ಸ್ತನದ ಗಾತ್ರವನ್ನು ಹೆಚ್ಚಿಸಲು ಮನೆಯಲ್ಲೇ ಮಾಡಿ ಈ ಎಕ್ಸಸೈಜ್!

ಮಹಿಳೆ ಎಂದರೆ ಸೌಂದರ್ಯದ ಗಣಿ ಇದ್ದಂತೆ. ಆಕೆ ತನ್ನ ಮುಖದ ಸೌಂದರ್ಯ ವೃದ್ಧಿಗೆ ನೀಡುವ ಮಹತ್ವವನ್ನೇ ಇಡೀ ದೇಹ ಸೌಂದರ್ಯಕ್ಕೂ ನೀಡುತ್ತಾಳೆ. ಇತ್ತೀಚೆಗಂತೂ ಮಹಿಳೆಯರಲ್ಲಿ ಈ ಕಾಳಜಿ ಇನ್ನು ಹೆಚ್ಚಾಗಿದೆ. ಈ ಕಾಳಜಿ ಸ್ತನವನ್ನೂ ಹೊರತುಪಡಿಸಿಲ್ಲ.

ಮಹಿಳೆಯರ ಸ್ತನದ ಗಾತ್ರ ಅವರ ಜೀವನಶೈಲಿ, ಅನುವಂಶಿಕತೆ ಮತ್ತು ದೇಹದ ಗಾತ್ರವನ್ನು ಅವಲಂಬಿಸಿದೆ. ಸ್ತನದ ಗಾತ್ರ ಸಣ್ಣದಾಗಿದ್ದರೆ ಅಥವಾ ಸ್ತನಗಳ ಗಾತ್ರದಲ್ಲಿ ವ್ಯತ್ಯಾಸವಿದ್ದರೆ ತೀವ್ರ ಮುಜುಗರಕ್ಕೊಳಪಡಬೇಕಾಗಬಹುದು. ಸ್ತನದ ಗಾತ್ರ ಹೆಚ್ಚಾಗಲು ಶೀಘ್ರ ಪರಿಹಾರ ಶಸ್ತ್ರಚಿಕಿತ್ಸೆ, ಆದರೆ ಶಸ್ತ್ರಚಿಕಿತ್ಸೆಯಿಂದಾಗಿ ಕೆಲವು ಬಾರಿ ಗಂಭೀರ ಸಮಸ್ಯೆಗಳೂ ಎದುರಾಗಬಹುದು.

ಇದೀಗ ಮಾರುಕಟ್ಟೆಯಲ್ಲಿ ಸ್ತನದ ಗಾತ್ರ ಹೆಚ್ಚಿಸಲು ಕೆಲವು ಕ್ರೀಮು, ಮಾತ್ರೆಗಳು ಸಹ ಲಭ್ಯವಿದೆ. ಆದರೆ ಈ ಎಲ್ಲಾ ಕೃತಕ ಪ್ರಯತ್ನಗಳನ್ನು ಹೊರತುಪಡಿಸಿ ನೈಸರ್ಗಿಕವಾಗಿ ವ್ಯಾಯಾಮದ ಮೂಲಕವೂ ಸ್ತನದ ಗಾತ್ರವನ್ನು ಹೆಚ್ಚಿಸಿಕೊಳ್ಳಬಹುದು.

ಎಂಥಹ ವ್ಯಾಯಾಮದ ಮೂಲಕ, ಅದನ್ನು ಮಾಡುವ ಬಗೆ ಹೇಗೆ ಎಂಬ ವಿವರವಾದ ಮಾಹಿತಿಯನ್ನು ಈ ಲೇಖನ ನಿಮಗೆ ತಿಳಿಸಿಕೊಡಲಿದೆ.

ಸ್ತನದ ಗಾತ್ರದ ಮೇಲೆ ಪರಿಣಾಮ ಬೀರುವ ಸ್ನಾಯುಗಳು

ಬೆನ್ನಿನ ಭಾಗ, ಭುಜದ ಸ್ನಾಯುಗಳು ಮತ್ತು ಎದೆಯ ಭಾಗದ ಸ್ನಾಯುಗಳು ವ್ಯಾಯಾಮ ಸ್ತನದಲ್ಲಿರುವ ಟಿಶ್ಯುವನ್ನು ಉತ್ತವಾಗಿಸುವಲ್ಲಿ ಪೂರಕವಾಗಿದೆ. ಈ ಮೂಲಕ ಸ್ತನದ ಗಾತ್ರ ಸಹ ಅಭಿವೃದ್ಧಿಯಾಗುತ್ತದೆ.

