ಈ ಸಮಸ್ಸೆಗಳಿದ್ರೆ ಬಾಳೆ ಹೂವು ರಾಮಬಾಣ ಹೇಗೆ ಗೊತ್ತಾ?

ಬಾಳೆಹಣ್ಣನ್ನು ಹೇಗೆ ಬಳಸಬಹುದು ಎಂದು ಹೆಚ್ಚಿನವರಿಗೆ ತಿಳಿದೇ ಇದೆ. ಆದರೆ ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ಬಳಸಿಕೊಂಡು ಬರುತ್ತಿರುವಂತಹ ಬಾಳೆ ಹೂಗಳು ಸಮೃದ್ಧವಾಗಿರುವಂತಹ ಆರೋಗ್ಯ ಗುಣಗಳನ್ನು ಹೊಂದಿದೆ. ಇದನ್ನು ಬಳಸಲು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಕೆಲವರು ಇದನ್ನು ಚಟ್ನಿ, ಸೂಪ್, ಪದಾರ್ಥ ಮತ್ತು ಕರಿದು ಬಳಕೆ ಮಾಡುವರು. ಇದು ಅತ್ಯುತ್ತಮವಾದ ರುಚಿ ಹೊಂದಿದೆ.

ಬಾಳೆ ಹೂಗಳು ಹಾಗೂ ಇದರ ಸಿಪ್ಪೆಯನ್ನು ಕೂಡ ಬಳಕೆ ಮಾಡಬಹುದಾಗಿದೆ. ಹೀಗಾಗಿ ಬಾಳೆ ಹೂವಲ್ಲಿ ಬಿಸಾಕುವಂತಹ ಯಾವುದೇ ಅಂಶಗಳು ಇರುವುದಿಲ್ಲ. ಇದನ್ನು ದಿನಿನಿತ್ಯವೂ ಬಳಸಬಹುದು ಅಥವಾ ಯಾವಾಗಲೊಮ್ಮೆಯಾದರೂ ಬಳಸಿದರೂ ಇದರ ಲಾಭಗಳು ಅದ್ಭುತವಾಗಿದೆ. ಬಾಳೆ ಹೂಗಳ ಲಾಭಗಳು

ಬಾಳೆ ಹೂವನ್ನು ಬಾಳೆಗೊಣೆ ಕತ್ತರಿಸುವ ಮೊದಲೇ ಕೆಲವು ಸಮಯಕ್ಕೆ ಮೊದಲು ತುಂಡು ಮಾಡಿ ಬಿಸಾಕುವರು. ಆದರೆ ಇದನ್ನು ಬಳಸುವ ವಿಧಾನ ಗೊತ್ತಿಲ್ಲದೆ ಹೀಗೆ ಆಗುತ್ತಿದೆ. ಇಂದು ಕೆಲವು ಸೂಪರ್ ಮಾರ್ಕೆಟ್ ಗಳಲ್ಲಿ ಕೂಡ ಇದನ್ನು ಕಾಣಬಹುದು. ಹೀಗಾಗಿ ಇದು ಎಷ್ಟು ಲಾಭಕಾರಿ ಎಂದು ತಿಳಿಯಿರಿ.

ಸೋಂಕು ನಿವಾರಿಸುವುದು

ಬಾಳೆ ಹೂವಿನಲ್ಲಿ ಇರುವಂತಹ ಎಥೆನಾಲ್ ಅಂಶದಿಂದಾಗಿ ಇದು ಸೋಂಕು ನಿವಾರಣೆ ಮಾಡುವುದು. ಇದು ರೋಗಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವುದು. ನಮ್ಮ ದೇಹಕ್ಕೆ ಅತೀ ಹೆಚ್ಚು ಹಾನಿ ಉಂಟು ಮಾಡುವಂತಹ ಬ್ಯಾಸಿಲಸ್ ಸಬ್ಟಾಲಿಸ್, ಬ್ಯಾಸಿಲಸ್ ಸೆರಿಯಸ್ ಮತ್ತು ಎಸ್ಚೆರಿಚಿಯಾ ಕೋಲಿ ಯಂತಹ ಬ್ಯಾಕ್ಟೀರಿಯಾ ದಾಳಿಯನ್ನು ಇದು ತಡೆಯುವುದು.

