ಹುಣಸೆ ಬೀಜವನ್ನು ತೆಗೆದು ಕಸಕ್ಕೆ ಎಸೆಯಬೇಡಿ ಇದು ನಿಜವಾಗಿಯೂ ಬಹಳ ಉಪಯೋಗಕ್ಕೆ ಬರುತ್ತೆ!

ಸಾಮಾನ್ಯವಾಗಿ ಮಾಡುವ ಅಡುಗೆಗೆ ಉಪ್ಪು ಹುಳಿ ಕಾರ ತುಂಬಾನೇ ಮುಖ್ಯವಾಗಿರುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ವ್ಯತ್ಯಾಸ ಆದರೂ ಕೂಡ ಆ ಅಡುಗೆ ರುಚಿನೇ ಹಾಳಾಗುತ್ತದೆ. ಅದರಲ್ಲೂ ದಕ್ಷಿಣ ಭಾರತೀಯರು ಹುಣಸೆ ಹಣ್ಣು ಇಲ್ಲದೆ ಯಾವುದೇ ಅಡುಗೆಯನ್ನು ಮಾಡುವುದಿಲ್ಲ.ಇನ್ನು ಹುಣಸೆ ಹಣ್ಣು ಬಳಸಿ ಹುಣಸೆ ಬೀಜವನ್ನು ಎಸೆದು ಬಿಡುತ್ತಾರೆ. ಆದರೆ ಇನ್ನು ಮುಂದೆ ಈ ತಪ್ಪನ್ನು ಮಾಡಬೇಡಿ ಏಕೆಂದರೆ ಇದರಲ್ಲಿ ಉತ್ತಮವಾದ ಪೋಷಕಾಂಶಗಳನ್ನು ಒಳಗೊಂಡಿದೆ.

ಸಾಮಾನ್ಯವಾಗಿ ಯಾವುದೇ ತರಕಾರಿಗಳಲ್ಲಿ ಅದರ ಬೀಜದಲ್ಲಿ ಅಧಿಕ ಪೋಷಕಾಂಶವಿರುತ್ತದೆ. ಗ್ರಾಮೀಣ ಜನರಿಗೆ ಹುಣಸೆಹಣ್ಣಿನ ಬೀಜದ ಮಹತ್ವದ ಬಗ್ಗೆ ತಿಳಿದಿದೆ. ಇದನ್ನು ಉರಿದುಕೊಂಡು ಸೇವನೆ ಮಾಡುವ ಅಭ್ಯಾಸವನ್ನು ರೂಡಿಯಲ್ಲಿ ಇಟ್ಟುಕೊಂಡಿದ್ದಾರೆ. ಹುಣಸೆ ಬೀಜದಲ್ಲಿ ಮೆಗ್ನೀಷಿಯಂ ಪೊಟ್ಯಾಶಿಯಂ ವಿಟಮಿನ್ ಸಿ ಕ್ಯಾಲ್ಸಿಯಂ ಅಮೈನೋ ಆಮ್ಲವಿದೆ. ಹುಣಸೆ ಬೀಜವನ್ನು ಸೇವನೆ ಮಾಡುವುದರಿಂದ ಕೀಲು ನೋವಿನ ಸಮಸ್ಸೆ ಸಂಧಿವಾತ ಸಮಸ್ಸೆ ಇರುವವರಿಗೆ ಇದು ತುಂಬಾನೇ ಒಳ್ಳೆಯದು.

ಇನ್ನು ಉರಿದ ಹುಣಸೆ ಬೀಜದ ಪುಡಿಯನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡಿದರೆ ಸಂಧಿವಾತದ ಸಮಸ್ಸೆ ಕೀಲು ನೋವಿನ ಸಮಸ್ಸೆ ಬೇಗನೆ ನಿವಾರಣೆ ಆಗಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹುಣಸೆ ಬೀಜವನ್ನು ಸೇವನೆ ಮಾಡುವುದರಿಂದ ಕರುಳು ಮತ್ತು ಮೂತ್ರಕೋಶಕ್ಕೆ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾದಿಂದ ಇದು ರಕ್ಷಣೆ ಮಾಡುತ್ತದೆ.ಇನ್ನು ಮಧು ಮೆಹಿ ಸಮಸ್ಸೆ ಇರುವವರು ಕೂಡ ಇದನ್ನು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

Related Post

Leave a Comment