ಈ ಕೆಳಗಿನ 8 ವ್ಯಾಯಾಮದ ಮೂಲಕ ನಮ್ಮ ಸ್ತನದ ಗಾತ್ರ ಹೆಚ್ಚಿಕೊಳ್ಳಬಹುದು. ಎಚ್ಚರ: ಕೆಳಗೆ ಕೊಟ್ಟಿರುವ ಸೂಚನೆಯಂತೆ ಮಾಡುವುದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.

ಗೋಡೆಯನ್ನು ತಳ್ಳುವುದು

ಎದೆಯ ಭಾಗದ ಸ್ನಾಯುಗಳಿಗೆ ಸಹಾಯವಾಗಲಿರುವ ಈ ತಾಲೀಮನ್ನು ನಿರಂತರವಾಗಿ ಮಾಡುವುದರಿಂದ ಸ್ತನದ ಗಾತ್ರವನ್ನು ಶೀಘ್ರವಾಗಿ, ಪರಿಣಾಮಕಾರಿಯಾಗಿ ಹಿಗ್ಗಿಸಿಕೊಳ್ಳಬಹುದು. ಇದೊಂದು ಸುಲಭದಾಯಕ ವ್ಯಾಯಾಮ ಕ್ರಿಯೆಯಾಗಿದ್ದು, ಇದಕ್ಕೆ ಯಾವುದೇ ಪರಿಕರಗಳ ಅಗತ್ಯವಿಲ್ಲ.

ಮಾಡುವ ವಿಧಾನ

ಗೋಡೆಯ ಮುಂದೆ ನಿಂತು ನಿಮ್ಮ ಮುಂಗೈಯನ್ನು ಎದೆಯ ಸಮಕ್ಕೆ ಗೋಡೆಗೆ ಒತ್ತಿ ಹಿಡಿಯಿರಿ. ಮುಂಗೈಯನ್ನು ಬಲವಾಗಿ ಒತ್ತುತ್ತಾ ಮುಂದಕ್ಕೆ ಗೋಡೆಗೆ ಸಮೀಪವಾಗಿ ಹಾಗೂ ನಿಮ್ಮ ಕೈ ಸಮವಾಗುವವರೆಗೆ ಹಿಂದಕ್ಕೆ ದೇಹವನ್ನು ಚಲಿಸಿ. ಇದನ್ನು 10ರಿಂದ15 ಬಾರಿ ಪುನರಾವರ್ತಿಸಿ ಉತ್ತಮ ಫಲಿತಾಂಶ ನಿಮ್ಮದಾಗಿಸಿಕೊಳ್ಳಿ.

ಕೈಯನ್ನು ವೃತ್ತಾಕಾರದಲ್ಲಿ ತಿರುಗಿಸುವುದು

ಕೈಯನ್ನು ವೃತ್ತಾಕಾರದಲ್ಲಿ ತಿರುಗಿಸುವುದು ಸಹ ಪರಿಣಾಮಕಾರಿ ವ್ಯಾಯಾಮ ಕ್ರಿಯೆಯಾಗಿದೆ. ಇದನ್ನು ಡಂಬಲ್ಸ್ ಅಥವಾ ಭಾರವಾದ ವಸ್ತುವನ್ನು ಹಿಡಿದು ಸಹ ಮಾಡಬಹುದು. ಈ ಕ್ರಿಯೆಯಿಂದ ನಿಮ್ಮ ಭುಜ ಮತ್ತು ಬೆನ್ನಿನ ಸ್ನಾಯುಗಳಿಗೆ ವ್ಯಾಯಾಮವಾಗಿ ಸ್ತನದ ಗಾತ್ರವನ್ನು ಹೆಚ್ಚಿಸುತ್ತದೆ.

ಮಾಡುವ ವಿಧಾನ

ಭುಜದ ಸಮಕ್ಕೆ ಕೈಯನ್ನು ಸಮವಾಗಿ ಹಿಡಿದು ನಿಧಾನವಾಗಿ ಹಿಂದಕ್ಕೆ ವೃತ್ತಾಕಾರದಲ್ಲಿ ಚಲಿಸಿ. ನಂತರ ಇದೇ ರೀತಿ ಮುಂದಕ್ಕೆ ಕೈಯನ್ನು ವೃತ್ತಾಕಾರದಲ್ಲಿ ಚಲಿಸಿ, ಇದನ್ನು ನಿರಂತರ ಒಂದು ನಿಮಿಷ ಮುಂದುವರೆಸಿ. ಮುಂದುವರೆದು ನಿಧಾನವಾಗಿ ಕೈಯನ್ನು ಮೇಲಕ್ಕೆ ಹಾಗೂ ಕೆಳಗೆ ಒಂದು ನಿಮಿಷ ಚಲಿಸಿ, ಇದನ್ನು 2ರಿಂದ 3ಬಾರಿ ಪುನಾರಾವರ್ತಿಸಿ.