ಬಾಳೆ ಹೂ ಗಾಯವು ಗುಣಮುಖವಾಗಲು ನೆರವಾಗುವುದು. ಬಾಳೆ ಹೂವಿನ ಸಾರವು ಮಲೇರಿಯಾದ ಪರಾವಲಂಬಿ ಜೀವಿ ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ ಬೆಳವಣಿಗೆಯನ್ನು ಕೂಡ ತಡೆಯುವುದು. ಇದು ಅಧ್ಯಯನಗಳಿಂದಲೂ ಸಾಬೀತು ಆಗಿದೆ.

ಫ್ರೀ ರ್ಯಾಡಿಕಲ್ ಚಟುವಟಿಕೆ ತಗ್ಗಿಸುವುದು

ಫ್ರೀ ರ್ಯಾಡಿಕಲ್ ಚಟುವಟಿಕೆಯು ದೇಹದಲ್ಲಿ ಇದ್ದರೆ ಅದರಿಂದ ಗಂಭೀರವ ಸಮಸ್ಯೆಗಳು ಕಾಡಬಹುದು. ಅದೃಷ್ಟವಶಾತ್ ಬಾಳೆ ಹೂವಿನಲ್ಲಿ ಇರುವಂತಹ ಮೆಥನಾಲ್ ಅಂಶವು ಆಂಟಿಆಕ್ಸಿಡೆಂಟ್ ಗುಣ ಹೊಂದಿದೆ.

ಹೀಗಾಗಿ ಇದು ತುಂಬಾ ಪರಿಣಾಮಕಾರಿಯಾಗಿ ದೇಹಕ್ಕೆ ಆಗುವಂತಹ ಹಾನಿ ತಪ್ಪಿಸುವುದು. ಇದು ಹಲವಾರು ಅನಾರೋಗ್ಯ, ಅಕಾಲಿಕ ವಯಸ್ಸಾಗುವುದು ಮತ್ತು ಕ್ಯಾನ್ಸರ್ ನ್ನು ತಡೆಯುವುದು. ಈ ಹೂವಿನ ಹೆಚ್ಚಿನ ಲಾಭ ಪಡೆಯಲು ಇದನ್ನು ನೀವು ಆರೋಗ್ಯ ಸಪ್ಲಿಮೆಂಟ್ ನಲ್ಲಿ ಬಳಸಿಕೊಳ್ಳಿ

ಋತುಚಕ್ರದ ರಕ್ತಸ್ರಾವ ತಗ್ಗಿಸುವುದು

ಮಹಿಳೆಯರಿಗೆ ಋತುಚಕ್ರದ ವೇಳೆ ಅತಿಯಾದ ನೋವು ಕಾಡುವುದು. ಕೆಲವರಲ್ಲಿ ಪಿಎಂಎಸ್ ಲಕ್ಷಣಗಳು ಕೂಡ ಇರುವುದು. ಇನ್ನು ಕೆಲವರಲ್ಲಿ ಅತಿಯಾಗಿ ರಕ್ತಸ್ರಾವ ಕಾಣಿಸುವುದು. ಬಾಳೆ ಹೂವನ್ನು ಬೇಯಿಸಿ ತಿಂದರೆ ಅದರಿಂದ ಸಮಸ್ಯೆ ದೂರ ಮಾಡಬಹುದು.

ಬೇಯಿಸಿದ ಬಾಳೆ ಹೂವನ್ನು ಮೊಸರಿನ ಜತೆಗೆ ಸೇವಿಸಿದರೆ ಅದರಿಂದ ಪ್ರೊಜೆಸ್ಟೆರಾನ್ ಹಾರ್ಮೋನ್ ದೇಹದಲ್ಲಿ ಹೆಚ್ಚಾಗಿ ರಕ್ತಸ್ರಾವ ಕಡಿಮೆ ಆಗುವುದು.

