಸರಿಯಾಗುತ್ತದೆ.

​​ರೋಗ ನಿರೋಧಕ ಶಕ್ತಿಗೆ ಅರಿಶಿನ ಹಾಲು–ಹಾಲಿನ ಸೇವನೆ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನುವವರು ಗೋಲ್ಡನ್‌ಮಿಲ್ಕ್‌ ಅಥವಾ ಅರಿಶಿನದ ಹಾಲನ್ನು ತಯಾರಿಸಿ ಸೇವನೆ ಮಾಡಬಹುದ.

ಅದಕ್ಕಾಗಿ ಒಂದು ಲೋಟ ಹಾಲಿಗೆ ಅರ್ಧ ಚಮಚ ಅರಿಶಿನವನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಅಲ್ಲದೆ ಈ ಪಾನೀಯದಿಂದ ಹೃದಯದ ಆರೋಗ್ಯಕ್ಕೆ, ಲಿವರ್‌ಗೆ ಒಳ್ಳೆಯದು. ಹಾಲಿನ ಬದಲಿಗೆ ಬಿಸಿನೀರಿಗೂ ಅರಿಶಿನವನ್ನು ಸೇರಿಸಿ ಸೇವನೆ ಮಾಡಬಹುದು.

ಕ್ಯಾನ್ಸರ್‌ಗೆ ಒಳ್ಳೆಯದು–ಅರಿಶಿಣದ  ಕರ್ಕ್ಯುಮ್‌ ಅಂಶವು ಕ್ಯಾನ್ಸರ್‌ ಕಾರಕ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಲ್ಲದೆ ಕ್ಯಾನ್ಸರ್‌ ಬರದಂತೆ ಕೂಡ ತಡೆಯಬಹುದಾಗಿದೆ.

ಒಟ್ಟಿನಲ್ಲಿ ಆರೋಗ್ಯಕ್ಕೆ ಭರಪೂರ ಕೊಡುಗೆಯನ್ನು ಅರಿಶಿನ ನೀಡುತ್ತದೆ. ಹೀಗಾಗಿ ಅಡುಗೆಯಲ್ಲಿ ದಿನನಿತ್ಯ ಅರಿಶಿನವನ್ನು ಬಳಕೆ ಮಾಡುವುದನ್ನು ಮರೆಯದಿರಿ.

Related Post

Leave a Comment