ಭುಜದ ವ್ಯಾಯಾಮ

ಈ ಕ್ರಿಯೆಯು ಭುಜ ಹಾಗೂ ಎದೆಯ ಭಾಗಕ್ಕೆ ಅತ್ಯುತ್ತಮ ಕಸರತ್ತಾಗಿದ್ದು, ಸ್ತನದ ಗಾತ್ರವನ್ನು ಶೀಘ್ರ ಹಿಗ್ಗಿಸಿಕೊಳ್ಳಲು ಈ ಕ್ರಿಯೆ ಅತ್ಯುತ್ತಮ ತಾಲೀಮಾಗಿದೆ. ಇದನ್ನು ಸಹ ಭಾರದ ವಸ್ತುವಿನ ಸಹಾಯದಿಂದಲೂ ಮಾಡಬಹುದಾಗಿದೆ.

ಮಾಡುವ ವಿಧಾನ

ಎದೆಯ ಸಮವಾಗಿ ಕೈಯನ್ನು ಪಾರ್ಶ್ವ ದಿಕ್ಕಿಗೆ ನಿಲ್ಲಿಸಿ. ನಂತರ ಎರಡು ಮುಂಗೈಯನ್ನು ಜೋಡಿಸಿ ಮತ್ತೆ ಮೊದಲಿನ ಸ್ಥಿತಿಗೆ ಮರಳಿ. ಈ ವೇಳೆ ಎರಡು ಕಾಲುಗಳು ದೂರವಿರಲಿ. ಕನಿಷ್ಠ ಒಂದು ನಿಮಿಷಗಳ ಕಾಲ ಕ್ರಿಯೆಯನ್ನು ಪುನರಾವರ್ತಿಸಿ.

ಪ್ರಾರ್ಥನಾ ಭಂಗಿ

ಅತ್ಯಂತ ಸರಳ ಹಾಗೂ ಉತ್ತಮ ಫಲಿತಾಂಶ ನೀಡುವ ಕ್ರಿಯೆ ಇದಾಗಿದೆ. ಇದಕ್ಕೆ ಯಾವುದೇ ಸಾಧನಗಳ ಅಗತ್ಯವಿಲ್ಲ.

ಮಾಡುವ ವಿಧಾನ

ಎದೆಯ ಮುಭಾಗ ನಮಸ್ಕಾರದ ರೀತಿ ಕೈ ಜೋಡಿಸಿ ಸಮಭಂಗಿಯಲ್ಲಿ ನಿಲ್ಲಿ. 10ನಿಮಿಷಗಳ ನಂತರ ಸಹಜ ಸ್ಥಿತಿಗೆ ಮರಳಿ. ಇದನ್ನು 15 ಬಾರಿ ಸತತವಾಗಿ ಮುಂದುವರೆಸಿ.

ಎದೆಯ ಭಾಗಕ್ಕೆ ಅಡ್ಡಲಾಗಿ

ಇದು ಪ್ರಾರ್ಥನಾ ಭಂಗಿಯಂತೆಯೇ ಇದ್ದು, ಇಲ್ಲಿ ಕ್ರಿಯೆಯನ್ನು ಮಾಡಬೇಕಿದೆ. ಈ ಕ್ರಿಯೆ ನೇರವಾಗಿ ಎದೆಯ ಸ್ನಾಯುಗಳಿಗೆ ಪರಿಣಾಮ ಬೀರಲಿದ್ದು, ಸ್ತನದ ಗಾತ್ರದ ಮೇಲೆ ಶೀಘ್ರ ಫಲಿಸಲಿದೆ.

ಮಾಡುವ ವಿಧಾನ

ಎದೆಯ ಮುಂದಕ್ಕೆ ಸಮವಾಗಿ ಕೈಯನ್ನು ನಿಲ್ಲಿಸಿ, 90 ಡಿಗ್ರಿ ಪಾರ್ಶ್ವಕ್ಕೆ ಬಗ್ಗಿಸಿ. ನಂತರ ಉದ್ದನಾಗಿ ಕೈಯನ್ನು ಹೊರಚಾಚಿ ಮತ್ತೆ ಜೋಡಿಸಿ. ಕನಿಷ್ಠ ಒಂದು ನಿಮಿಷ ಇದನ್ನೇ ಮುಂದುವರೆಸಿ.

ಕಿಬ್ಬೊಟ್ಟೆಯ ವ್ಯಾಯಾಮ (ಪುಷ್ ಅಪ್)

ನೈಸರ್ಗಿಕವಾಗಿ ಸ್ತನ ಆಕರ್ಷಕವಾಗಿ ಕಾಣುವಂತೆ ಮಾಡುವಲ್ಲಿ ಪುಷ್ ಅಪ್ ಸಾಕಷ್ಟು ನೆರವಾಗಲಿದೆ.

