ಸಕ್ಕರೆ ಕಾಯಿಲೆಗೆ ಬ್ರೋಕಲಿ ಸೇವನೆ ಎಷ್ಟೊಂದು ಒಳ್ಳೆಯದು ಗೊತ್ತೇ?

ಇಂದಿನ ದಿನಗಳಲ್ಲಿ ಮನುಷ್ಯನಿಗೆ ಹೆಚ್ಚು ಭಯಪಡಿಸುವ ಕಾಯಿಲೆಗಳ ಪಟ್ಟಿಯಲ್ಲಿ ಮಧುಮೇಹ ಕೂಡ ಸ್ಥಾನ ಪಡೆದುಕೊಂಡಿದೆ. ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುವ ಈ ಕಾಯಿಲೆ, ಮನುಷ್ಯರಿಗೆ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಹೋಗುವುದಿಲ್ಲ!

ಈ ಕಾಯಿಲೆಯ ರೋಗ ಲಕ್ಷಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೇ ಅಥವಾ ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೆ, ಅದೆಷ್ಟೋ ಜನ ನಮ್ಮಲ್ಲಿ ಪ್ರಾಣ ಬಿಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನೂ ಆತಂಕದ ವಿಚಾರ ಏನೆಂದರೆ ಮಧುಮೇಹದ ಮತ್ತು ಹೃದಯದ ಕಾಯಿಲೆಗಳಿಗೆ ಸಾಕಷ್ಟು ಹತ್ತಿರದ ಸಂಬಂಧವಿದೆ ಎಂದು ವೈದ್ಯರು ಎಚ್ಚರಿಸುತ್ತಾರೆ.

ಹೀಗಾಗಿ ಈ ಕಾಯಿಲೆಯಿಂದ ದೂರವಿರಬೇಕೆಂದರೆ, ಅದಕ್ಕೆ ಒಂದೇ ಮಾರ್ಗ ಏನೆಂದರೆ ಆಹಾರದ ಪದ್ಧತಿಯಲ್ಲಿ ಹಾಗೂ ಜೀವನಶೈಲಿಯಲ್ಲಿ ಮಾತ್ರ ಈ ಕಾಯಿಲೆಯ ವಕ್ರದೃಷ್ಟಿಯಿಂದ ಪಾರಾಗಬಹುದು! ಇಲ್ಲಾಂದ್ರೆ ಈ ಕಾಯಿಲೆ ಕಾಣಿಸಿಕೊಂಡ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಿಸಬೇಕಾಗಿ ಬರಬಹುದು.

ಮಧುಮೇಹ ರೋಗಿಗಳು, ಮನೆಯ ಇತರ ಸದಸ್ಯರು ತಿನ್ನುವ ಹಾಗೆ, ಮನಸ್ಸಿಗೆ ಇಷ್ಟವಾಗುವ ಅಥವಾ ಬಾಯಿಗೆ ರುಚಿ ಕೊಡುವ ಆಹಾರ ಪದಾರ್ಥಗಳನ್ನು ತಿನ್ನುವ ಹಾಗಿಲ್ಲ!

ಈ ಬಗ್ಗೆ ನಾವು ನಮ್ಮ ಹಿಂದಿನ ಲೇಖನದಲ್ಲಿಯೂ ಕೂಡ ಸಾಕಷ್ಟು ಬಾರಿ ಹೇಳಿದ್ದೇವೆ. ತಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿಯೂ ಕೂಡ ಕೆಲವೊಂದು ರೀತಿಯ ನೀತಿ ನಿಯಮಗಳು ಇರುತ್ತವೆ! ಇದನ್ನು ಅಚ್ಚುಕಟ್ಟಾಗಿ ಪಾಲಿಸ ಬೇಕಾಗುತ್ತದೆ.

ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಹಾಗೆ ಕೆಲವೊಂದು ಆಹಾರ ಪದ್ಧತಿಯನ್ನು ಜೀವನದಲ್ಲಿ ಅನುಸರಿಸುವು ದರಿಂದ ಮಾತ್ರ ಈ ಕಾಯಿಲೆಯನ್ನು ನಿಯಂತ್ರಣದ ಲ್ಲಿಟ್ಟು ಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ.

ದೀರ್ಘಕಾಲದಿಂದ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ ಬ್ರೊಕೋಲಿ ಅಥವಾ ಕೋಸುಗಡ್ಡೆ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳ ಬಹುದು.

ಇದರಿಂದ ಮಧುಮೇಹ ಕೂಡ ನಿಯಂತ್ರಣಕ್ಕೆ ಬರುತ್ತದೆ ಎಂದು ಸಂಶೋಧ ಕರು ಅಭಿಪ್ರಾಯ ಪಡುತ್ತಾರೆ.