ಮಧುಮೇಹ ಮತ್ತು ರಕ್ತ ಹೀನತೆ ತಡೆಯುವುದು

ಮಿತ ಪ್ರಮಾಣದಲ್ಲಿ ಬಾಳೆಹೂಗಳನ್ನು ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬಹುದು. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವುದು. ಆದರೆ ಬಾಳೆ ಹೂವಿನಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಮತ್ತು ಹೈಪೊಗ್ಲಿಸಿಮಿಕ್ ಅಂಶವು ಪ್ರಯೋಗಿಕವಾಗಿ ಸಾಬೀತು ಆಗಿಲ್ಲ.

ವಿಟಮಿನ್ ಹಾಗೂ ಖನಿಜಾಂಶವು ಅಧಿಕ

ಬಾಳೆ ಹೂವಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ದವಾಗಿದೆ. ಇದರಲ್ಲಿ ಪೊಟಾಶಿಯಂ ಮತ್ತು ನಾರಿನಾಂಶವೂ ಇದೆ. ಇದರಿಂದಾಗಿ ಇದು ಆರೋಗ್ಯಕಾರಿ ಆಹಾರ ಮತ್ತು ಆರೋಗ್ಯಕಾರಿ ಪೋಷಕಾಂಶಗಳನ್ನು ಒಳಗೊಂಡಿದೆ.

ಮನಸ್ಥಿತಿ ಸುಧಾರಣೆ ಮತ್ತು ಆತಂಕ ನಿವಾರಿಸುವುದು

ಬಾಳೆ ಹೂಗಳನ್ನು ಬಳಸಿಕೊಂಡರೆ ಆಗ ನೀವು ಅತಿಯಾದ ಒತ್ತಡ ಹಾಗೂ ಮನಸ್ಥಿತಿ ಬದಲಾವಣೆ ಯಿಂದಾಗಿ ಖಿನ್ನತೆಗೆ ಒಳಗಾಗುವುದು ತಪ್ಪುತ್ತದೆ.

ಬಾಳೆ ಹೂವಿನಲ್ಲಿ ಮೆಗ್ನಿಶಿಯಂ ಇದ್ದು, ಆತಂಕ ನಿವಾರಣೆ ಮಾಡುವುದು ಮತ್ತು ಮನಸ್ಥಿತಿ ಸುಧಾರಿಸುವುದು. ಇದು ನೈಸರ್ಗಿಕವಾಗಿ ಖಿನ್ನತೆ ವಿರೋಧಿ ಮತ್ತು ಯಾವುದೇ ಅಡ್ಡಪರಿಣಾಮಗಳು ಇದರಿಂದ ಆಗಲ್ಲ.

ಸ್ತನ್ಯಪಾನ ಮಾಡಿರುವ ಮಹಿಳೆಯರಿಗೆ

ಹೆರಿಗೆ ಬಳಿಕ ಕೆಲವರಲ್ಲಿ ಎದೆ ಹಾಳು ಕಡಿಮೆ ಇರುವುದು. ಇದು ಹೆಚ್ಚಿನ ಬಾಣಂತಿಯರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಬಾಳೆಹಣ್ಣಿನ ಹೂಗಳನ್ನು ಬಳಸಿಕೊಂಡರೆ ಆಗ ಎದೆಹಾಲನ್ನು ಹೆಚ್ಚಿಸಬಹುದು.

ಇದೆಲ್ಲವೂ ಬಾಳೆ ಹೂವಿನ ಆರೋಗ್ಯ ಲಾಭಗಳು. ಇದನ್ನು ನೀವು ಬಾಳೆಹಣ್ಣಿನ ಜತೆಗೆ ಆಹಾರ ಕ್ರಮದಲ್ಲಿ ಬಳಸಿದರೆ ಆಗ ಅದ್ಭುತವಾಗಿರುವ ಲಾಭಗಲು ನಿಮಗೆ ಸಿಗುವುದು.ಇನ್ನು ತಡವೇಕೇ? ನೀವು ಆಹಾರ ಕ್ರಮದಲ್ಲಿ ಬಾಳೆ ಹೂವನ್ನು ಬಳಸಿಕೊಳ್ಳಲು ಈಗಲೇ ಆರಂಭಿಸಿ.

Related Post

Leave a Comment