ಮಾಡುವ ವಿಧಾನ

ನೆಲದ ಮೇಲೆ ಮಲಗಿ ನಿಮ್ಮ ಎದೆಯ ಮುಂದೆ ಸಮನಾಗಿ ಮುಂಗೈಯನ್ನು ನೆಲಕ್ಕೆ ಒತ್ತಿ ಇಡಿ. ಕೈ ತೋಳಿನ ಬಲದಿಂದ ಕೈ ಉದ್ದ ಚಾಚುವಷ್ಟು ನಿಧಾನವಾಗಿ ಮೇಲಕ್ಕೆ ಏಳಿ, ಮತ್ತೆ ಮೊದಲಿನ ಭಂಗಿಗೆ ಮರಳಿ. ಆದಷ್ಟು ನಿಧಾನವಾಗಿ ಮಾಡುವುದು ಒಳ್ಳೆಯದು, ಪೂರ್ಣ ಕ್ರಿಯೆಯನ್ನು ಕನಿಷ್ಠ 12 ಬಾರಿ ಪುನರಾವರ್ತಿಸಿ.

ಹಸ್ತ ಒತ್ತುವುದು

ಸ್ತನದ ಗಾತ್ರ ಹಿಗ್ಗಿಸಲು ಹಸ್ತವನ್ನು ಒತ್ತುವುದು ಅತ್ಯಂತ ಸರಳವಾದ ತಾಲೀಮು. ಒತ್ತಡ ನಿವಾರಣೆಗೂ ಸಹ ಈ ಕ್ರಿಯೆ ಸಹಕಾರಿ.

ಮಾಡುವ ವಿಧಾನ

ಎದೆಯ ಮುಂದಕ್ಕೆ ಕೈಯನ್ನು ಸಮವಾಗಿ ಮುಂಗೈ ಅನ್ನು ಬಗ್ಗಿಸಿ ಒಂದು ಕೈಯಿಂದ ಇನ್ನೊಂದು ಮುಂಗೈಯನ್ನು ಮುಂದಕ್ಕೆ ಒತ್ತಡ ಹಾಕಿ ತಳ್ಳಿ. ಇದೇ ಭಂಗಿಯಲ್ಲಿ ಕನಿಷ್ಠ 5-10 ಸೆಕೆಂಡ್ ನಿಲ್ಲಿ. ಪೂರ್ಣ ತಾಲೀಮನ್ನು 5 ಬಾರಿ ಪುನರಾವರ್ತಿಸಿ.

ಎದೆಯ ತಾಲೀಮು

ಸ್ತನಕ್ಕೆ ನೇರ ಪರಿಣಾಮ ಬೀರುವ ಈ ಕ್ರಿಯೆ ದೈಹಿಕ ಕಸರತ್ತನ್ನು ಒಳಗೊಂಡಿದೆ. ಆದ್ದರಿಂದ ಸ್ತನ ಜತೆಗೆ ಕೈ ಕಾಲುಗಳಿಗೂ ಉತ್ತಮ ತಾಲೀಮು ನೀಡುತ್ತದೆ. ಇದಕ್ಕೆ ಮೇಜು ಅಥವಾ ಹಿಡಿಯಲು ಅಗತ್ಯವಾದ ಗೋಡೆಯ ನೆರವು ಬೇಕಿದೆ.

ಮಾಡುವ ವಿಧಾನ

ಮುಂಗೈನಲ್ಲಿ ಮೇಜು ಅಥವಾ ಗೋಡೆಯನ್ನು ಹಿಡಿಯಿರಿ, ನಿಮ್ಮ ಕೈ ಉದ್ದವಾಗಿ ಚಾಚಿಕೊಂಡಿರುವಂತೆ ನೋಡಿಕೊಳ್ಳಿ ಕೈಯನ್ನು ಮೇಲೆತ್ತದೆ ನಿಧಾನವಾಗಿ ಮೇಲೇಳಿ, ಮತ್ತೆ ನಿಧಾನವಾಗಿ ಹಿಂದಿನ ಸ್ಥಿತಿಗೆ ಮರಳಿ. ನಿಮ್ಮ ದೇಹ ಗೋಡೆ ಅಥವಾ ಮೇಜಿಗೆ ಒತ್ತದಂತೆ ನೋಡಿಕೊಳ್ಳಿ. ಪೂರ್ಣ ಕ್ರಿಯೆಯನ್ನು 4-5ಬಾರಿ ಪುನರಾವರ್ತಿಸಿ.

Related Post

Leave a Comment