ಇದಕ್ಕೆ ಪ್ರಮುಖ ಕಾರಣ ಈ ತರಕಾರಿಯಲ್ಲಿ ಯಥೇಚ್ಛ ವಾಗಿ ಆಂಟಿಆಕ್ಸಿಡೆಂಟ್ ಅಂಶ ಕಂಡು ಬರುವುದರಿಂದ, ವಿಶೇಷವಾಗಿ ಟೈಪ್ 2 ಮಧುಮೇಹದಿಂದ ಬಳಲುತ್ತಿರು ವವರಿಗೆ, ಈ ತರಕಾರಿ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ.

ಬ್ರೊಕೋಲಿಯಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳು

ಈ ತರಕಾರಿ ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ!

ಪ್ರಮುಖವಾಗಿ ಈ ತರಕಾರಿಯಲ್ಲಿ ವಿಟಮಿನ್ ಸಿ, ವಿಟ ಮಿನ್ ಕೆ, ಪ್ರೋಟೀನ್, ಕಬ್ಬಿಣ, ನಾರಿನಾಂಶ ಮತ್ತು ಪೊಟ್ಯಾಷಿಯಂ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ಶುಗರ್ ಇರುವ ರೋಗಿಗಳಿಗೆ ಇದೊಂದು ಆರೋಗ್ಯಕಾರಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.​

ಆರೋಗ್ಯ ತಜ್ಞರು ಹೇಳುವ ಹಾಗೆ

ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಹಾಗೆ, ಸುಮಾರು ಅರ್ಧ ಕಪ್ ಬೇಯಿಸಿದ ಬ್ರೊಕೋಲಿಯಲ್ಲಿ ಏನಿಲ್ಲಾ ಅಂದ್ರೂ 27 ಗ್ರಾಂನಷ್ಟು ಕ್ಯಾಲೋರಿಗಳು ಮಾತ್ರ ಸಿಗುತ್ತವೆ ಹಾಗೂ ಕೇವಲ 3 ಗ್ರಾಂ ಕಾರ್ಬೋಹೈಡ್ರೇಟ್ ಅಂಶಗಳು ಕಂಡು ಬರುತ್ತದೆ.

ಹೀಗಾಗಿ ಈಗಾಗಲೇ ಸಕ್ಕರೆಕಾಯಿಲೆಯಿಂದ ಬಳಲುತ್ತಿರು ವವರು ಈ ತರಕಾರಿಯನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಆಗುವುದು ಮಾತ್ರವಲ್ಲದೆ, ದೇಹದ ತೂಕ ವನ್ನು ಕೂಡ ಅಚ್ಚುಕಟ್ಟಾಗಿ ನಿರ್ಹಣೆ ಮಾಡಬಹುದು.

ಕೊನೆಯ ಮಾತು

ಮೊದಲೇ ಹೇಳಿದ ಹಾಗೆ ಬ್ರೊಕೋಲಿ ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಈ ತರಕಾ ರಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳ ಜೊತೆಗೆ ಅಪಾರ ಪ್ರಮಾಣದಲ್ಲಿ ವಿಟಮಿನ್ಸ್ ಅಂಶಗಳು, ನಾರಿ ನಾಂಶ ಹಾಗೂ ಖನಿಜಾಂಶಗಳು ಕಂಡು ಬರುತ್ತವೆ.

ಇವೆಲ್ಲವೂ ಕೂಡ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಅಂಶಗಳು ಆಗಿರುವುದರಿಂದ, ವಾರಕ್ಕೆ ಒಮ್ಮೆ ಯಾದರೂ ಈ ತರಕಾರಿಯನ್ನು ಸೇವನೆ ಮಾಡುವುದ ರಿಂದ, ಮಧುಮೇಹವನ್ನು ನಿಯಂತ್ರಣ ಮಾಡಿಕೊಳ್ಳು ವುದರ ಜೊತೆಗೆ, ದೇಹದ ತೂಕವನ್ನು ಕೂಡ ಇಳಿಸಿ ಕೊಳ್ಳಲು ನೆರವಾಗುತ್ತವೆ.

ಪ್ರಮುಖವಾಗಿ ಈ ತರಕಾರಿಯಲ್ಲಿ ನಾರಿನಅಂಶ ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳ ಮಟ್ಟ ಹೆಚ್ಚಾಗಿರುವುದ ರಿಂದ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಅಚ್ಚುಕಟ್ಟಾಗಿ ನಿರ್ವಹಣೆ ಆಗುತ್ತದೆ.

ಪ್ರಮುಖವಾಗಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ ಬರುವುದರ ಜೊತೆಗೆ ಮಧುಮೇಹ ಹಾಗೂ ದೇಹದ ತೂಕ ಕೂಡ ನಿಯಂ ತ್ರಿಸಲು ಸಹಾ ಯಕ್ಕೆ ಬರುತ್ತವೆ.

Related Post

Leave a Comment